ಆಗಾಗ್ಗೆ ಹಿಂತಿರುಗಿ ನೋಡಬೇಕು…
ಡಾ ವಿಜಯಲಕ್ಷ್ಮಿ ( ರಮಾ) ಪುರೋಹಿತ

“ಆಗಾಗ್ಗೆ ಹಿಂತಿರುಗಿ ನೋಡಬೇಕು
ಭವಿಷ್ಯದ ಹಾದಿಯಲ್ಲಿ ಸಾಗುತ್ತ.
ಆರೋಗ್ಯದ ಸಂರಕ್ಷಣೆ
ಪ್ರತಿಯೊಬ್ಬ ಮನುಷ್ಯನ ಮಹದಾಸೆ ಏನಾದರೂ ಸಾಧಿಸಬೇಕೆಂಬ ಉತ್ಕಟ ಬಯಕೆ ಇದ್ದೇ ಇರುತ್ತದೆ.ಅದು ಸಂತೋಷಕರ ಸಂಗತಿಯೇ.ಈ ಕಾಲದಲ್ಲಿಯ ಜೀವನ ಆನಂದಮಯ ಹಾಗೂ ತೃಪ್ತಿಕರವಾಗಿರದೇ ಎಲ್ಲೊ ಕಳೆದುಕೊಂಡಹಾಗೆ,ಏನೊ ಹುಡುಕುತ್ತಿರುವ ಹಾಗೆ ಬಹಳ ಜನರನ್ನು ಕಾಣುತ್ತೇವೆ.ಯಾವದರಲ್ಲಿಯೂ ಸಮಧಾನ ಇಲ್ಲ.ಇನ್ನು ಕೆಲವರಿಗಂತೂ ಭಯವೇ ಜೀವನದಲ್ಲಿ ಆವರಿ ಸಿದೆ.ಚಿಕ್ಕವರಿಗೆ ಶಾಲಾ,ಕಾಲೇಜಿನಲ್ಲಿ ಅಂಕಗಳಿಸುವ ತುಡಿತವಿದ್ದರೆ,ಯುವಕರಿಗೆ ಜೀವನೋಪಾಯದ ಚಿಂತೆ ವಯಸ್ಕರಿಗೆ ಅನಾರೋಗ್ಯದ ಛಾಯೆ ಅಷ್ಟೇ ಅಲ್ಲದೇ ತಪ್ಪಿಸಲಾಗದ ಮರಣ ಹತ್ತಿರವಾದಂತೆ ಅವರದೇ ಬೇರೆ ದುಗುಡ,ಆತಂಕ.ಹೀಗಾಗಿ ದೊರಕಿರುವ ಆಯುಷ್ಯದಲ್ಲಿ ಮನುಷ್ಯನಿಗೆ ಕ್ರಮಬದ್ಧವಾಗಿ,ಶಿಸ್ತಿನ ಜೀವನ ಶೈಲಿ ಇದ್ದರೆ ಒಳ್ಳೆಯ ಆರೊಗ್ಯ ಲಭಿಸಿ ಅಂದು ಕೊಂಡ ಸಾಧನೆ ಸಾಧ್ಯ.
ಶರೀರ ಮಾಧ್ಯಂ ಖಲು ಧರ್ಮ ಸಾಧನಂ !!
ಸಾಧನೆ ಮಾಡಬೇಕಿದ್ದರೆ ಆರೋಗ್ಯಕರ ಶರೀರದ ಅತ್ಯವ ಶ್ಯಕತೆ ಇರುತ್ತದೆ.ಒಟ್ಟಿನಲ್ಲಿ ರೋಗ ರಹಿತವಾಗಿರುವದೆಂದ ರೆ,ಮಾನಸಿಕ ಹಾಗೂ ದೈಹಿಕಸ್ವಾಸ್ಥ್ಯಕಾಪಾಡಿಕೊಳ್ಳುವು ದು.ಹಾಗಾದರೆ ಅನಾರೋಗ್ಯ ಇರದೇ ಆರೋಗ್ಯ ಭಾಗ್ಯ ದೊರಕುವ ಬಗೆಯನ್ನು ತಿಳಿಯಲು ಪ್ರಯತ್ನ ಮಾಡೋಣ ಔಷಧಿಗಳ ಬಳಕೆ ತೀರಾ ಅವಶ್ಯಕವಾದಾಗ ಮಾಡಬೇಕು. ಅದನ್ನು ಉಪೇಕ್ಷಿಸುವಂತಿಲ್ಲ. ಆದರೆ ಯಾವ ಔಷಧಗಳು ಅಡ್ಡಪರಿಣಾಮ ಬೀರುವದಿಲ್ಲವೋ ಅವು ಹೆಚ್ಚು ಸೂಕ್ತ.
“ಧರ್ಮಾರ್ಥಕಾಮ ಮೋಕ್ಷಾಣಾಮಾರೋಗ್ಯಂಮೂಲ ಮುತ್ತಮಂ! ರೋಗಾಸ್ತಸ್ಯಾಪಹರ್ತಾರ: ಶ್ರೆಯಸೋ ಜೀವಿತ ಸ್ಯಚ!!”.
ನಮ್ಮ ಭಾರತೀಯ ಸಂಸ್ಕ್ರತಿಯಲ್ಲಿವಪ್ರತಿ ಮನುಷ್ಯನ ಮೂಲ ಉದ್ದೇಶ ಧರ್ಮ,ಅರ್ಥ,ಕಾಮ ಮತ್ತು ಮೋಕ್ಷವ ನ್ನುಪಡೆಯುವದು.ಈ ನಾಲ್ಕು ಮನುಷ್ಯನ ವಶವಾಗಬೇ ಕಾದರೆ ಎಲ್ಲಕ್ಕಿಂತ ಅತಿ ಮುಖ್ಯವಾಗಿ ಬೇಕಾಗಿರುವದು ಒಳ್ಳೆಯ ಆರೋಗ್ಯ.ಅನಾರೋಗ್ಯ ವ್ಯಕ್ತಿಗೆ ಧರ್ಮಕರ್ಮ ಗಳಾಗಲೀ ಸಾಧಿಸುವದಿಲ್ಲ ಹಾಗೂ ಅರ್ಥವ್ಯವಸ್ಥೆಯೂ ದೊರಕುವದಿಲ್ಲ.ಜೀವನದ ಸುಖ ಸಂತೋಷಗಳಿಂದ ಅವನು ದೂರವೇ ಉಳಿಯಬೇಕಾಗುತ್ತದೆ.ಮೋಕ್ಷವಂತು ದೂರವೇ ಉಳಿಯಿತು.ಜೀವನದಲ್ಲಿ ಆರೋಗ್ಯ ಒಂದು ಕಡೆಯಾದರೆ ಉಳಿದೆಲ್ಲಸುಖ,ಸಂಪತ್ತು,ಧನ,ಕೀರ್ತಿ,ಬಲು ದ್ದಿ ಮಟ್ಟ,ಜನಮನ್ನಣೆ ಇತ್ಯಾದಿಗಳೆಲ್ಲವೂ ಇನ್ನೊಂದು ಕಡೆ ತೂಗುತ್ತವೆ.”ಆರೋಗ್ಯವಂತ ಬಡವನ ಬಾಳು ಸಿರಿವಂತ ರೋಗಿಯ ಅಳು” ಇವೆರಡರಲ್ಲಿ ಆರೋಗ್ವಂತನ ಬಾಳೇ ಶ್ರೇಷ್ಠ.ಅನಾದಿ ಕಾಲದಿಂದಲೂ ಭಾರತೀಯರಿಗೆ ಆರೋಗ್ಯ ದ ಕಾಳಜಿ,ಅರಿವು,ಪಾಲಿಸುವ ಸದಭಿರುಚಿ ಇದ್ದೇ ಇತ್ತು. ಅವೆಲ್ಲ ಜೀವನದ ಅವಿಭಾಜ್ಯ ಅಂಗಗಳಾಗಿಯೂ ಇತ್ತು.

ಅದಕ್ಕಾಗಿಯೇ,”ಸ್ವಾಸ್ಥಸ್ಯಸ್ವಾಸ್ಥ್ಯರಕ್ಷಣಂ!ಆತುರಸ್ಯವಿಕಾರಪ್ರಶಮನ!!ಎಂದುಹೇಳಿದ್ದಾರೆ.ಅಂದರೆ:: ಆರೋಗ್ಯವಂತನ ಆರೋಗ್ಯ ನನ್ನು ಕಾಪಾಡಿ ಕೊಂಡು ಹೋಗುವದು ಹಾಗೂ ರೋಗ ಬಂದಾಗ ಅದನ್ನು ಶಮನಗೊಳಿಸುವದು ಎಂದರ್ಥ.
ಆದರೆ ಇಂದಿನ ದಿನಗಳಲ್ಲಿ ಎಲ್ಲರ ಮನೋಭಿಲಾಷೆಗಳು ಶೀಘ್ರಹಣ ಮಾಡುವದು, ಹೆಚ್ಚು ಹಣ ಮಾಡುವದು ಇತ್ಯಾದಿ ಕ್ಷುಲ್ಲಕ ಆಮಿಷಗಳಿಗೆ ಬಿದ್ದು ಆರೋಗ್ಯದ ಪರಿವೆ ಇಲ್ಲದೆ ನಿತ್ಯ ನರಕ ಅನುಭವಿಸುತ್ತಾರೆ.ಅಷ್ಟೇ ಅಲ್ಲದೆ ಬೇ ಗ ಗುಣವಾಗಬೇಕು,ಯಾರಿಗೂ ರಜೆ ಇಲ್ಲ,ಮತ್ತೆ ಮಾರನೆ ದಿನ ಎಂದಿನಂತೆ ಕೆಲಸಗಳಿಗೆ ಹಾಜರಾಗಬೇಕೆಂಬ ಅನಿ ವಾರ್ಯತೆಯೂ ಇರುವದರಿಂದ ತಮ್ಮ ದೇಹದ ಮಾತನ್ನ ಆಲಿಸುವ ಸಹನೆ,ವೇಳೆ ಯಾರಲ್ಲಿಯೂ ಇಲ್ಲ.ಆತುರದ ಮನಸ್ಸಿನಲ್ಲಿ ಯಾವ ಔಷಧಿ ಸೂಕ್ತ ಅಂತ ಯೋಚಿಸದೇ, ಆದರ ಅಡ್ಡಪರಿಣಾಮಗಳನ್ನು ತಿಳಿಯದೇ ಸಧ್ಯಕ್ಕೆ ಆರಾ ಮ ಆದರೆ ಆಯಿತು ಅನ್ನುವ ಮನೋಭಾವದಲ್ಲಿ ನಾವೆಲ್ಲ ಇದ್ದೆವೆ. ಈಗಂತೂ ಔಷಧಿಗಳ ಜಾಹಿರಾತುಗಳು ಸಹಜನ ರನ್ನು ತಪ್ಪು ದಾರಿಗೆಳೆಯುತ್ತವೆ.

ರೋಗ ಬಂದಾಗ ಔಷಧೋಪಚಾರ ಇರಲಿ ಆದರೆ ರೋಗ ಬಾರದಂತೆ ನಮ್ಮ ಹಿಂದಿನವರು ನಡೆದುಕೊಂಡು ಬಂದ ದಾರಿ ಅವರ ತಿಳುವಳಿಕೆ,ಜಾಣ್ಮೆ,ಮೈಬಗ್ಬಿಸಿ ದುಡಿಯುವ ದು,ಹಿತ,ಮಿತ ಮಾತು,ಆಹಾರ ಸೇವನೆ,ನಿದ್ದೆ,ಕಾಯಿಲೆಗೆ ತುತ್ತಾಗದಂತೆ ಅವರು ತೆಗೆಳ್ಳುತಿದ್ದ ಮುಂಜಾಗ್ರತೆ ಎಲ್ಲವ ನ್ನೂ ಅವಲೋಕಿಸಿದಾಗ ನಾವು ಸುಶಿಕ್ಷಿತರು ಎನ್ನಿಸಿಕೊಳ್ಳು ವವರು ಖಂಡಿತ ನಮ್ಮನ್ನು ನಾವೇ ಅರಿಯಬೇಕಾಗಿದೆ.
ಕೆಲವರಂತೂ ಆಹಾರಕ್ಕಿಂತ ಔಷಧಿಯ ಮೇಲೆಯೇ ಅವ ಲಂಬಿತರಾಗಿದ್ದು ಅವರ ಹಣಕಾಸಿನ ಖರ್ಚು,ಔಷಧಿಯ ಬೇಡದ ಪರಿಣಾಮಗಳು ಇತ್ಯಾದಿಯಿಂದ ಮನುಷ್ಯ ಖಿನ್ನ ತೆಯನ್ನು ಹೊಂದುತ್ತಾನೆ. ಭಗವಾನ ಧನ್ವಂತರಿ ಆಯುವೇ ೯ದ ಶಾಸ್ತ್ರದಲ್ಲಿ ಹೇಳಿದಂತೆ
“ಸಮದೋಷ:ಸಮಾಗ್ನಿಷ್ಚಸಮಧಾತುಮಲಕ್ರಿಯಾ: !
ಪ್ರಸನ್ನಾತ್ಮೇಂದ್ರಿಯಮನ: ಸ್ವಸ್ಥಇತ್ಯಭಿದಿಯತೆ!!

ಅರ್ಥ:: ಯಾವ ಮನುಷ್ಯನ ದೋಷ (ವಾತ, ಪಿತ್ತ,ಹಾಗೂ ಕಫ ೩ ದೋಷಗಳು) ಸಮಸ್ಥಿತಿಯಲ್ಲಿದ್ದು,ಅಂದರೆ ಹೆಚ್ಚು ಕಡಿಮೆ ಆಗದೇ,ಯಾರ ಅಗ್ನಿ (ಜೀರ್ಣಶಕ್ಕ್ತಿ),(digestive fire) ಶರೀರದ ಧಾತುಗಳು (bodytissues) ಅಂದರೆ ರಸ ( lymphatic fluid) ,ರಕ್ತ( blood),ಮಾಂಸ (mu scle),ಮೇದ(lipids),ಅಸ್ಥಿ(bone),ಮಜ್ಜಾ(bonema rrow) ಹಾಗೂ ಶುಕ್ರ(sperm/ovum) ಎಲ್ಲವೂ,ಅಷ್ಟೇ ಅಲ್ಲದೇ ಮಲನಿರ್ಹರಣ ಅಂಗಗಳೂ ಕೂಡ ಸರಿಯಾಗಿ ಕಾರ್ಯನಿರ್ವಹಿಸಿದರೆ ಮತ್ತುಆತ್ಮ,ಇಂದ್ರಿಯಗಳನ್ನೂ ಹಾಗೂ ಮನಸ್ಸು ಪ್ರಸನ್ನವಾಗಿಟ್ಟು ಕೊಂಡ ವ್ಯಕ್ತಿ ಮಾತ್ರ ನಿರೋಗಿ,ಆರೋಗ್ಯವಂತ ಸ್ವಸ್ಥ ಅನಿಸಿಕೊಳ್ಳಲು ಸಾಧ್ಯ. ಆಗ ಮಾತ್ರ ಅವನ ಅವಳ ಸಾಧನೆ ಪೂರ್ಣಗೊಳ್ಳುವದರ ಲ್ಲಿ ಸಫಲತೆಯನ್ನು ಕಾಣುತ್ತಾನೆ. ಒಂದು ನೆನಪಿರಲಿ ಆರೋಗ್ಯ ಎಂದರೆ ಬರೀದೇಹ ಸಾಸ್ಥ್ಯವಷ್ಟೇ ಅಲ್ಲ,ಮನ ಸ್ಸಿನ ಆರೋಗ್ಯವೂ ಅಷ್ಟೇ ಪ್ರಾಮುಖ್ಯ ತೆಯನ್ನು ಪಡೆದಿದೆ.”ಇಂದಿನ ನಮ್ಮ ಆಹಾರ ವಿಹಾರ ನಾಳೆಯ ಗುಣಮಟ್ಟದಬದುಕು.”
************
Very informative and nice
V nice article aruna