ವೇಣು ಜಾಲಿಬೆಂಚಿ ಅವರ ಗಜಲ್

ನಿನ್ನ ‌ಚೂಪಾದ ತುಟಿಗಳ ಮಧ್ಯೆ ಆ ದುಂಬಿಗೇನು‌ ಕೆಲಸ
ಮಿಂಚಂಥ ಹೂ ದಳಗಳ‌ ಮಧ್ಯೆ ‌ಆ ದುಂಬಿಗೇನು‌ ಕೆಲಸ

ಮತ್ತೆ ಮತ್ತೆ ಸುಳಿವ ಆ‌ ಕಡಲ್ಗಾಲುವೆಯ ಅಲೆ ಮೋಹಕ
ಸುರಿವ ಇಬ್ಬನಿ ಹನಿಗಳ ಮಧ್ಯೆ ಆ ದುಂಬಿಗೇನು‌ ಕೆಲಸ

ಅಂಬರದಂಚನು ದಾಟಿ ನಿಗೂಢವನು ಭೇದಿಸುವ ತವಕ
ಇರುಳು ತಬ್ಬಿದ ತಾರೆಗಳ ಮಧ್ಯೆ ಆ ದುಂಬಿಗೇನು‌ ಕೆಲಸ

ನಯನಾಜೂಕು ನವಿಲ ಸೊಬಗು ನುಣುಪಾದ ಚೆಲುವು
ಕಿಟಕಿಯಂಥ ಕಣ್ಣೆವೆಗಳ‌ ಮಧ್ಯೆ ಆ ದುಂಬಿಗೇನು‌ ಕೆಲಸ

ಜಾಲಿ ಕನಸುಗಳ ಹೊಳೆಯಲಿ ಕಳೆದುಹೋಗುವ ದಿನ
ಲಾಲಿ ಹಾಡುವ ದನಿಗಳ ಮಧ್ಯೆ ಆ ದುಂಬಿಗೇನು‌ ಕೆಲಸ


Leave a Reply

Back To Top