ಇದೊಂದು ಎಲ್ಲರ ಬದುಕಿನಲ್ಲಿ ಒಮ್ಮೆ ಹಾದುಹೋಗುವ ನಾಮಸ್ಮರಣೆ.
ಸಾವು-ಬದುಕಿನ ಜಂಜಾಟದಲ್ಲಿ ಒಮ್ಮೆ ತೆರೆಗೆ ಬರುವ “ವಿಲನ್” ಪಾತ್ರದಂತೆ!.ಊರಿಗೊಂದು ಸನ್ಮಾನ,ಗೌರವದ ಪ್ರತೀಕದಂತೆ ಸ್ಮಶಾನ!.
ಇದರ ಪರಿಣಾಮವಾಗಿ ಜೀವಿತ ವ್ಯಕ್ತಿಯ ಮೇಲೆ.’ಸಾವು’ ಯಾರಿಗೂ ತಪ್ಪಿದ್ದಲ್ಲ.ಆದರೂ ಶಾಶ್ವತವೆಂಬ ಭ್ರಮೆಯಲ್ಲಿ ಕೂಡಿಟ್ಟು,ಅಂತಿಮವಾಗಿ ಹೇಳ ಹೆಸರಿಲ್ಲದೆ,ಇತಿಹಾಸ ಸೇರುವಂತೆ.ನನಗೊಂದು ಆಶ್ಚಯ ಕಾದಿತ್ರು
ಒಮ್ಮೆ ನನ್ನ ಕರ್ತವ್ಯ ನಿರ್ವಹಿಸುವ ಸ್ಥಳ ಅರಬೈಲ್ ಗೆ ಹೋಗಲು ಬೆಳಗಿನ ಜಾವ ೮.೩೦ ರ ಧರ್ಮಸ್ಥಳ ಬಸ್ ಕಾಯುತ್ತ ನಿಂತಿದ್ದೆ. ಅನಿರೀಕ್ಷಿತವಾಗಿ ಪರಿಚಿತ ಕಾರೊಂದು ನನ್ನ ಮುಂದೆ ನಿಂತಾಗ, ಯಾರಿರಬಹುದು ಎಂದು ಇಣುಕಿದಾಗ,ಡ್ರೈವರ್ ಸೀಟಲ್ಲಿ ‘ಬಾಲಣ್ಣ’ ಕುಳಿತಿದ್ದ! ‘ಟೀಚರ್,ಬರ್ರಿ ನಾನು‌ ಅರಬೈಲ್ ಗೆ ಹೋಗುವವ ಬನ್ನಿ’ ಎಂದಾಗ ಖುಷಿಯಾಯಿತು.ಬಾಲಣ್ಣ ಚಿರಪರಿಚಿತ’. ಅವನಿಗೆ ಧೈರ್ಯವೆ ಅಸ್ತ್ರ!. ಕರೋನಾ ಸಂದರ್ಭದಲ್ಲಿ “ಕರೋನಾ ಲಸಿಕೆ” ಕೂಡ ತೆಗೆದು ಕೊಳ್ಳದೆ,ಕರೋನಾ ಪೀಡಿತ ರೋಗಿಗಳನ್ನು ತುಂಬ ಹತ್ತಿರದಿಂದ ನೋಡಿದವನು.ಕರೋನಾದಿಂದ ಸತ್ತವರ ಅಂತ್ಯಸಂಸ್ಕಾರವನ್ನು ಯಾವ ಭಯವಿಲ್ಲದೇ ಮಾಡಲು ಮುಂದಾದವನು.ಎಷ್ಟು ಬುದ್ದಿವಾದ ಹೇಳಿದರು, ತನ್ನ ಕೆಲಸಕ್ಕೆ ಹಿಂಜರಿಯದವ,ಮನೆ ಮಂದಿಯಿಂದ‌ ಆ ದಿನಗಳಲ್ಲಿ ದೂರನೇ ಇದ್ದ.ಇವನೊಬ್ಬ ವಿಚಿತ್ರ ಮನುಷ್ಯನಾದರೂ, ಸ್ನೇಹಮಯಿ,ಒಳ್ಳೆಯವ  ನಾನು ಬಾಲಣ್ಣ ಅಂತಲೇ ಪ್ರೀತಿಯಿಂದ ಕರೆಯುತ್ತಿದ್ದೆ.

ಕಾರಿನ ಹಿಂದಿನ ಸೀಟನಲ್ಲಿ ಕುಳಿಕೊಳ್ಳಲು ಒಳಹೆಜ್ಜೆ ಇಟ್ಟಾಗ,ಸೀಟ್ ಮೇಲೆ ಹೂವು,ಮಡಿಕೆ,ಬಿಳಿ‌ವಸ್ತ್ರ,ಇತ್ಯಾದಿ ಸಾಮಗ್ರಿಗಳು, ಅಣ್ಣ, ಅವನ್ನೆಲ್ಲ ಸರಿಸಿ,ಕುಳಿತು ಕೊಳ್ಳಲು ಜಾಗ ಮಾಡಿದ್ದ,ಕುಂತ ಮೇಲೆ ಮತ್ತೊಮ್ಮೆ ಆ ಎಲ್ಲ ವಸ್ತುಗಳನ್ನು ನೋಡಿ,ಅಣ್ಣಾ….ಏನಾದರೂ ಹಬ್ಬ ಇದೆಯಾ? ಇದನ್ನೆಲ್ಲ ತಗೊಂಡ ಹೋಗತಿದ್ದಿಯಾ? ಆದ್ರೆ ಈ ಬಿಳಿ ಬಟ್ಟೆ ಯಾಕೆ? ಪಂಚೆನಾ? ಮಡಿಕೆ ಒಂದೇ ಇದೆ,ಹೀಗೆಲ್ಲ ಕೇಳುವಾಗ, ಬಾಲಣ್ಣ. ನನ್ನನ್ನೆ ನೋಡುತ್ತಿದ್ದ!.ಟೀಚರ್, ಇದೆಲ್ಲ ಯಾಕಂತ ಗೊತ್ತಿಲ್ಲವಾ ನಿಮಗೆ? ಅವನ ಪ್ರಶ್ನೆ ಹೇಗಿತ್ತೆಂದರೆ ನನಗೆ ಗೊತ್ತಿಲ್ಲ‌ ಅನ್ನೊದು ಆಶ್ಚರ್ಯದ ಸಂಗತಿ. ನಾನು ಮೂಕ ಬಸವಣ್ಣನಂತೆ ಇಲ್ಲವೆಂದು ತಲೆ ಅಲ್ಲಾಡಿಸಿದೆ. ಟೀಚರ್,ಇದು ‘ಅಂತ್ಯಕ್ರಿಯೆ ವಸ್ತುಗಳು’ ಅಂದಾಗ ದಂಗಾಗಿ ಕೂತುಬಿಟ್ಟೆ!. ಅಯ್ಯೋ…..ದೇವರೇ ಅಂದು ಕೊಂಡು ಮೌನವಾದೆ!. ಊರಲ್ಲಿ ‌ಯಾರೆ ಸತ್ತರು ‌ಅವರ ಅಂತ್ಯಕ್ರಿಯೆಗೆ ಬೇಕಾಗುವ ಎಲ್ಲ ಸಾಮಗ್ರಿಗಳನ್ನು ಮುಕ್ತವಾಗಿ ತರುವಂತವನು ಈ ಅಣ್ಣನೇ ಎಂಬುವುದು ಊರವರ ಮನೆಮಾತು.ಈ ಸಮಯದಲ್ಲಿ ಊರಲ್ಲಿ ಯಾರೋ ದೈವಾಧೀನರಾದರೆಂಬುದು ಅಷ್ಟೇ ದಿಟವಾಗಿತ್ತು.ಇಂತಹ ಸಮಯವನ್ನು ಸಮರ್ಥವಾಗಿ ನಿರ್ವಹಿಸುವವರು ಪ್ರತಿ ಊರಲ್ಲಿ ಇರಬಹುದು.

ನನ್ನ ಪಯಣ ಅಂತ್ಯಕ್ರಿಯೆ ವಸ್ತುಗಳ ಜೊತೆಗೆ ಎಂಬುದು ಈ ದಿನದ‌ ವಿಶೇಷವಾಗಿತ್ತು.ಬದುಕಿರುವಾಗಲೇ ಈ ವಸ್ತುಗಳ ನಡುವೆ ಇರುವ ಭಾಗ್ಯ ಬಂದಿರುವುದು ದೈವೆಚ್ಚೆ.ಎಲ್ಲ‌ ಶಿವಮಯ ಎಂದೆ.
ಸಾವಿಗೆ,ಸವಾಲಾಗುವ ವಸ್ತುಗಳು ಎಷ್ಟು ಮುಖ್ಯ!
ಸತ್ತವರ ಎದೆ ಬಡಿತ, ಬದುಕಿದವರ ಜೀವನಕೆ ಸೂತಕವಾಗುವ ಪರಿಯನ್ನು ಉಹಿಸುವುದು ಕಷ್ಟ ಸಾಧ್ಯ!. ಹೌದಲ್ಲವಾ? “ಸಾವಿರದ ಮನೆಯಿಂದ ಸಾಸಿವೆ” ತಂದ ಹಾಗೆ!. ಅಸ್ತಿರ ಉಸಿರಿಗೆ,ಅಸ್ತಿರ ಜೀವನ.
ನಾಗೇಶಣ್ಣ ಒಂದು ಮೆಸೇಜ್ ಹಾಕಿದ್ದ,”ಮುಕ್ತಿಧಾಮ” ದ ಸ್ವಚ್ಛತೆಗೆ ಕರೆ ನೀಡಿದ್ದ. ನನಗೆ ಹೋಗಬೇಕೆಂಬ ಆತುರ,ಆದರೆ ಎಲ್ಲಿ? ಅದು ಸ್ಮಶಾನ!
ಹೆದರಿಕೆ,ಎಷ್ಟೋ ಜೀವಗಳು‌ ವಯೋಸಹಜವಾಗಿ ಸತ್ತರೆ, ಇನ್ಯಾವುದೋ ಕಾರಣದಿಂದ ಉಸಿರು ಚಲ್ಲಿದವರ ಚಿತೆಗಳು ಉರಿಯಲು ಇನ್ಯಾವುದೋ ಮರಗಿಡಗಳು ಬಲಿಯಾಗುವ ಕ್ಷಣಗಳಿಗೆ ಸಾಕ್ಷಿಯಾಗುವ ಸ್ಮಶಾನದಲ್ಲಿ ಸಮಾಧಿಯಾಗುವ ಶವಗಳಿಗೆ ವಿಶೇಷವಾಗಿತ್ತು.. ಸ್ವಚ್ಚತೆಗೆ ಹೊರಟ ಮನಸ್ಸು ಯಾಕೋ ಹೋಗದಂತೆ ಮೌನವಾಯಿತು. ನಮ್ಮೂರ ಸ್ಮಶಾನದ‌ ಮುಂದೆ “ಮುಕ್ತಿಧಾಮ” ನೋಡಲು‌ ಭಯ,ಮರುಕ ಹುಟ್ಟಿಸುತ್ತದೆ.ನಾನು ನನದಲ್ಲದ ಅಹಂಕಾರ ನಶಿಸಬೇಕೆಂದರೆ ಸ್ಮಶಾನದ “ಸತ್ಯದರ್ಶನವಾಗಬೇಕು”.

“ಸ್ಮಶಾನ ಎಂಬ ಪದವು  ಗ್ರೀಕ್ ಭಾಷೆಯಿಂದ  ಬಂದಿದೆ,ಇದರ ಅರ್ಥ  ‘ ಮಲಗುವ ಸ್ಥಳ ‘ವೆಂದು.ಹಿಂದೂ ಶವದ ದಹನ ಭೂಮಿ. ಇಲ್ಲಿ ಹೆಣಗಳನ್ನು ತಂದು ಚಿತೆಯ ಮೇಲೆ ಸುಡಲಾಗುತ್ತದೆ. ಇದು ಸಾಮಾನ್ಯವಾಗಿ ನದಿ ಅಥವಾ ಜಲರಾಶಿಯ ಹತ್ತಿರ ಹಳ್ಳಿ ಅಥವಾ ಪಟ್ಟಣದ ಹೊರವಲಯದಲ್ಲಿ ಸ್ಥಿತವಾಗಿರುತ್ತದೆ. ಇವು ಸಾಮಾನ್ಯವಾಗಿ ನದಿ ಘಾಟ್‍ಗಳ ಹತ್ತಿರ ಇರುವುದರಿಂದ ಇವಕ್ಕೆ ಸ್ಮಶಾನ ಘಾಟ್ ಎಂದೂ ಕರೆಯಲಾಗುತ್ತದೆ.ಅಲ್ಲಿ ಯಾರು ಹೋಗಲು ಇಷ್ಟ ಪಡುವುದಿಲ್ಲ!.

ಒಂದು ಹಳ್ಳಿಯಲ್ಲಿ ಒಬ್ಬ ವ್ಯಕ್ತಿ,ನಾಲ್ಕು ಜನರು ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಸ್ಮಶಾನಕ್ಕೆ ಹೋಗುವುದನ್ನು ನೋಡಿದನು. ಅನೇಕ ಜನರು ಅವರನ್ನು ಹಿಂಬಾಲಿಸಿದರು ಮತ್ತು ಎಲ್ಲರೂ ” ರಾಮ್ ನಾಮ್ ಸತ್ಯ ಹೈ, ಹರಿ ಕಾ ನಾಮ್ ಸತ್ಯ ಹೈ ” ಎಂದು ಜಪಿಸುತ್ತಿದ್ದರು. ಮೌನವಾಗಿ ಅವರನ್ನು ನೋಡುತ್ತಿದ್ದ ಈ ವ್ಯಕ್ತಿ ಆಶ್ಚರ್ಯಚಕಿತನಾಗಿ ಅವರು ” ರಾಮ್ ನಾಮ್ ಸತ್ಯ ಹೈ, ಹರಿ ಕಾ ನಾಮ್ ಸತ್ಯ ಹೈ ” ಎಂದು ಏಕೆ ಹೇಳುತ್ತಿದ್ದಾರೆಂದು ಯೋಚಿಸುತ್ತಿದ್ದನು. ಗ್ರಾಮಸ್ಥರ ಬಳಿಗೆ ಬಂದು, “ನೀವು ಯಾಕೆ ರಾಮ್ ನಾಮ್ ಸತ್ಯ ಹೈ, ಹರಿ ಕಾ ನಾಮ್ ಸತ್ಯ ಹೈ ಎಂದು ಹೇಳುತ್ತಿದ್ದೀರಿ ?”.ಎಂದು ಕೇಳಿದಾಗ, ಜನರು ಇವನನ್ನು ಹುಚ್ಚ ಎಂದು ಭಾವಿಸಿದರು ಆದರೆ ದೇವರು ಮಾತ್ರ ಸತ್ಯ ಎಂದು ಅರ್ಥ ಎಂದು ವಿವರಿಸಿದರು. ಆಗ ಆ ವ್ಯಕ್ತಿ, “ಈಗಾಗಲೇ ಸತ್ತಿರುವ ಮನುಷ್ಯನಿಗೆ ಇದು ಏಕೆ ಬೇಕು?” ಒಬ್ಬ ವಯಸ್ಸಾದ ಸಹೋದ್ಯೋಗಿ ಉತ್ತರಿಸಿದ್ದು ಸತ್ತ ಮನುಷ್ಯನಿಗೆ ಅಲ್ಲ, ಆದರೆ ಸ್ಮಶಾನದವರೆಗೆ ಅವನನ್ನು ಹಿಂಬಾಲಿಸಿದ ನಾವೆಲ್ಲರೂ ಸಾವು ಅನಿವಾರ್ಯ ಮತ್ತು ದೇವರೇ ಅಂತಿಮ ಸತ್ಯ ಎಂದು ನಮಗೆ ನೆನಪಿಸಿಕೊಳ್ಳುವುದು.

ಜಗತ್ತಿನಲ್ಲಿ ಸಾವಿರಾರು ಕೊಟಿ ಜನರು ಇಹಲೋಕ ತ್ಯಜಿಸಿದರು, ಅವರೆಲ್ಲರ ಪಳೆಯುಳಿಕೆ ಈ ಭೂಮಿಯಲ್ಲಿ ಸ್ಥಿರವಾಗಿದೆ.ಮುಂದಿನ  ತಲೆಮಾರಿಗೆ ವರ್ಗಾವಣೆ.ನಾವೆಲ್ಲ ಅಸ್ತಿತ್ವ ಇಲ್ಲದ ನೀರ ಮೇಲಿನ ಗುಳ್ಳೆಯಂತಿರುವ ಜೀವಗಳು.ಯಾವಾಗ? ಯಾವ ಕ್ಷಣದಲ್ಲಿ ಕಣ್ಮರೆಯಾಗಬಹುದೆಂಬುದನ್ನು ಉಹಿಸಲು ಆಗದ ನಮಗೆ “ಸ್ಮಶಾನ ವಾಸಿ ಈಶ್ವರನ” ಪರಿಕಲ್ಪನೆಗೆ ನಿಲುಕಬಹುದೇ?.

ಇಷ್ಟೆಲ್ಲಾ ಅರಿತಿದ್ದರೂ,ಸ್ಮಶಾನ ತನ್ನದೇ ಆದ ರೌದ್ರತೆಯ,ಆದ್ರತೆಯ ತವರೂರು.ಆದರೆ ಇವತ್ತು ಸ್ಮಶಾನದಲ್ಲೂ‌‌ ಒತ್ತುವರಿ ಪ್ರಕರಣಗಳು ಮತ್ತು ‌ಊರಿಗೆ‌ ಸರಿಯಾದ‌ ನಿರ್ವಹಣೆಯಿಲ್ಲದ‌ ಸ್ಮಶಾನಗಳು.ಭಯದ ಮತ್ತು ಅನೈತಿಕ ವ್ಯವಹಾರ ನಡೆಯುವ ಕೇಂದ್ರಗಳಾಗಿ ಮಾರ್ಪಟ್ಟಿರುವುದು‌ ಆತಂಕಕಾರಿ ವಿಷಯ!.ಪ್ರತಿ ಧರ್ಮದ ಸ್ಮಶಾನ‌ಕ್ಕೆ‌ ಅದರರದ್ದೆ ಆದ ಸಂಪ್ರದಾಯಗಳಿವೆ,ರೀತಿ ನೀತಿಗಳಿವೆ.ಬದುಕಿದ್ದಾಗ ಏನೆಲ್ಲ ಸಾಧಿಸಿರಬಹುದು,ಆಟ ಮುಗಿದ ಮೇಲೆ ಮೌನದ ಮೆರವಣಿಗೆಯಲ್ಲಿ ಸ್ಮಶಾನ ಸೇರುವಾಗ ಆರ್ಭಟಿಸುವ ಗುಂಗು,ದಿನ ಕಳೆದಂತೆ, ಎಲ್ಲ ಮರೆತು ಪುನಃ ವರ್ಷಕ್ಕೊಮ್ಮೆ ಸಮಾಧಿಯ ಪೂಜಿಸಿ ಬರುವ ಸಮಯ ಮರೆತು ಮನೆಗಷ್ಟೆ ಸೀಮಿತವಾಗಿ ಕಾಲಕ್ರಮೇಣ ಅದು ಮರೆಯಾದರೆ ವಿಶೇಷವೆನಿಲ್ಲ!.

ಅನೇಕ ಕಡೆಗಳಲ್ಲಿ ಸ್ಮಶಾನದ ಮುಂಭಾಗದಲ್ಲಿ, ಅಂಗಡಿಗಳು ಹುಟ್ಟಿ ಕೊಂಡಿವೆ.ಹೆದರಿ,ನಡುಕ ಬರುತ್ತಿದ್ದ ಕಾಲವೊಂದಿತ್ತು.ಸ್ಮಶಾನದ ಆಸುಪಾಸು ಯಾರು ಸಂಜೆಯಾದಂತೆ ಯಾರು ತಿರುಗುತ್ತಿರಲಿಲ್ಲ. ನೂರೆಂಟು ಕಥೆಗಳು,ನೂರಾರು ದೆವ್ವಗಳನ್ನು ಹುಟ್ಟಿ ಹಾಕಿದ್ದಂತೂ ಸತ್ಯ.
ಕಟ್ಟು ಕಥೆಗಳಿಗೆ ರೆಕ್ಕೆ ಪುಕ್ಕ ಬಂದಂತೆಲ್ಲ ತಲೆಯೆತ್ತಿದೆಯಂದರೆ ತಪ್ಪಾಗದು!. ತಮಾಷೆ ಮಾಡಿದ್ದಿದೆ,ಸ್ಮಶಾನದಲ್ಲಿ ‌ದೆವ್ವ,ಭೂತಗಳಿಲ್ಲ, ಅವೆಲ್ಲ ಧಾರಾವಾಹಿಯಲ್ಲಿ ಸಕ್ರಿಯವಾಗಿರುವುದರಿಂದ ಸ್ಮಶಾನಗಳು ಶಾಂತವಾಗಿವೆ!.ಆದರೆ ಆಧುನಿಕತೆಯು ಮತ್ತು ಶಿಕ್ಷಣದ ಅರಿವಿನಿಂದಾಗಿ ಭಯವನ್ನು ಕೆಲವೊಂದು ಸಲ ಒರೆಗೆ ಹಚ್ಚಿ ನೋಡುವ ಮನೋಭಾವ ಬೆಳೆದಿದೆ.

ನಮ್ಮೂರ ಸ್ಮಶಾನದ ಮುಂದೆ ಅಂಗಡಿಗಳು ‌ಅದರ ಹಿಂದುಗಡೆ ಸ್ಮಶಾನ “ಮೂರಡಿ,ಆರಡಿಯ ಸೈಟ್ ಗಳು ಶಾಶ್ವತವಾಗಿ ಲಭ್ಯವಿದೆ ಎಂಬ ಬೋರ್ಡ್ಗಳು;ಮುಂಜಾಗ್ರತಾ ಕ್ರಮಕ್ಕೆ ಕಾಯ್ದಿರಿಸಲು ಕೋರಿದೆ ಎಂಬ ಪ್ರಕಟಣೆಗಳು” ಮುಂದಿನ ದಿನಗಳಲ್ಲಿ ಕಂಡುಬಂದರೆ ಆಶ್ಚರ್ಯ ಪಡಬೇಕಾಗಿಲ್ಲ!.ಜನಸಂಖ್ಯೆ ಹೆಚ್ಚಾದಂತೆಲ್ಲ,ಸ್ಮಶಾನದಲ್ಲಿ ‌ಗೋರಿಗಳ‌ ಅರ್ಪಾಟ್ಮೆಂಟ್ ಶುರುವಾದರೆ ವಿಶೇಷವಿಲ್ಲ!.ಸತ್ಯ ದರ್ಶನ, ಜೀವನದ ನಿತ್ಯದರ್ಶನವಾದರೆ ಬದುಕು ಆಸೆ ಆಮಿಷಗಳಿಂದ ಮುಕ್ತವಾಗಬಹುದೆಂಬ ವಿಚಾರ ಅಷ್ಟೇ.ಸಾವನ್ನು ಗೆಲ್ಲುವಂತಹ ದೈವಿಪುರುಷರಂತೂ ಅಲ್ಲವೇ ಅಲ್ಲ!… ಸ್ಮಶಾನದ ಪರಿಕಲ್ಪನೆ ಮಗು ಹುಟ್ಟಿದಾಗಿಂದ, ಚಟ್ಟದವರೆಗೆ ಸಾಗುವ ಸಾರ್ಥಕ ಬದುಕಿಗೆ ಒಂದು ಹೌದು,ಇನ್ನೊಂದು ಅಲ್ಲ ಎಂಬೆರಡು ಪದಗಳು ನಡುವೆ ಬದುಕುವ ಜೀವಿಯ ಅಂತಿಮ ಪಯಣ…ಸ್ಮಶಾನದತ್ತ!…


9 thoughts on “

  1. ಆಹಾ…ಅತೀ ಸುಂದರ ರಿ……..ವಾಸ್ತವ ಚಿತ್ರಣ……….ತುಂಬ ಇಷ್ಟ ವಾಯಿತು..ಇನ್ನೂ ಈ ತರಾ ಹೆಚ್ಚಿನ ಲೇಖನ ಬರೆಯಿರಿ.

  2. ಬದುಕಿನ ವಾಸ್ತವ ಬರಹ ರೂಪದಲ್ಲಿ ಎದುರು ನಿಂತಂತೆ ಇದೆ….ಅರ್ಥಪೂರ್ಣ ಲೇಖನ

  3. ಮೇಡಂ ನಿಮ್ಮ ಲೇಖನ ಬಹಳ ಅಧ್ಬುತವಾಗಿದೆ. ನೀವು ಉಲ್ಲೇಕಿಸಿದ ವ್ಯಕ್ತಿಗಳು ನಿಜವಾಗಿ ಸಮಾಜ ಸೇವಕರೆ.

  4. ನಿಮ್ಮ ಈ ಲೇಖನ ಮನಸ್ಸನ್ನ ಪ್ರಶ್ನೆ ಮಾಡಿಸುತ್ತದೆ. ಸಾಧುವಿನ ಮಾತು ನೆನಪಾಗ್ತಿದೆ. ಓ… ಮನುಜ ನಿನ್ನ ಅಹಂ, ಸ್ವಾರ್ಥ ಹೋಗಬೇಕಾದ್ರೆ ದೇವಸ್ಥಾನಕ್ಕೆ ಹೋಗೋ ಬದಲು ಪ್ರತಿದಿನ ಸ್ಮಶಾನಕ್ಕೆ ಹೋಗುತ್ತಿರು. ಜೀವನ ಸಾರ್ಥಕ್ಯ ಪಡೆ ಎಂದಿರುವರು. ಮನೋಜ್ಞವಾದ ಲೇಖನ ಮೇಡಂ.

    ✍️ ಬಸವರಾಜ ಎಚ್.ಎಸ್. ಮುಖ್ಯ ಶಿಕ್ಷಕರು. ಕೋಶಾಧ್ಯಕ್ಷರು. ಕೇಂದ್ರ ಕನ್ನಡಸಾಹಿತ್ಯ ವೇದಿಕೆ, ಹಾಸನ

Leave a Reply

Back To Top