ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ವಿಶ್ವಶಾಂತಿ
ಧರ್ಮಗಳ ಹೆಸರಲಿ ಮುಸುಕಿದೆ ದ್ವೇಷ
ಮುಗ್ಧರನು ಆವರಿಸಿ ವಿಷಮಯ ತ್ವೇಷ
ಉಸಿರನ್ನೇ ಕಸಿದಿದೆ ಒತ್ತಿ ಕತ್ತುಗಳ
ಹಿಜಾಬ್ ನ ಶಾಲುಗಳ ಕಿತ್ತಾಟದ ಕೇಳಿ.
ಅವಿವೇಕಿ ಮನುಜರ ಏನೆನ್ನಲಿ ನಾನು
ಮಾನವತೆ ಮರೆತಂಥ ನೀಚರಲಿ ಇಂದು
ಹಮೀದಾ ಬೇಗಂ ದೇಸಾಯಿ ಕವಿತೆ-ವಿಶ್ವಶಾಂತಿ.
ಕಳಚಿವೆ ಬಾಂಧವ್ಯ ಕೊಂಡಿಗಳು ಮುರಿದು
ಹಗೆತನ ಸಾಧಿಸುವ ಛಲವನ್ನು ಹೊಂದಿ
ನಗುತಿದೆ ಸ್ವಾರ್ಥವದು ಗೆಲುವನ್ನು ಬೀರಿ
ನಲುಗಿದೆ ನೀತಿಯದು ನೋವಲ್ಲಿ ನರಳಿ.
ರಕ್ಕಸರ ಹೃದಯದಿ ಮೂಡಲಿ ಕರುಣೆ
ವಿಶ್ವಶಾಂತಿ ನೆಲೆಸಲಿ ನೀಗಿಸಿ ಬವಣೆ.
ಮನುಜಮತ ವಿಶ್ವಪಥ ನಮ್ಮದೆನ್ನೋಣ
ಮನುಜಕುಲ ಒಂದೆಂಬ ಭಾವ ಬೆಳೆಸೋಣ
ಹಮೀದಾ ಬೇಗಂ ದೇಸಾಯಿ
ಮನಮುಟ್ಟುವ ಸಾಲುಗಳು ಮೇಡಂ