ಕಾವ್ಯ ಸಂಗಾತಿ
ಮಾಳೇಟಿರ ಸೀತಮ್ಮ ವಿವೇಕ್
ಕಿರು ಕವಿತೆಗಳು
ಕಣ್ಣನು ಮಿಟುಕಿ
ಕೈಯಲಿ ಮೊಟಕಿ
ಚುಟುಕಿಗೆ ತಡಕಿ
ನಕ್ಕಳು ಮುದುಕಿ
ಸೊಪ್ಪು ಹುಡುಕುತ್ತಿದ್ದಳು ಕಾಂತಾರದಲ್ಲಿ ಸುಮತಿ/
ಮಹಿಷನ ದಂತದಂತಿತ್ತು ಆಕೆಯ ದಂತಕಾಂತಿ/
ಒಪ್ಪುತಿರಲಿಲ್ಲ ಮುಗುದೆಯ ಮದ್ದನ್ನು ಅವಳ ಪತಿ/
ಕಾರಣವಾಗಿತ್ತು ಮೊಗದ ಅಂದ ಕೆಡಿಸಿದ್ದ ಅವಳ ದಂತ ಪಂಕ್ತಿ/
ಬೆಳಂಬೆಳಗ್ಗೆ ಬೇಕೆಂದಳು ನಲ್ಲೆ ಕಾಸಿನ ಸರ|
ನಲ್ಲ ನಗುತ ಬಾಗಿ ನೋಡಿದ ಕ್ಯಾಲೆಂಡರ|
ನುಡಿದ, ಆನಂದವಾಯಿತು ಕೇಳಿ ನಿನ್ನ ಸುಸ್ವರ|
ಒಡನೆ ಪೋಣಿಸಿ ಕೊಟ್ಟ ಕಾಸಿನ ಸರ ವರ್ಣಿಸುತ್ತ ನೇಸರ|
ಮುಂಗಾರು ಮಳೆಗೆ ಉಕ್ಕಿ ಹರಿವಾಗ ಕಾಣುವ ನೆರೆ ಪ್ರಕೃತಿ ಸಹಜ/
ಅಣೆಕಟ್ಟು ಕಟ್ಟಿ, ಬೆಟ್ಟ ಗುಡ್ಡ ಸಮ ತಟ್ಟಿ ಹೇಳುತ್ತಾನೆ ಬುದ್ಧಿಜೀವಿ ಇದು ಸೃಷ್ಟಿತಾಪ/
ಒಳ ಮರ್ಮ ಅರಿತು-ಮರೆತು ನಡೆದವರಿಗೆಲ್ಲ ಅಂದೇನು ಫಲ ಪಾಪ /
ಅಸಹಜ ನೆರೆಜರಿಗೆ ಜನಜಾನುವಾರುಗಳ ಬಲಿಯೊಂದಿಗೆ ಆರಿತಲ್ಲ ಊರಿನ ದೀಪ /
ಮನಸ್ಸು ಗತ್ತುಗಾರ
ಶರೀರ ಗಾಳಗಾರ
ಇವಕ್ಕೆ ನೀಡಿ ಸಂಸ್ಕಾರ
ಆಗ ಬದುಕು ಸುಂದರ
ಪತ್ರ ತಲುಪಬೇಕಿತ್ತು
ಅಜ್ಜನ ಪ್ರೇಯಸಿಯ ಮೊಮ್ಮಗನ ಹತ್ತಿರ…
ತಲುಪಿದ್ದು ಅಜ್ಜಿಯ ಪ್ರಿಯತಮನ ಮೊಮ್ಮಗನ ಹತ್ತಿರ….
ಎಲ್ಲ ನಾನು ಕೇಳುತ್ತಿದ್ದ ಅಜ್ಜಅಜ್ಜಿಕಥೆಯ ಪರಿಣಾಮ….
ಕೊನೆಗೆ ಕಥೆ ಕೇಳಿ ಸಿಕ್ಕಿದ್ದು ಅವರಿಬ್ಬರನ್ನು ಒಂದು ಮಾಡಿದ ತಿಲೋತಮ…
ಶರಾಬು, ಸಿಗರೇಟು ಚಟ್ಟ ಏರಿಸುವುದೆಂದು ತಿಳಿದೂ ಬಯಸಿದ್ದು /
ಸಂಸಾರ ಸುಖವಾಗಿರಲೆಂದು ರೋಗಬಡಿದರೂ ದುಡಿಮೆ ಬಯಸಿದ್ದು/
ಹೀಗೆ ಎಲ್ಲರೂ ಹಣ, ಗುಣವನ್ನೆಲ್ಲಾ ಬಯಸಿದ್ದು ತಮ್ಮ ಮನಸ್ಸಿನ ಕುಷಿಗೆಂದು/
ಆ ಕುಷಿಯ ಆರಂಭ ಮುಗುಳ್ನಗುವಿನಲ್ಲಿ ಅಂತ್ಯ ವಿಕೃತ ನಗುವಿನಲ್ಲಿದೆ ಎಂದೆಂದು/
ಅಮೃತ ಧಾರೆ
ಪ್ರೀತಿ ಇದ್ದರೆ
ವಿಷದ ತೊರೆ
ದ್ವೇಷ ವಿದ್ದರೆ
ಹಸಿರಿನಿಂದ ಉಸಿರಾಡಿದೆ ಪ್ರಕೃತಿಯ ರಾಶಿ ರಾಶಿ ಜೀವ ಜಂತು ಖಗ ಮಿಗ….
ವಿಪರ್ಯಾಸವೆಂದರೆ ಧರೆ ಬಗೆವ ನರನ ವಿಕೃತಿಗೆ
ನರಳುತ್ತಿದೆ ಕಣ್ಣಿಗೆ ಕಾಣುವ ಸ್ವರ್ಗ ಈ ಭೂಜಗ….
ಮಾಳೇಟಿರ ಸೀತಮ್ಮ ವಿವೇಕ್
Supper