ಪ್ರಮೋದ ಜೋಶಿ ಅವರ ಕವಿತೆ-ಕಾಣುತಿರಬೇಕು

ರೋಸಿಹೋಗಿದೆ
ಘಾಸಿಯಾಗಿರುದಕೆ
ಮಾತು ಬಾರದೆ
ಮೌನವಾಗಿದೆ ಮನ

ತಿಳಿನೀರ ಕಂಡು
ಸಂಭ್ರಮಿಸಿ ಸಾಕು
ಕುಲುಕದಿರಿ ನೀರನ್ನು
ರಕ್ತವೇ ಬಂದೀತು

ನಂಬಿಕೆ ಬೆನ್ನೇರಿ
ಆಳೆತ್ತರಕ್ಕೇರಿದರೆ
ಕಾಲೆಳೆಯುವ ಕೈಗಳನ್ನೇ
ಮರೆತುಬಿಟ್ಟೆ

ತಪ್ಪುಒಪ್ಪಿನ ಜಂಜಾಟದೊಳಗೆ
ದಿನಗಳೇ ಗತಿಸಿವೆ
ಸಾಗಿಬಂದ ದಾರಿಯೂ ಈಗ
ಕಾಣದಾಗಿದೆ

ಹುಡುಕಲೆಷ್ಟೋ ಇನ್ನು ಈಗ
ಉಳಿವ ಕಾಲವು ಎಷ್ಟೋ
ಬಿದ್ದ ಕಲ್ಲು ಮುಳ್ಳಿಗೂ ಕೂಡಾ
ಆಗಿತಿದೆ ಸುಸ್ತೊ ಸುಸ್ತು

ದಾಟಿ ದಾಟಿ ಧೃಡವಾಗಿದೆ ಘಟ
ಎಲ್ಲವೂ ಈಗ ಅಷ್ಟೆ
ಹೀಗಿದ್ದರೂ ಹಾಗಿದ್ದರೂ
ಬಾನ ಬದುಕಲ್ಲಿ ಹಾರುತಿದೆ ಪಟ

ಸುತ್ರವೂ ಗಟ್ಟಿ ದಾರವೂ ಗಟ್ಟಿ
ಗಾಳಿಯಂತೇ ಹೋಗಬೇಕು
ಎಳು ಬೀಳನು ಸಹಿಸುತ
ಹಾರುತಿರಬೇಕು ಕಾಣುತಿರಬೇಕು


Leave a Reply

Back To Top