ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
ಒಂದು ಮೌನದ ಗುರುತು
ಒಂದು ಮೌನದ ಗುರುತು
ನೆಟ್ಟ ಎರಡು ಕಂಬ
ದಣಪೆಯಾಗಿ ನಿಂತುಕೊಂಡು
ಎಲ್ಲಾ ಕಾಣುವ ಬಿಂಬ
ಒಂದು ಬೇರಿನ ಅರಿವು
ನಿಂತು ಸಾಗುವ ಹರಿವು
ಬಂದು ಹೋಗುವ ಮಾತು
ಉಳಿದು ಕಾಯುವ ಸೇತು
ಬಂಧದೊಳಗಿನ ತಂತು
ಎಲ್ಲವೂ ಸರಳ ನೇರ
ಮಾತಾಗುವ ಭಾವ
ನೋವಿನ ಭಾರದ ತೂಕ
ಸಾಲಾಗುವ ಕವಿತೆ
ಪೂರ್ಣತೆಯ ವಾಸ್ತವ
ಸ್ಥಿತಿ ಗತಿಗಳ ಸ್ಥಿರತೆ
ಬದುಕಿ ಬಾಳುವ ಒರತೆ
ದಣಪೆಯ ಮೌನ
ಜೀವಿತದ ಸುತ್ತ
ಸರಿದು ಹೋದ ಹೆಜ್ಜೆಗೆ
ಉಳಿದ ಸಣ್ಣ ಉಳಿವಿಗೆ
ನಾಗರಾಜ ಬಿ.ನಾಯ್ಕ
ಪ್ರತಿ ಸಾಲಿಗೂ ಜೀವ
ಉಕ್ಕಿ ಹರಿಯುವ ಭಾವ .
ರಾಮಮೂರ್ತಿ ನಾಯಕ.