ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಮಾಧಾನವು
ಇದ್ದಲ್ಲಿ,ಸುಖ-ದುಃಖ
ಎರಡೂ ಇಲ್ಲ.
*
ಪ್ರೇಮ ಸಾಗರ
ಮುತ್ತುಗಳ ಆಗರ
ಈಜಿದವಗೆ.
*
ನನ್ನ ಪ್ರೀತಿಯ
ಧೈರ್ಯದಿಂದ ಹೇಳಿದೆ,
ಕನಸಿನಲ್ಲಿ.
*

ನಮ್ಮ ಮನಸು
ಕನ್ನಡಿಯಂತೆ,ಎಂದೂ
ಸುಳ್ಳು ಹೇಳದು.
*

ಸುತ್ತ ಬೆತ್ತಲೆ-
-ಜನರ ಮಧ್ಯೆ, ಹುಚ್ಚ
ಬಟ್ಟೆಯುಟ್ಟವ.
*
ನಷ್ಟವಿಲ್ಲದೇ
ಹಂಚಿಬಿಡೊ ಸಂಪತ್ತು
ಒಳ್ಳೆಯ ಮಾತು.
*
ಮೌನಕ್ಕೂ ಸಹ
ಸಾವಿರ ಅರ್ಥೈಸುವ
ಜನರೇ ಹೆಚ್ಚು

About The Author

Leave a Reply

You cannot copy content of this page

Scroll to Top