ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅವಳೊಂದು ಕಮಲದ ಹೂವಿನಂತೆ
ಆ ಹೂವೇ ನನ್ನ ಮನದ ಮಾತುಗಳಂತೆ
ಅವಳೊಂದು ಕನಸಿನ ಕೆಂಪು ತಾರೆಯಂತೆ
ಆ ತಾರೆಯೇ ನನ್ನ ಕಲ್ಪನೆಯ ತಾವರೆಯಂತೆ..!!

ಅವಳೊಂದು ಸಕ್ಕರೆಯ ಗೊಂಬೆಯಂತೆ
ಆ ಗೊಂಬೆಯೇ ನನ್ನ ಕವಿತೆಯ ಸಾಲುಗಳಂತೆ
ಅವಳೊಂದು ಕಣ್ಣೊಟದ ಮಾಯೆಯಂತೆ
ಆ ಮಾಯೆಯೇ ನನ್ನೋಳಗಿನ ಛಾಯೆಯಂತೆ..!!

ಅವಳೊಂದು ಆ ಅಲೆಗಳ ಒಳಗಿನ ಶಿಲೆಯಂತೆ
ಆ ಶಿಲೆಯೇ ಆ ಋತುವಿನ ಮನದ ಮಾತುಗಳಂತೆ
ಅವಳೊಂದು ಬಿಸುವ ತಂಗಾಳಿಯ ತಂಪಿನಂತೆ
ಆ ತಂಪೇ ನನ್ನ ಕಣ್ಣೋಳಗಿನ ಸಿಹಿ ನೋಟದಂತೆ..!!

ಅವಳೊಂದು ಮೇಘ ಮಂದಾರದ ಸಂದೇಶದಂತೆ
ಆ ಸಂದೇಶದೋಳಗಿನ ಸಾಲುಗಳೆಲ್ಲವೂ ಪರಿಮಳದಂತೆ
ಅವಳೊಂದು ಗಂಧರ್ವ ಲೋಕದ ರಾಣಿಯಂತೆ
ಆ ರಾಣಿಯೇ ನನ್ನ ಮನವ ಕದ್ದಿರುವ ದೇವತೆಯಂತೆ..!!

——————-

About The Author

Leave a Reply

You cannot copy content of this page

Scroll to Top