ಕಾವ್ಯ ಸುಧೆ(ರೇಖಾ) ಅವರ ಕವಿತೆ-ಭಾವನೆಗಳ ಹೂ

ಎನ್ನೆದೆಯ ಭಾವ ಬಿತ್ತಿಯ
ಕರ್ತೃ ನೀನೇ
ಪದಗಳ ಹರಿವು ನಿನ್ನೆಡೆಗೆ
ನಿನ್ನದೇ ಕಲ್ಪನೆಯ ಖಾಸ
ಪದಗಳವು
ನಿನ್ನೊಡನಾಡದ ಮಾತು
ಅಂತರಂಗಕ್ಕಿಳಿದು
ಮನದಲ್ಲಿ ಭಾವಗಳ ಉತ್ಸವ
ಮೂಡುತಿದೆ
ಪದಗಳ ಸಮೂಹ
ಅಕ್ಷರ ಉದಯೋತ್ಸಾಹ ಪಲ್ಲವ
ಬೆಚ್ಚಗಿನ ಎದೆ ತೊರೆದು
ಪ್ರವಾಹ ಬೊಗಸೆ ತುಂಬ
ಸಿಹಿ ಮೊಗೆವ
ಮಂದಹಾಸ ಮೊಗದಿ
ಭಾವನೆಗಳ ಹೂ ಮೆತ್ತೆಗೆ
ಮೃದು ಮಂದಹಾಸದ ಸವಿನುಡಿ…..!!


Leave a Reply

Back To Top