ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಆಪ್ತರು

ಹೇಳುವವರು ನೂರೆಂಟು ಹೇಳುವರು
ಕೆಲವವರು ಸುಮ್ಮ ಸುಮ್ಮನೆ ದಿನವು
ಮನವನ್ನು ನೋಯಿಸುವರು
ಹೇಳುವವರು ಅವರವರ ಅನಿಸಿಕೆಯ
ತಮಗೆ ತೋಚಿದಂತೆ ಹೇಳುವರು
ನಮ್ಮೊಳಗಿನ ಭಾವನೆಗಳ ಏನನ್ನು
ಅರಿಯದೆ ವಟ ವಟಗುಡುವರು
ಅವರವರ ಅನಿಸಿಕೆಗಳನ್ನು ನಮ್ಮ ಮೇಲೆ
ಬಲವಂತದಿ ಹೇರುವರು
ಎಲ್ಲಾ ವಿಷಯಗಳಲ್ಲಿ ತಾವೇ ಪರಿಣಿತರು
ಎಂಬಂತೆ ಮಾತನಾಡುವರು
ತಮಗೆ ಗೊತ್ತಿರುವುದಷ್ಟೇ ಸತ್ಯ
ಎಂಬಂತೆ ವರ್ತಿಸುವರು
ಶತ್ರುಗಳ ಜೊತೆ ಬೇಕಾದರೂ
ಗುದ್ದಾಟ ನಡೆಸಿ ಗೆಲ್ಲಬಹುದು
ಜೊತೆ ಜೊತೆಗೆ ಇರುವ ಹಿತಶತ್ರುಗಳ
ಹೇಗೆ ನಂಬುವುದು
ನಮ್ಮ ಜೊತೆಗಿದ್ದೇ ನಮಗೇ
ಗುಂಡಿಯ ತೊಡುವರು
ಜೀವನ ಪೂರ್ತಿ ನಾಟಕವಾಡುತ್ತಾ
ವಂಚಿಸುತ್ತಾ ಬದುಕುವರು
ಆಪತ್ಕಾಲದ ಬಂಧು ಎಂಬಂತೆ
ನಟಿಸುತ್ತ ವಿಪತ್ತು ತಂದಿಡುವರು
ಚಿಕ್ಕ ಚಿಕ್ಕ ವಿಷಯಕ್ಕೂ ಕೋಪಿಸಿಕೊಂಡು
ಜಗಳ ಮಾಡುವವರು ಕೆಟ್ಟವರಲ್ಲ
ಅವರೇ ನಿಜವಾದ ನಮ್ಮವರು
ನಮ್ಮ ಹಿತವನ್ನೇ ಬಯಸುವವರು
ಎಲ್ಲದಕ್ಕೂ ನಗುನಗುತ್ತಾ ಸಿಹಿಸಿಹಿಯಾದ ಮಾತನಡುವರು ಖಂಡಿತ ಒಳ್ಳೆಯವರಲ್ಲ
ನಮ್ಮ ತಪ್ಪುಗಳ ಸರಿಪಡಿಸಿ
ತಿದ್ದಿ ತೀಡುವವರೇ
ನಿಜವಾಗಿಯೂ ನಮ್ಮವರು
ಕಷ್ಟ ಕಾಲದಲ್ಲಿ ಕೈಹಿಡಿದು ಮುನ್ನಡೆಸುವವರೇ ನಮ್ಮ ಬದುಕನ್ನು ಸದಾಕಾಲ ಬೆಳಗುವವವರು
ನೋಡಲು ಒರಟು ಒರಟಾಗಿ ಕಂಡರೂ
ನಿಜವಾದ ಅರ್ಥದಲ್ಲಿ ಅವರೇ
ನಮ್ಮ ಆಪ್ತರು ಆಪ್ತರಕ್ಷಕರು
ನಮ್ಮ ಬದುಕಿನಲ್ಲಿ ಅಮೂಲ್ಯ
ರತ್ನಗಳಂತೆ ಇವರು


Leave a Reply

Back To Top