ಕಾವ್ಯ ಸಂಗಾತಿ
ನಿರಂಜನ ಕೇಶವ ನಾಯಕ
‘ಹೋರಾಟ’
ಎಷ್ಟು ದುಡಿದು ಏನು ಪ್ರಯೋಜನ
ಬೆವರ ಹನಿ ಬದುಕ ವನ
ಬೆಲೆ ದೊರಕದಾಗ ನೋವ ಜನನ
ಕಾಡ ಕೂಸು ಕತ್ತಲ ಮನನ
ಹೆಣದ ಭಾರ ಹೊತ್ತ ಜೀವ
ಆರಿದೆ ಅಳಿದುಳಿದ ಆಳದ ತೇವ
ಕಾನನದ ಕೂಗಾದ ಬದುಕ ನೋವ
ಕೇಳದ ಕಿವಿಯಿರಲು ಉಕ್ಕಿದ ಭಾವ
ಒಬ್ಬಂಟಿ ಬದುಕು ಕಷ್ಟದ ಕೂಸು
ಬರಿಯ ನೆರಳು ಬೆಳಕ ಅರಸು
ಒಂದೇ ಭಾವಕೆ ಜೋತುಬಿದ್ದ ಮನಸು
ಜೀವ ಅರಿಯದು ಬೆಳಕ ಹೊಂಗನಸು
ನಿಂತ ನೀರು ಹರಿವ ಅರಿಯದು
ಬಂಡಿಯ ಚಕ್ರ ಹೂತರೆ ಏಳದು
ಸುಳಿಯಲಿ ಸಿಕ್ಕ ಬದುಕ ಗತಿಯಿದು
ಕಾಸು ಕನಸಲೂ ಸಿಗದ ನೋವದು
ನಿರಂಜನ ಕೇಶವ ನಾಯಕ