ಅಂಕಣ ಸಂಗಾತಿ
ಅನುಭಾವ
ಅಕ್ಕ ಮಹಾದೇವಿ ವಚನಗಳ ವಿಶ್ಲೇಷಣೆ -02
ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ
ಅಂಗವ ಲಿಂಗ ಮುಖದಲ್ಲಿ ಅರ್ಪಿಸಿ
ಅಂಗ ಅನಂಗವಾಯಿತ್ತು
ಮನವ ಅರಿವಿಂಗರ್ಪಿಸಿ ಮನ ಲಯವಾಯಿತ್ತು
ಭಾವವ ತೃಪ್ತಿಗರ್ಪಿಸಿ ಭಾವ ಬಯಲಾಯಿತ್ತು
ಅಂಗ ಮನ ಭಾವವಳಿದ ಕಾರಣ ಕಾಯ
ಅಕಾಯವಾಯಿತ್ತು
ಎನ್ನ ಕಾಯದ ಸುಖ ಭೋಗವ ಲಿಂಗವೆ
ಭೋಗಿಸುವನಾಗಿ
ಶರಣ ಸತಿ ಲಿಂಗ ಪತಿಯಾದೆನು ಇದು ಕಾರಣ
ಚೆನ್ನಮಲ್ಲಿಕಾರ್ಜುನನೆಂಬ ಗಂಡನ
ಒಳ ಹೊಕ್ಕು ಬೆರಸಿದೆನು
ಅಕ್ಕಮಹಾದೇವಿಯರ
12ನೇ ಶತಮಾನ ಮೊದಲ ಕವಯತ್ರಿ.ಯೋಗಾಂಗ ತ್ರಿವಿಧಿ ಬರೆದದ್ದು ,ಯೋಗದ ಬಗ್ಗೆ ತಿಳಿಸುವ ಕೃತಿಯಾಗಿದೆ .
ಬಾಲ್ಯದಲ್ಲಿ ಇರುವಾಗಲೇ ಅರಿವಿನ ಜ್ಞಾನದ ಗಂಡನನ್ನು ಹುಡುಕುವ ಅಕ್ಕನ ಭಾವ ಸಂವೇದನೆ ಇಡೀ ಭೂಮಂಡಲವೇ ಮನ ಕಲುಕುವಂತೆ ಮೂಡಿ ಬಂದ, ಅಕ್ಕನ ವಚನಗಳ ಅಧ್ಯಾತ್ಮದ ಚಿಂತನೆಯ ವಚನಗಳ ಆಳದ ಅರಿವು ನಮಗೆ ಆಗೇ ಆಗುತ್ತದೆ .
ಅಮೂರ್ತ, ನಿರಾಕಾರ ಆ ಚೆನ್ನಮಲ್ಲಿಕಾರ್ಜುನನನ್ನು ತನ್ನ ಗಂಡನೆಂದು ಹುಡುಕುವ ಅಕ್ಕನ ಮನ ಭಾವ ನಿವೇದನೆಯು ಎಂಥವರನ್ನೂ ಮೂಕ ವಿಸ್ಮಯಗೊಳಿಸಿ ಬಿಡುತ್ತದೆ .
ಅವಳಲ್ಲಿ ಕಂಡು ಬರುವ ಭಾವ ತೀವ್ರತೆಯು ಹರಿಯುವ ಶುದ್ಧ ಮನದ ಕೊಳದ ನೀರಿನಂತೆ ನಿಶ್ಯಬ್ದ.
ಕಟ್ಟಿಕೊಂಡ ಗಂಡ ಅಧ್ಯಾತ್ಮ ಸಾಧನೆಯ ನೆಪದಿಂದ ಬಿಟ್ಟು ಹೋಗುವುದು ವೈರಾಗ್ಯದ ಲಕ್ಷಣವಾಗುವುದಾದರೆ ಕಟ್ಟಿಕೊಂಡ ಗಂಡನನ್ನು ತನ್ನ ಅಧ್ಯಾತ್ಮ ಸಾಧನೆಗಾಗಿ ಹೆಣ್ಣು ಬಿಟ್ಟು ಹೋಗುವುದೂ ವೈರಾಗ್ಯ ಯಾಕೆ ಆಗುವುದಿಲ್ಲ
ಕೌಶಿಕ ಎನ್ನುವ ವಿರಕ್ತ ತೊರೆದು ,ಜ್ಞಾನದ ಗಂಡ ಚೆನ್ನಮಲ್ಲಿಕಾರ್ಜುನನನ್ನು ಕಾಣುವುದು ಅಧ್ಯಾತ್ಮ.
ಗುರು ಬಂಧು ,ಲಿಂಗ ವರ, ನಾನು ವಧು ಎನ್ನುವ ಭಾವ ಅಕ್ಕನದು .
ಅಂಗವ ಲಿಂಗ ಮುಖದಲ್ಲಿ ಅರ್ಪಿಸಿ ಅಂಗ ಅನಂಗವಾಯಿತ್ತು .
ಅಂಗ ಮನ ಅಳಿದ ಕಾರಣ ಕಾಯ ಅಕಾಯ ವಾಯಿತು
ಅಕ್ಕಳು ತನ್ನ ಕಲ್ಪನಾತೀತವಾದ ಸಮಾಜದಿಂದ ಹೊರ ಬಂದ ಅಕ್ಕಳು ದೇಹ ಭಾವವನ್ನು ತೊರೆದು
ಆ ಅಮೂರ್ತ ಚೆನ್ನಮಲ್ಲಿಕಾರ್ಜುನ ನಿರಾಕಾರ ಮೂರ್ತಿಯೊಂದಿಗೆ ಮದುವೆಯಾಗಿರುವೆ ಎಂಬ ಭಾವ ಅಂತರ.ಆ ಭಾವ ತೀವ್ರತೆಯ ಅಂತರ ಕುಗ್ಗಿ ಹತ್ತಿರ ಬಂದಂತೆ ಆಗುತ್ತದೆ ಅಕ್ಕನಿಗೆ .
ತನ್ನ ಅಂಗವೆಲ್ಲ ಲಿಂಗಮಯವಾಗಿ
ಅಂಗ ಅನಂಗವಾಗಿ ಹೋಗುತ್ತದೆ .
ಮನವ ಅರಿವಿಂಗರ್ಪಿಸಿ ಮನ ಲಯವಾಯಿತ್ತು
ಭಾವವ ತೃಪ್ತಿಗರ್ಪಿಸಿ ಭಾವ ಬಯಲಾಯಿತ್ತು
ಅಂಗ ಮನ ಭಾವವಳಿದ ಕಾರಣ ಕಾಯ ಅಕಾಯವಾಯಿತ್ತು
ಶಿವಯೋಗದ ಲಿಂಗ ಧ್ಯಾನದಲ್ಲಿ
ಅರಿವು ಎನ್ನುವ ಗುರುವು ಆಚಾರ ಎಂಬ ಲಿಂಗ ಹಾಗೂ ಅನುಭಾವವೇ ಜಂಗಮ ಎಂದು ನಂಬಿದ ಶರಣರು .
ಅಕ್ಕನ ಈ ಒಂದು ವಚನದಲ್ಲಿ ಲಿಂಗ ಮತ್ತು ಅಂಗ ಎರಡೂ ಬೇರೆ ಅಲ್ಲ ,ಎನ್ನುವ ಭಾವ ಮೂಡಿದಾಗ
ಕಾಯದ ಮೇಲೆ ಇರುವ ಅಭಿಮಾನ ಎಲ್ಲವೂ ಅಳಿದುಹೋಗುತ್ತದೆ .
ಮನಸ್ಸು ಜಾಗೃತ ಸ್ಥಿತಿಗೆ ತಲುಪಿ ,
ಅರಿವಿನ ಪ್ರಜ್ಞೆ ಮೂಡಿಸಿ ಭಾವ ಮತ್ತು ಮನ ಲಯದ ಸ್ಥಿತಿಗೆ ತಲುಪುವ ಸಮ್ಯಕ್ ಜ್ಞಾನ.
ಮನವನ್ನು ಅರಿವಿನ ಗುರುವಿಗೆ ಅರ್ಪಿಸಿ ಲಯವಾಗಿತ್ತು ನೋಡಾ ಚೆನ್ನಮಲ್ಲಿಕಾರ್ಜುನಾ ಎನ್ನುವಳು ಅಕ್ಕ .
ಒಟ್ಟಿನಲ್ಲಿ ಅಕ್ಕನ ನಿರಾಕಾರದ ಅಮೂರ್ತದ ಗಂಡನಾದ ಲಿಂಗದೊಂದಿಗೆ ಒಂದಾಗಿ ,ಲೌಕಿಕ ಹಾಗೂ ಪಾರಮಾರ್ದಿಕದಿಂದ ದೂರ ಇದ್ದು, ಶರಣ ಸತಿ ಲಿಂಗ ಪತಿ ಎನ್ನುವ ಭಾವ, ಅರಿವನ್ನು ಒಳಹೊಕ್ಕು ಬೆರೆತುಕೊಳ್ಳುವ ಭಾವ. ಅಮೋಘವಾದದ್ದು. ಅಪ್ರತಿಮವಾದದ್ದು ,ಮತ್ತು ಅಗೋಚರವಾದದ್ದು .
ಆದ್ಯರ ಅರವತ್ತು ವಚನ ಅರವತ್ತು ಜನ ಹೇಳುವ ವಿಚಾರವನ್ನು ಅಕ್ಕಮಹಾದೇವಿಯ ಒಂದು ವಚನಗಳಲ್ಲಿ ನಾವು ಕಾಣಬಹುದಾಗಿದೆ .
ಅಕ್ಕನ ದೇಹ,ಮನ ,ಭಾವವೆಲ್ಲ ಲಿಂಗಮಯ.
ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ
ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ
ಸರ್ಕಾರಿ ಪದವಿಪೂರ್ವ ಕಾಲೇಜು ಖನಗಾಂವ
ಪ್ರಾಚಾರ್ಯರು
ಇವರು ಮೂಲತ:ಬೆಳಗಾವಿ ಜಿಲ್ಲೆಯ ಮುರಗೋಡದವರಾಗಿದ್ದು, ಸರಕಾರಿಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇವರ ಪ್ರಕಟಿತ ಕೃತಿಗಳು ನಾಲ್ಕು:
1ಮೌನಗಳೇ ಮಾತನಾಡಿ
2ಕನಸುಗಳ ಜಾತ್ರೆ
3ಸಂತೆಯೊಳಗಿನ ಅಜ್ಜಿ
4ಬದುಕೇ ಒಂದು ಹೊತ್ತಿಗೆ5 ನೆನಪಿನ ಅಂಗಳದಲ್ಲಿ
ಪ್ರಕಟಣೆಗೆ ಸಿದ್ಧವಾಗಿರುವ ಕೃತಿಗಳು ಇರುವ ಕೃತಿಗಳು
1ನನಗೆ ಇಂದು ಒಂದು ಕನಸಿದೆ
2 ಕೆಸರೊಳಗಿನ ಕಮಲ
3ಕಾವಲುಗಾರ
5 ಸವಿ ಮನ
6 ಅಭಿಮಾನಿ
7 ಗಾಯತ್ರಿ ಸಣ್ಣ ಕಥೆ
8 ಸಂಗ್ರಹ ಗ್ರಂಥ ರವಿಶಂಕರ ಗುರೂಜಿ ಯವರ ನುಡಿಗಳು ಅಮೃತ ಬಿಂದು
9 ಬದುಕು ಭಾರವಲ್ಲ ಲೇಖನ ಕೃತಿ
10 ಶರಣರ ವಚನಗಳ ವಿಶ್ಲೇಷಣೆ ಕೃತಿ
ಪ್ರಶಸ್ತಿಗಳು1 ಸತತ ಹತ್ತುವರುಷ ಪ್ರತಿವರ್ಷ ಕನ್ನಡ ರತ್ನ, ಕನ್ನಡ ನಿಧಿ, ಸಿರಿಗನ್ನಡ ಚಿತ್ರದುರ್ಗ ಕನ್ನಡ ಪ್ರತಿಭಾ ಪರೀಕ್ಷೆಯಲ್ಲಿ ಉತ್ತಮ ಶಿಕ್ಷಕ/ ಉಪನ್ಯಾಸಕಿಯರು ಎಂಬ ಪ್ರಶಸ್ತಿ
2 ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ
3ಗೌರವ ಡಾ.ಲಿಟ್ ಪ್ರಶಸ್ತಿ
4ಕಾವ್ಯಚೇತನ ಪ್ರಶಸ್ತಿ