ವ್ಯಾಸ ಜೋಶಿ ಅವರ ಕವಿತೆ-ಈ ನನ್ನ ಬಡತನ

ದೇಶಾವರಿಯ ನಗು
ಮುಖದಲ್ಲಿ ತೋರೋದು
ಈ ನನ್ನ ಬಡತನ.

ಉಳ್ಳವರ ಮುಂದೆ
ಕೈಕಟ್ಟಿ ನಿಲ್ಲಿಸುವದು ,
ಈ ನನ್ನ ಬಡತನ.

ಚಿಕ್ಕ-ಚಿಕ್ಕವರಮುಂದೆ
ಇನ್ನೂ ಚಿಕ್ಕವನಾಗೋದು,
ಈ ನನ್ನ ಬಡತನ.

ಕಂಡ ಕಂಡವರನ್ನೆಲ್ಲ
ಸ್ನೇಹದ ಭಿಕ್ಷೆ ಬೇಡೋದು,
ಈ ನನ್ನ ಬಡತನ.

ಅವರಿವರನೆಲ್ಲ ಕರೆದು
ಮರ್ಯಾದೆ ಕೊಟ್ಟಿದ್ದು,
ಈ ನನ್ನ ಬಡತನ.

ದುಷ್ಟರೆಂದು ಗೊತ್ತಿದ್ದೂ
ಅವರ ಪಟ್ಟಗಟ್ಟಿದ್ದು,
ಈ ನನ್ನ ಬಡತನ.

ಮೋಸಗಾರನೆಂದರಿತೂ
ಅನಿವಾರ್ಯ ಹೊಗಳಿದ್ದು,
ಈ ನನ್ನ ಬಡತನ.

ಸೊಕ್ಕಿದ ಶ್ರೀಮಂತರಿಂದ
ದೂರ ದೂರ ಇರಿಸಿದ್ದು,
ಈ ನನ್ನ ಬಡತನ.

————————-

2 thoughts on “ವ್ಯಾಸ ಜೋಶಿ ಅವರ ಕವಿತೆ-ಈ ನನ್ನ ಬಡತನ

Leave a Reply

Back To Top