ಕಾವ್ಯ ಸಂಗಾತಿ
ಡಾ.ಯಲ್ಲಮ್ಮ ಕೆ
‘ಬಾಡಿಗೆ ಮನೆ ಬಾಡಿದ ಮುಖ’
ಬಾಡಿಗೆ ಮನೆ ಬಾಡಿದ ಮುಖ
ಬಾಡಿಗೆ ಮನೆಗಾಗಿ
ಬಾಗಿಲು ಬಾಗಿಲು ಅಲೆಯುವ
ಕೆಲಸ
ಬೆಳಿಗ್ಗೆಯಿಂದಲೇ ಆರಂಭ
ಬಡಕಲು ದೇಹದಲ್ಲಿ
ಬೆಳಿಗ್ಗೆ ಎದ್ದು
ಬಡಬಡ ಹೆಜ್ಜೆ ಇಡುತ್ತಾ
ಹೆಜ್ಜೆ ಹೆಜ್ಜೆಗೂ
ಕಟ್ಟಿರುವ ಮನೆ ಬಾಗಿಲಿಗೆ ಅಲೆದದ್ದು
ಸುಸ್ತೋ ಸುಸ್ತು
ಗುಂಪು ,ಒಂಟಿ,ಮೇಲು,
ನೆಲ ಅಂತಸ್ತು,ಒಂಟಿ, ಜೋಡು, ಮೂರು ಹಾಸಿಗೆ
ಮನೆ ಮನೆಗಳ ಮುಂದೆ
ನೇತಾಡುವ ಬಾಡಿಗೆಗಾಗಿ ನಾಮಫಲಕಗಳು
ಒಂದು ಫಲ ಕೊಡಲಿಲ್ಲ
ಹೊಸ ತಳಿಯ ವಿಧ್ಯುತ್
ಮೋಟಾರ್ ಸೈಕಲ್ ಪ್ರದರ್ಶನ ಮಳಿಗೆ
ಅಂಟಿಕೊಂಡ ಆನೆ ಮಾರ್ಗ
ರಥ,ಬಂಡಿ,
ಉಗಿ ಬಂಡಿ ಬೀದಿಗಳು
ದಾಯಾದಿಗಳಾಗಿ ಯುದ್ದಕ್ಕೆ
ನಿಂತಂತಿದ್ದವು,ಈ ಹಾಳು ಮುಖಕ್ಕೆ
ಎಡ ಬಲ
ಮೂಲೆ ಕೊನೆ ಮೊದಲು
ದುರಸ್ಥಿಯಾಗದ
ಮಹಾರಾಜ ಕಾಲುವೆಯ ಮೇಲೆ
ಒತ್ತುವರಿ ಮಾಡಿ ಕಟ್ಟಿದ
ನೂರಾರು ಕೋಟಿಯ ಬೆಲೆ ಉಳ್ಳವೂ
ಬೇರೇನೂ ಹೇಳಲಿಲ್ಲ
ಒಂಟಿ ಎಂಟಿಬಿ ಇಟ್ಟಿಗೆಯ
ಮನೆಗಳು ಮುಖಕ್ಕೆ
ಮನೆ ಖಾಲಿ ಇಲ್ಲ ಎಂದು ಉತ್ತರಿಸುತ್ತಲೇ
ಇದ್ದವು
ಕಣ್ಣು ದ್ವಾರಕ್ಕೆ ಚುಚ್ಚಿದಾಗ
ಏಳಾಯಿತು ಎಂಟಾಯಿತು
ಗಡಿ ನೋಡಿದರೆ
ಎಂತಾಯಿತೆಂದುನಿಂತು ನೋಡಿ ಬೆಪ್ಪನಂತಾಗಿ
ತೀರದ ಒಳ ನೋವು
ತೋರುಗೊಡದೆ ತಾರೆ ತೋರದ
ಮೋಡಕ್ಕೆ ದೃಷ್ಟಿ ನೆಟ್ಟು
ತೆಪ್ಪಗಾದೆ
ಇನ್ನೂ ಕಚೇರಿಗೆ
ಹೋಗುವ ಸಮಯ ನನಗೆ ನಾನೇ
ಆಜ್ಞಾಪಿಸಿ
ಮಜ್ಜನವಿಲ್ಲದ ಮೈಮೇಲಿನ ಬೆವರು
ಮ್ಯಾಪ್ಲೋರಿಗೆ ಒರೆಸಿ
ಒಗೆದದ್ದೆ ಒಗೆದದ್ದು ಜನ ನೋಡಿ
ಮತ್ತದೇ ಸಾಗಿತು
ಮನಸ್ಸು ಭಾರವಾಗಿ ಇಗಿರುವ
ಬಾಗಿಲು ತೆರೆದ ಬಾಡಿಗೆ
ಖಾಲಿ ಮಾಡುವ ತನಕ
ಸ್ವಂತ ಮನೆಗೆ
ಅವಸರದಿ ಬಂದಾಗ ಮಕ್ಕಳದು
ಹುಡುಗಾಟ
ನನ್ನವಳದು ಮುಖ ನೋಡಿದಾಗ
ಯಾರಿಗೂ
ಹೇಳದ ತೊಳಲಾಟ
ಡಾ.ಯಲ್ಲಮ್ಮ ಕೆ