ಕಾವ್ಯ ಸಂಗಾತಿ
ಡಾ.ಬಸಮ್ಮ ಗಂಗನಳ್ಳಿ
ಸಾಗರ ಸಂಗಮ
ಪ್ರೀತಿಯ ಕಡಲೆಡೆಗೆ
ನದಿಯೊಂದು ಸಾಗಿ
ಬಳುಕುತ, ಬಾಗುತ
ಬೀಗುವ ರಭಸವು..
ಸರಸರನೆ ಹರಿವ
ಹಾವಿನ ಡೊಂಕು
ತಗ್ಗು ದಿನ್ನೆ ,ಬೆಟ್ಟ
ಏರಿ ಇಳಿವ ಕಂದರ..
ಏನು ಚೆಂದ! ಹೊಳೆ
ಎಂಥ ಅಂದದ ನಡೆ
ಬಾಗು ಬಳುಕಿನ ಸಿರಿ
ಒಳಗೆ ಹರಿವ ಝರಿ..
ಉಕ್ಕಿ ಬರುವ ಭಾವ
ಅವಸರ, ಧಾವಂತದ
ಯಾವುದೋ ಸೆಳೆತವು
ನಿಲ್ಲಲಾಗದ, ತವಕವು..
ಸಾಗರ ಗಾನ ಮುರಳಿ
ಮೊರೆಯುವ ತೆರೆಗಳು
ಇದಿರುಗೊಳಲು ನದಿಗೆ
ಅಂಚು ದಾಟಿ ತೋರಣ..
ನವಿರು ನೀರ ಅಲೆಗಳು
ಹೊಳೆ ಮೆತ್ತನೆ ಪಾದಕೆ
ಹಿತ ನೀಡುವ ನಿನಾದವು
ಮಧುರ ಪ್ರೇಮ ಸಂಗಮ..
————————————————————————————————
ಡಾ.ಬಸಮ್ಮ ಗಂಗನಳ್ಳಿ
Beautiful poem Madam
ಧನ್ಯವಾದಗಳು
Best
ಕವಿತೆ ಸೂಪರ್ ಮೇಡಂ. ನದಿ,ಸಾಗರ ಸಂಗಮದ ಪ್ರತಿಬಿಂಬವನ್ನು ಚಂದವಾಗಿ ವಿವರಿಸುವ ಕವಿತೆ.