ಇಮಾಮ್ ಮದ್ಗಾರ್ ಅವರ ಕವಿತೆ-ಕನಸು

ಅರಳಿದೆದೆಯಲಿ
ಕುಣಿವ ಮನದಲಿ
ಕನಸಿಗೇನು ಕೊರತೆ ?
ಹರಿವಾಗ ನನ್ನೆದೆಯಲಿ
ನಿನ್ನೊಲವ ಒರತೆ

ನಕ್ಕಷ್ಟೂ ಖಾಲಿಯಾಗದ
ಮುಗ್ದ ನಗುವಿದೆ
ನೀ ನಿನ್ನ ಮೌನವ
ಯಾರಿಗಾದರೂ
ಮಾರಿಬಿಡು ಈಗ
ಎನನ್ನೂ ಹೇಳಬೇಡ
ಸುಮ್ಮನಿದ್ದು ಬಿಡು

ನಾನು ಹಣತೆ
ನೀನು ಬತ್ತಿ
ತೈಲವಾಯಿತು ಪ್ರೀತಿ
ಮತ್ತೇಕೆ ಮುನಿಸು
ಬೆಳಗಲಿ ನಂಬಿಕೆಯ ಜ್ಯೋತಿ

ದಿಕ್ಕು ಗಳಿಲ್ಲದ ಊರು
ನಿನಗೆ ಸಿಕ್ಕೇ ಸಿಗಬಹುದು
ನೀ ನನಗೆ ಸಿಕ್ಕಹಾಗೇ !

ಪಾತಾಳವಾದ ನೆಲ !
ಜಡವಾಗಿದ್ದ ಚೈತನ್ಯ !
ಕುಪ್ಪಳಿಸಿ ಕುಣಿದಾಡುವದು
ನನ್ನ ಹಾಗೇ !

ಸಹನೆಯ ಪರಿಚಯ
ವಾದರೂ ಮಾಡಿಕೋ
ಆಕಾಶ ವಾಗಲು
ಅವಸರವೇಕೆ ?
ನೆಪ್ಪಿರಲಿ
ದಿಕ್ಕುಗಳೇ ಇಲ್ಲದೂರಲ್ಲಿ
ನಮ್ಮ ಮಿಲನೋತ್ಸವ


Leave a Reply

Back To Top