ಕಾವ್ಯ ಸಂಗಾತಿ
ಸುಮಾ.ಗಾಜರೆ
ಭಾವನೆಗಳಸವಾರಿಯಲ್ಲಿ
ಬಾಳ ಪಥದಲಿ ಭವ್ಯ ಬೆಳಕಿರೆ
ಸಕಲವ ಕಾಣಬಹುದು
ಕತ್ತಲೆಯನು ಸರಿಸಬಹುದು
ಒಡಲಾಳದಲಿ ಅಡಗಿರುವ
ನೋವುಗಳನೆಲ್ಲ ನೀಗಿ
ನಿಟ್ಟುಸಿರು ಬಿಡುವುದಾದರೂ ಹೇಗೆ?
ಕುಳಿತು ಏಕಾಂಗಿಯಾಗಿ
ಹರಿಸಿದ ಕಣ್ಣ ಹನಿಗಳು
ಇಂಗುವುದಾದರೂ ಹೇಗೆ?
ಮಾತುಗಳಿಲ್ಲದ ಬರೀ ಮೌನ
ಮನದ ಸಾರಥಿಯಾಗಿರಲು
ದನಿ ಹೊರಡುವದಾದರೂ ಹೇಗೆ?
ಹೃದಯದಿ ಕಾಪಿಟ್ಟ ನೆನಹುಗಳು
ತುಳಿದಷ್ಟು ಚಿಗುರುತಿರಲು
ಮರೆಯುವದಾದರೂ ಹೇಗೆ?
ಹೊಂಗಿರಣ ಕಾಣದಿರಲು
ಸುಮದ ಮೇಲೆ ಸುರಿದ
ಇಬ್ಬನಿ ಕರಿಗೀತಾದರೂ ಹೇಗೆ?
ಆದರೂ ಬದುಕಬೇಕಿದೆ ಇಲ್ಲಿ
ಭಾವನೆಗಳ ಸವಾರಿಯಲ್ಲಿ
ಎಲ್ಲವ ಮರೆತು ಅನಿವಾರ್ಯತೆಯಲಿ
ಸುಮಾ.ಗಾಜರೆ
Super mam by
Savita Deshmukh
Thank you mam
ಸೂಪರ್ ಮೇಡಂ