‘ಜೀವದ ಗತಿ’ಡಾ.ಡೋ.ನಾ.ವೆಂಕಟೇಶ ಕವಿತೆ

ಹುಟ್ಟುತ್ತ ಹಳ್ಳದಿಂದ ತನ್ನ ತಾಳ
ಹುಡುಕುತ್ತ ನಾ ಅನಾಮಧೇಯಳು
ಹರಿದು, ದಾಟಿ ಜೀವನದಲ್ಲಿ
ಓರೆ ಕೋರೆಗಳನ್ನು ಕ್ರಮಿಸಿ ಕೋಟೆ
ಕೊತ್ತಲಗಳನ್ನು ಸುತ್ತಾಡಿ
ನಾನೀಗ ಜೀವ ನದಿ!

ಅಸಂಖ್ಯಾತ ಜೀವಗಳಿಗೆ
ಬಾಯಾರಿದವನಿಗೆ ಆಸರೆಯಾಗಿ
ಉಳುವವನಿಗೆ ತನುವಾಗಿ
ನಾನೀಗ ಧನ್ಯೆ!
ಪ್ರಶಾಂತೆ ಮತ್ತು ಪ್ರಖರತೆ

ನನ್ನ ಬಣ್ಣಿಸಿದ ಖಲೀಲ ಜಿಬ್ರಾನರು ಹೇಳುವಂತೆ ನಾನೀಗ
ಅನಾಮಿಕಳು-
ವಿಶಾಲ ಸಾಗರ ಸೇರುತ್ತಿರುವ
ಅನುಭಾವಿಕಳು
ವಿಷಾದ ಮನಸ್ಕನಿಗೆ
ಆಸರೆಯಾದವಳು!
ಯಾರೂ ನೆನೆಯದಿದ್ದರೂ ನನ್ನ
ನಾ ಮತ್ತೆ ಮತ್ತೆ ತೃಪ್ತೆ

ಅನಾಮಿಕಳಾಗಿ ಹುಟ್ಟಿ
ಅನಾಮಿಕಳಾಗಿಯೇ
ಜೀವನದ ಗತಿ ಹಾಡುವವಳು
ಇತಿಶ್ರೀ ಹೇಳುವವಳು!!


5 thoughts on “‘ಜೀವದ ಗತಿ’ಡಾ.ಡೋ.ನಾ.ವೆಂಕಟೇಶ ಕವಿತೆ

Leave a Reply

Back To Top