ಕಾವ್ಯಸಂಗಾತಿ
ನಾಗರಾಜ ಜಿ. ಎನ್. ಬಾಡ ಅವರಕವಿತೆ
ಸಖಿ
ಸಖಿ ನಿನ್ನ ಜೊತೆಗೆ
ನಾನು ಪರಮ ಸುಖಿ
ಇತಿಮಿತಿಯೊಳಗೆ ನಾವು
ಸುಖಿಸೋಣ
ಬೇಕಿಲ್ಲ ಬೆಟ್ಟದಷ್ಟು
ನಿರೀಕ್ಷೆ ಆಕಾಂಕ್ಷೆ
ಆಗಾಗ ನಡೆಯುವುದು
ತಾಳ್ಮೆಯ ಪರೀಕ್ಷೆ
ಎಲ್ಲವನ್ನೂ ಜಯಿಸಿ
ಮುಂದೆ ಸಾಗೋಣ
ಇರುವುದಲ್ಲೇ ಸಂತೃಪ್ತಿಯ
ಪಡೆಯೋಣ
ಬರುವ ನಾಳೆಗಳ
ನಗು ನಗುತಾ ಎದುರಿಸೋಣ
ನಿನ್ನ ಹೂ ನಗುವೇ
ನನಗೆ ಹಬ್ಬ
ಬೇಕಿಲ್ಲ ನಮಗೆ ಬೇರೆ
ಯಾವುದೇ ಗೊಡವೆ
ಪ್ರೀತಿ ವಿಶ್ವಾಸವಿರಲಿ
ನಮ್ಮ ನಡುವೆ
ಬೇಕಿಲ್ಲ ನಮಗೆ ಅರಮನೆ
ಆಗದಿರಲಿ ಬದುಕು
ಚಿಂತೆಯ ಸೆರೆಮನೆ
ನಮಗೇಕೆ ಯಾರದೋ
ಅಂತೆ ಕಂತೆಗಳ ಚಿಂತೆ
ನೆಮ್ಮದಿಯಲಿ ಮುಗಿಸೋಣ
ಜೀವನದ ಸಂತೆ
ಬಂದು ಹೋಗುವ ನಡುವೆ
ಇರಲಿ ಸಂತೃಪ್ತಿಯ ಕಿರುನಗೆ
ನಾಗರಾಜ ಜಿ. ಎನ್. ಬಾಡ