ಕಂಸ ಅವರ ಹೊಸ ಗಜಲ್

ಮೊದಲ ನೋಟಕ್ಕೆ ನಕ್ಕವಳು ಅವಳೆ
ಕೊನೆಯ ಕಾಟಕ್ಕೆ ಅತ್ತವಳು ಅವಳೆ

ಕಾಮದ ಹೂಬಾಣ ಬಿಟ್ಟಳು ಕನ್ಯಾಮಣಿ
ಪ್ರೇಮದ ಓಲೆಯ ಸುಟ್ಟವಳು ಅವಳೆ

ಮಿಂಚಿನಂತೆ ಬಂದು ಮರೆಯಾದೆ ಏಕೆ
ಸಂಚುಮಾಡಿ ಎದೆಗೆ ಒದ್ದವಳು ಅವಳೆ

ಮಳೆ ಹನಿಯಾಗಿ ಸುರಿದಳು ಚೆಲುವೆ
ಅನುರಾಗದ ಅಲೆಗೆ ಬಿದ್ದವಳು ಅವಳೆ

ಗೆಲುವಿನ ಪಥ ತುಳಿದ ಕಂಸನಿಗೆ ಹರ್ಷ
ಒಲವಿನ ಹಾದಿಯ ಗೆದ್ದವಳು ಅವಳೆ


Leave a Reply

Back To Top