ಎ.ಎನ್.ರಮೇಶ್. ಗುಬ್ಬಿ ಅವರ ಕವಿತೆ-ಮರ್ಮ.!

ಕಣ್ಣೀರಿಗೆ ಕೊಡುವ
ಕಾರಣಗಳು..
ಸೋಲಿಗೆ ಹೇಳುವ
ಸಬೂಬುಗಳು..
ವೈಫಲ್ಯಕೆ ನೀಡುವ
ನೆಪಗಳು..

ಜಗವ ತೃಪ್ತಿಪಡಿಸಿ
ಮೆಚ್ಚಿಸಲಿಕ್ಕಷ್ಟೆ.!
ಜನರ ಬಾಯಿಮುಚ್ಚಿಸಿ
ಸುಮ್ಮನಿರಿಸಲಿಕ್ಕಷ್ಟೆ.!

ಹೊರಗಿನ ಮಂದಿಯ
ಕಣ್ಣಿಗೆ ಬಟ್ಟೆ ಸುತ್ತಬಹುದು.!
ಒಳಗಣ ದನಿಯ
ದಮನ ಮಾಡಲಾಗದು.!
ಅಂತಃಚಕ್ಷುವಿಗೆ ಪಟ್ಟಿಕಟ್ಟಿ
ಮರೆಮಾಚಲಾಗುದು.!

ಪ್ರತಿ ಬದುಕಿನಾ..
ಅಂತರಂಗದ ಸತ್ಯಮಿಥ್ಯ
ಅವರವರ
ಆತ್ಮಸಾಕ್ಷಿಯಷ್ಟೇ ಬಲ್ಲುದು.!!
ಪ್ರತಿ ಜೀವಭಾವದ
ಆಂತರ್ಯದಾ ಗುಟ್ಟುರಟ್ಟು
ಅವರೊಳಗಣಾ..
ಅಂತರಾತ್ಮನಷ್ಟೇ ಬಲ್ಲನು.!!


Leave a Reply

Back To Top