ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಕನಸಿನ ಬೀಜ.
ಬಿತ್ತಿರುವೆ
ನನ್ನ ಕನಸಿನ
ಬೀಜವೊಂದನು
ಹದ ಮಾಡಿದ ನನ್ನೆದೆಯಲ್ಲಿ
ನಂಬುಗೆಯ ಜಲವೂಡಿ ;
ಇನ್ನೂ ಮೊಳೆತಿಲ್ಲ…ಅದೇಕೋ..
ಜವುಗು ತುಂಬಿಹುದೇ
ಅವಿಶ್ವಾಸ ಕಲೆತು..?ಒಣಗಿಹುದೇ ಎದೆಯ ನೆಲವು
ಒರಟು ಭಾವ ಬೆರೆತು..?
ಮುರುಟಿಗೊಂಡಿಹುದು
ಬಿತ್ತಿದ ಬೀಜ ಬಾಡಿ..
ಇರಲಿ ಬಿಡು..
ಭರವಸೆಯ ಎರಡು
ಹನಿಯುದುರಿದಾಗ
ಹಸಿಯಾದ ಎದೆಯಲಿ
ಬಾಡಿದ ಬೀಜ ಮೊಳೆತು
ಚಿಗುರೀತು ತಲೆ ಎತ್ತಿ…ಅಲ್ಲವೇ..
ಹಮೀದಾಬೇಗಂ ದೇಸಾಯಿ