ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
ಗಜಲ್
ಮಧುರ ಮಾತುಗಳೆಲ್ಲ ಮೌನಕ್ಕೆ ಶರಣಾದವು ಮನವೇ
ವೇದನೆಗಳ ನಿವೇದನೆಗೆ ವದನಗಳೇ ಕಾಣುತ್ತಿಲ್ಲವೆಂದರಿತು ಮನವೇ
ಭಾಂದವ್ಯಗಳು ವರ್ಣಗಳ ಪೊರೆ ಕಳಚಿ ಬಿಳಿಚಿಕೊಂಡವು
ಬೆಸುಗೆ ಬಂಧನಗಳು ನಂದನವಾಗದಿಹವೆಂದರಿತು ಮನವೇ
ನೂರು ನೋವುಗಳು ಹೆಪ್ಪುಗಟ್ಟಿದವು
ನವನೀತದಂತೆ ಕರಗುವುದಿಲ್ಲವೆಂದರಿತು ಮನವೇ
ಅರಳಿದ ಅಭೀಪ್ಸೆಗಳೆಲ್ಲ ಅಡಗಿಕೊಂಡವು
ಅನವರತ ಸ್ನೇಹದ ಹಿತ ಸಿಗುವುದಿಲ್ಲವೆಂದರಿತು ಮನವೇ
ಎದೆಯ ಧಗೆಯಲಿ ಉರಿದು ಹೊಗೆಯಾಯಿತು ನನ್ನಾತ್ಮವು
ಭ್ರಮೆಯ ಬದುಕು ದಿಟವಾಗದೆನ್ನುವ ಕಟುಸತ್ಯವನರಿತು ಮನವೇ.
ಶೋಭಾ ಮಲ್ಲಿಕಾರ್ಜುನ್
ಸುಂದರವಾದ ಕವನ ಓದಿ ಪುಳಕವಾಯಿತು ನನ್ನ ಮನವೇ
ಹೌದಾ….. ಮನವೇ
ನಿಜವಾಗಲೂ ಮನಸ್ಸಿಗೆ ಮುದ ನೀಡಿತು ಹಾಗೆ ಬರೆಯೋದು ಮುಂದುವರೆಸಿ, fentastic