ಕಾವ್ಯ ಸಂಗಾತಿ
ಹನಮಂತ ಸೋಮನಕಟ್ಟಿ
ಶಾಯರಿಗಳು.
ನಾನಷ್ಟ ನಿನ್ನ ಕಣ್ಣಾಗ
ಫಳಫಳ ಹೊಳಿತೀನಿ ಅಂತ ಮಾಡಿದ್ದೆ
ನಿನ್ನ ಹತ್ರ ಬಂದಾಗ ಗೊತ್ತಾತು ನನ್ನ ಕಣ್ಣ ಬೆಳಕಿನ್ಯಾಗ
ನೀನ ಫಳಫಳ ಹೊಳಿತಿಯನ್ನೋದು
ನಿನ್ನ ತುಟಿಯಾಗ ಏನ ತುಂಬೈತಿ
ನೋಡಾಕ ಬಾಳ ಕೆಂಪ ಅನ್ಸತ್ತ
ತುಟಿಗೆ ತುಟಿ ಒತ್ತಿ ಹಿಡದ್ರಂತೂ
ನನ್ನ ಮೈ ಕೈ ಜುಂ ಜುಂ ಅಂತೈತಿ
ಯಾರರ ಮಲ್ಲಿಗೆ ಹೂವ ತಂದು ಕೊಟ್ರು
ನಿನ್ನ ಮಾರುದ್ದ ಜಡಿಗೆ ಹಾಕಬ್ಯಾಡ
ಯಾಕಂದ್ರ ಹೂಗಾರ ಕಟ್ಟಿದ ಮಲ್ಲಿಗಿ ಹೂವಿಗೂ
ನಿನ್ನ ಜಡಿಯಾಗಿದ್ದ ಹೂವಿಗೂ ಹೊಟ್ಟಿ ಉರಿಸಬ್ಯಾಡ
ನನ್ನ ಕಣ್ಣ ತಗದ ಕೂಡಲೆ
ನನ್ನ ಮನಸ್ಸಿಗೆ ಎಷ್ಟ ಬ್ಯಾನಿ ಅಕ್ಕೈತಿ
ನನ್ನ ಮೀಸಿ ಚುಚ್ಚಿದ ಗಲ್ಲ ನರಳೂದು ನೋಡಿ
ಮನಸರ ಹ್ಯಾಂಗ ನೋವ ತಾಳಿಕೊಂತೈತಿ
ನಿನ್ನ ಕೂಡ ನಾನು ಇರಾಕ ಹತ್ತಿದ್ರ
ನಂಗಂತೂ ಏಳೇಳು ಜನ್ಮ ಬೇಕನಸತೈತಿ
ನಿಂಗ ದೇವರು ಏಳ ಜನ್ಮ ಕೊಟ್ಟಿದ್ದು ಕೇಳಿ
ನಿನ್ನ ಬಿಟ್ಟ ಇರಾಕ ನಂಗರ ಹೆಂಗ ಅಕೈತಿ
ಹನಮಂತ ಸೋಮನಕಟ್ಟಿ
Nice