ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಎರಡು ಕವಿತೆಗಳು

ಇಲ್ಲ ನೀನು
ಅರಮನೆಯಲ್ಲಿ
ಗುರುಮನೆಯಲ್ಲಿ
ಭವ್ಯ ಕಟ್ಟಡಗಳಲ್ಲಿ
ಅಲ್ಲಿಯೇ ಗಟ್ಟಿಯಾಗಿ
ನೆಲೆಸಿರುವೆ
ಎನ್ನುವ ನಿನ್ನ ಭ್ರಮೆ
ನಿನಗಾಗಿ ಹಪ ಹಪಿಸುತಿದೆ
ಈ ಜೀವ
ನೀನಿಲ್ಲ ಅಲ್ಲಿ
ನೀನಿರುವೆ ನನ್ನ
ಕನಸುಗಳಲ್ಲಿ ಕವನಗಳಲ್ಲಿ
ಭಾವ ಜೀವ ಪ್ರೀತಿಯಲಿ
ಉಸಿರಿನಲಿ
ಬೆಚ್ಚಗೆ ಕುಳಿತಿರುವೆ
ನನ್ನೆದೆಯ ಗೂಡಲ್ಲಿ
ಸ್ನೇಹ ಪ್ರೀತಿಯ
ಜೀವ ನೆಲೆ ಸೆಲೆಯಲ್ಲಿ

****

ಅಣಿಯಾಗು
ಮತ್ತೆ ಕೈ ಹಿಡಿದು
ನಡೆಯಲು
ಭಯ ಬೇಡ ಗೆಳತಿ
ನಾನಿರುವೆ ಜೊತೆಯಲಿ
ನೂರು ಗಾವುದ ದಾರಿ
ನೆನಪಿನ ಸಿಹಿ ಬುತ್ತಿ
ಉಂಡು ಸಾಗುವ ನಾವು
ಬದುಕ ಸೀಮೆಯ ದಾಟಿ
ಕಷ್ಟಗಳ ಏರಿಯಲಿ
ಪ್ರೀತಿಯ ಹೆಜ್ಜೆ ಸಿರಿ
ಗಟ್ಟಿ ಧ್ವನಿ ಜೀವ
ಪ್ರೇಮ ಜಾಲದ ಸೆಲೆ
ಮುಟ್ಟೋಣ ನಾವು
ಮುಕ್ತ ಬಯಲಿನ ಗುರಿ


5 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಎರಡು ಕವಿತೆಗಳು

Leave a Reply

Back To Top