ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಸೂರ್ಯನನ್ನೂ ಮರೆಮಾಡಿದ ಮೋಡಗಳೆನ್ನ ಕೆಣಕುತಿವೆ
ಚುಕ್ಕಿ ತಾರೆ ಚಂದ್ರರನ್ನೂ ಬಚ್ಚಿಟ್ಟ ರಾತ್ರಿಗಳೆನ್ನ ಕೆಣಕುತಿವೆ

ಹಗಲುಗನಸುಗಳಲೂ ಬಂದು ಬಂದು ಮಂಪರಿಸುತಿವೆ
ಸಂಜೆ ತಂಗಾಳಿಯು ತಂದ ಸಂದೇಶಗಳೆನ್ನ ಕೆಣಕುತಿವೆ

ಹೊರಳಾಡಿದತ್ತ ನೀ ಕಚಗುಳಿ ಇಟ್ಟಂತೆ ಮುತ್ತಿಟ್ಟಂತೆ
ಸುರಿವ ಮಾಗಿದ ಸೋನೆಮಳೆ ಹನಿಗಳೆನ್ನ ಕೆಣಕುತಿವೆ

ಸಾಗುವ ದಾರಿಯುದ್ಧ ಕೈ ಬಿಡದೆ ನಡೆಯುತಿರುವ ಹಾಗೆ
ಹುಣ್ಣಿಮೆ ನೊರೆಹಾಲ ಬೆಳದಿಂಗಳ ಬೆಳಕೆನ್ನ ಕೆಣಕುತಿದೆ

ಸರಸಸಲ್ಲಾಪದಲಿ ಸವಿ ಮಾತುಗಳ ಸುಗ್ಗಿ ಮಾಡಿಸಿದಂತೆ
ತಾಯಿ ಒಡಲ ಹಚ್ಚ ಹಸುರಿನ ಗಿಡಮರಗಳೆನ್ನ ಕೆಣಕುತಿವೆ

ರಮಿಸಿ ಮುತ್ತು ಮಳೆಗರೆದು ಬರಸೆಳೆದು ತಬ್ಬಿಕೊಂಡಂತೆ
ಅರಳಿದೂರಿನ ದಳ ಪರಾಗಗಳ ಸೊಬಗೆನ್ನ ಕೆನೆಕುತಿದೆ

ಸ್ಪರ್ಶಸುಖದಿ ಹರ್ಷಗೊಳಿಸಿದ ಅನುಳ ಎದೆ ಜಲ್ಲೆನಿಸಿದೆ
ಬೀದಿ ದೀಪಗಳ ಮಂದಬೆಳಕು ಅಣಕಿಸೆನ್ನ ಕೆಣಕುತಿದೆ


2 thoughts on “ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

Leave a Reply

Back To Top