ಶಿವಾನಂದ ಉಳ್ಳಿಗೇರಿ ಅವರ ಕೃತಿ ‘ಮುತ್ತುಗದ ಹೂವು’ ಕವನ ಸಂಕಲನದ ಅವಲೋಕನ- ಸವಿತಾ ಮುದ್ಗಲ್ ಅವರಿಂದ

ಕೃತಿ :ಮುತ್ತುಗದ ಹೂವು
ಲೇಖಕರು :ಶಿವಾನಂದ ಉಳ್ಳಿಗೇರಿ.
ಮುಖಪುಟ ವಿನ್ಯಾಸ :ಜಬಿವುಲ್ಲಾ ಎಂ ಅಸಾದ್
ಪುಟ ವಿನ್ಯಾಸ :ರಾಘವೇಂದ್ರ ಕೆ
ಪ್ರಕಾಶನ :ಶ್ರೀ ಸಾಯಿ ಸಾಹಿತ್ಯ, ಬೆಂಗಳೂರು

ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದ ಭಾವಸಂಗಮ ಕಾರ್ಯಕ್ರಮದಲಿ ಈ ಮುತ್ತುಗದ ಹೂವು ಸ್ವತಃ ಲೇಖಕರ ಕೈಯಿಂದ ಪಡೆಯುವಂತಾಯಿತು.ಮುಖಪುಟದ ಮುಖೇನ ಪರಿಚಯವಾದ ಲೇಖಕರು. ಪುಸ್ತಕ ಪ್ರಕಟಿಸಿದ ಸಮಯದಲ್ಲಿ ನಮಗೂ ಒಂದು ಪ್ರತಿ ಕಳಿಸಿಕೊಡಲು ಕೇಳಿದ್ರು ಕಳಿಸಿರಲಿಲ್ಲ.ನನಗೆ ಪರಿಚಯವಾದವರು ಬಿಡುಗಡೆ ಮಾಡಿದ ಯಾವುದೇ ಕೃತಿಯನ್ನು ನಾನು ತರಿಸಿ ಬಿಡುವಿನ ಸಮಯದಲ್ಲಿ ಓದಿ ನನ್ನ ಅನಿಸಿಕೆ ನೀಡುವುದು ರೂಢಿಯಾಗಿದೆ.
“ಓದುವ ಋಣವಿದ್ದರೆ ಪುಸ್ತಕ ಕೈ ಸೇರುತ್ತೆ ಅನ್ನುವ ಮನೋಭಾವನೆ ಕೂಡ ನನ್ನದು”!.
ಬದುಕಿನಲ್ಲಿ ನಡೆದ ಯಾವುದೇ ಘಟನೆ ಸಂಘರ್ಷಕ್ಕೆ ಅತಿರೇಕದ ಉತ್ತರ ನೀಡದೆ ಮೆದುವಾದ ಭಾಷೆಯಲಿ ಅಥವಾ ತಮ್ಮದೇ ಆದ ಶೈಲಿಯಲ್ಲಿ ಭಾವನೆ ಕೂಡಿರಬೇಕು ಅನ್ನುವುದು ಈ ಕೃತಿಯಲ್ಲಿನ ಕವಿತೆಗಳ ಮೂಲಕ ತಿಳಿಯುತ್ತದೆ.
ಸಾಮಾನ್ಯ ಶಿಕ್ಷಕರ ನಡವಳಿಕೆಗೆ ತಮ್ಮದೇ ಚೌಕಟ್ಟಿನಲ್ಲಿ ಸರಳ ಸುಂದರವಾಗಿ ಹಾಗೂ ನಿತ್ಯದ ನೆನಪುಗಳನ್ನು ಸೊಗಸಾಗಿ ಕವಿತೆ ರೂಪದಲ್ಲಿ ಕಟ್ಟುವ ಕಲೆ ಇವರಲ್ಲಿದೆ.
ಕವಿತೆ ಅಂದಾಗ ಕೆಲವೊಂದು ಕಡೆಗೆ ಪ್ರಾಸ ಬೇಕೇ ಬೇಕು ಅನ್ನುವ ನಿಯಮವನ್ನ ಸಹಜವಾಗಿ ಅದರ ಅಗತ್ಯತೆಯ ಮೀರಿ ಕೆಲವೊಂದು ಕವನಗಳು ಮೂಡಿಬಂದಿವೆ.

ಸಾಮಾನ್ಯ ವಸ್ತು ನಮ್ಮ ಕಣ್ಣಿಗೆ ಕಂಡರೂ ಕೂಡ ಅದನ್ನ ಪದಗಳ ಜೋಡಿಸಿ ಬಣ್ಣ ಬಳಿದಾಗ ರೂಪುಗೊಂಡು ಅದಕ್ಕೆ ಮಹತ್ವ ಬರಲು ಕವಿತೆಯೇ ಕಾರಣ ಎನ್ನುವ ಜೊತೆಗೆ ಕವಿಯ ಅಂತಾರಾಳದಿ ಮೂಡುವ ಲಯ ತಾಳಗಳ ಜೋಡಿಯಂತೆ ಅಕ್ಷರಗಳು ಕೂಡಿದಾಗ ಅಲ್ಲಿ ಒಂದು ಕವಿತೆ ಮೂಡಲು ಸಾಧ್ಯ ಜೊತೆಗೆ ಮಹತ್ವ ಪಡೆದು ಕೊಳ್ಳಲು ಸಾಧ್ಯ ಆಗುತ್ತದೆ.
ಶ್ರಮದ ಜೊತೆಗೆ ಶ್ರದ್ದೆಯೊಂದಿದ್ದರೆ ಯಾವುದೇ ವ್ಯಕ್ತಿ ಬದುಕು ಪರಿಪೂರ್ಣವೊಂದಲು ಸಾಧ್ಯ ಅದರಂತೆ ಇಲ್ಲಿ ಕವಿಗಳು ಕೂಡ ತಮ್ಮ ಜೀವನದಲ್ಲಿ ಅನೇಕ ನೋವು ನಲಿವನ್ನ ಕಂಡವರು.
ಬಡತನ, ಸಾಲ, ಹಸಿವು ಕಳಿಸಿದ ಪಾಠಗಳು ಒಂದಕ್ಕಿಂತ ಒಂದರಂತೆ ಜೊತೆಯಾಗಿ ವ್ಯಕ್ತಿಗೆ ಸಮಾಜದಲ್ಲಿ ಗಟ್ಟಿಯಾಗಿ ನೆಲೆಯೂರಲು ಬುನಾದಿ ಹಾಕಿ ಕೊಡುತ್ತವೆ.
ಕುದಿಯಲ್ಲೇ ಅನ್ನ ಬೇಯೋದು ಅನ್ನುವ ಹಾಗೆ ಕಷ್ಟವಿದ್ದಲ್ಲಿ ಕವನ ಹುಟ್ಟೋದು ಅನ್ನುವುದು ಅಷ್ಟೇ ಸತ್ಯ!.

ಇದು ಇವರ ಎರಡನೇ ಕವನ ಸಂಕಲನ.
ಮೊದಲ್ನೇ ಕವನ ಸಂಕಲನ ಅವ್ವ ಮತ್ತು ಆಲದ ಮರ 2021ರಲ್ಲಿ ಪ್ರಕಟವಾಗಿದೆ.
ಮೊದಲ ಸಂಕಲನದಲ್ಲಿ ಕೇವಲ ಪ್ರಾಸಕ್ಕೆ ಅಂಟಿಕೊಂಡು ಬರೆದದ್ದು, ಇತ್ತೀಚಿನ ಸಾಹಿತ್ಯದ ಸಾಹಿತಿಗಳ ಒಡನಾಟದಿಂದ ಮತ್ತು ಅವರ ವಸ್ತುನಿಷ್ಠ ವಾಗಿ ವಿಮರ್ಶಿಸಿ  ಸಂಧರ್ಭಕ್ಕೆ ತಕ್ಕಂತೆ ಹಲವು ಕವಿತೆ ರಚಿಸಲು ಸಹಾಯವಾಗುತ್ತೆದೆ ಎಂದು ಓದಿನ ಜೊತೆಗೆ ತಮ್ಮ ಶಿಕ್ಷಕ ವೃತ್ತಿ ಜೊತೆಗೆ ಪ್ರವೃತ್ತಿಯಾಗಿ ಕವನ ರಚನೆಯಲ್ಲಿ ತೊಡಗಿಕೊಂಡಿದ್ದಾರೆ.


ಮುತ್ತುಪದ ಹೂವು ಕೃತಿಯಲ್ಲಿ ಒಟ್ಟು 45 ಕವಿತೆಗಳು ಕೂಡಿವೆ.
ಮೊದಲನೇ ಕವಿತೆ ರೊಕ್ಕದ ಗಿಡದ ಒಂದೆರಡು ಸಾಲುಗಳು ಈ ಕೆಳಗಿನಂತೆ…
 ಬಹಳ ಬಹಳ ಆಸೆಯಿಂದ ನಾನೊಂದು ರೊಕ್ಕದ ಗಿಡ ನೆಟ್ಟೆ
 ಯಾರನ್ನು ಯಾವುದನ್ನು ಲೆಕ್ಕಿಸದೆ ಅರೆ ಹೊಟ್ಟೆಯಲ್ಲಿ ದುಡಿದು ದುಡಿದು ಬೆಳೆಸಿದೆ ಹಗಲು ರಾತ್ರಿ ಕಣ್ಣಿಟ್ಟು ಕಾಯುತ,
 ಸುತ್ತಲೂ ಜಿಪುಣತನ, ಸ್ವಾರ್ಥದ ಬೇಲಿ
 ಬಡ್ಡಿ ಚಕ್ರ ಬಡ್ಡಿಗಳ ಗೊಬ್ಬರ
ಸುರವಿ ಹರವಿ ದೂರ ನೂಕಿದೆ ಬಂಧು ಬಳಗವನೆಲ್ಲ.

ಈ ಮೇಲಿನ ಕವಿತೆಯ ಸಾಲೇ ಹೇಳುವಂತೆ ಹಣದ ಮಹತ್ವ ಹೇಳಿಕೊಂಡು ದುಡಿಯುವ ಹೊತ್ತಿನಲ್ಲಿ ಕಣ್ಣು ಕಟ್ಟಿ ಹಗಲಿರುಳು ನಾನು ಹಣದ ಮರವನ್ನು ನೆಟ್ಟೆಯಂದು, ಸಾಲದ ಸುಳಿಕೆ ಸಿಕ್ಕಿ ಬಡ್ಡಿಗೆ ಮಹಾಬಡ್ಡಿಯನ್ನು ತುಂಬಲು ಪ್ರಾರಂಭ ಮಾಡಿದಾಗ ಸಾಮಾನ್ಯವಾಗಿ ಬಂದು ಬಳಗದವರನ್ನು ನಮ್ಮಿಂದಲೇ ನಾವು ದೂರ ಮಾಡುವುದಲ್ಲದೆ ಅವರಾಗಿ ದೂರವಾಗುತ್ತಾರೆ ಎಂಬುದು ಮಾರ್ಮಿಕವಾಗಿ ಬರೆದಿದ್ದಾರೆ.
 ಸಾಮಾನ್ಯವಾಗಿ ಶಿಕ್ಷಕರನ್ನು ಜಿಪುಣರು ಎನ್ನುವುದು ವಾಡಿಕೆ ಏಕೆಂದರೆ ಅವರಿಗೆ ಯಾವುದೇ ಇನ್ನಿತರ ಸೌಲಭ್ಯಗಳು ಇರುವುದಿಲ್ಲ. ಶಿಕ್ಷಕರ ಜೀವನ ತುಂಬಾ ಕಷ್ಟದಾಯಕವಾಗಿರುತ್ತದೆ ಜೊತೆಗೆ ಬಂದಂತಹ ಹಣದಲ್ಲಿ ತಮ್ಮ ಜೀವನವನ್ನು ನಿಭಾಯಿಸಿಕೊಂಡು ಹೋಗುವಾಗ ಎಲ್ಲಿಯಾದರೂ ಖರ್ಚು ಮಾಡುವಾಗ ಯೋಚಿಸಿ ಮಾಡಿದಾಗ ಕೆಲವರಿಗೆ ಅದು ಜಿಪುಣತನ ಎಂಬಂತೆ ಕಾಣುತ್ತದೆ ಸ್ವತಹ ನಾವು ಸಾಲದ ಸುಳಿಯಲ್ಲಿ ಬದುಕುತ್ತಿರುವುದು ಅವರಿಗೆ ಅರಿವಿರುವುದಿಲ್ಲ. ತಮ್ಮ ಅನುಭವವನ್ನು ಈ ಮೇಲಿನ ಸಾಲುಗಳ ಮುಖೇನ ಅವರು ಪ್ರಸ್ತುತಪಡಿಸಿದ್ದಾರೆ.
ಇನ್ನು ಉಳಿದಂತೆ ಅನೇಕ ಕವಿತೆಗಳು ಒಂದಕ್ಕಿಂತ ಒಂದು ಹೂವಿನ ಸುವಾಸನೆಯಂತೆ ಓದಲು ಮುದ ನೀಡುತ್ತವೆ.
 ಈ ಕೃತಿಯಲ್ಲಿ ಒಂದೊಂದು ಪದ್ಯಕ್ಕೂ ಒಂದೊಂದು ರೇಖಾಚಿತ್ರವನ್ನು ಅಳವಡಿಸಲಾಗಿದೆ. ಇದರಿಂದ ಈ ಕೃತಿಯ ಪುಟದ ವಿನ್ಯಾಸವು ಕೂಡ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಈ ಕೃತಿಗೆ ಮುನ್ನುಡಿಯನ್ನು ನಾಡಿನ ಖ್ಯಾತ ವಿಮರ್ಶಕರಾದ ಡಾ.ಎಚ್ಎಸ್ ಸತ್ಯನಾರಾಯಣ sir ಮತ್ತು ಬೆನ್ನುಡಿಯನ್ನು ಹೆಸರಾಂತ ಕವಯಿತ್ರಿ ಶ್ರೀಮತಿ ಎಂ ಆರ್ ಕಮಲ ಮೇಡಂ ರವರು, ಕೃತಿಗೆ ಆಶಯ ನುಡಿಯನ್ನು ಪುರಾವಣಿ ವಿಭಾಗದ ಮುಖ್ಯಸ್ಥರಾದ ವಿಜಯ ಕರ್ನಾಟಕ ಪತ್ರಿಕೆಯ ಶ್ರೀಮತಿ ವಿದ್ಯಾರಶ್ಮಿ ಪೆಳತ್ತಡ್ಕ, ಖ್ಯಾತ ಕಥೆಗಾರರಾದ ಕಾರ್ಯಕ್ರಮ ವಿಭಾಗದ ಮುಖ್ಯಸ್ಥರಾದ ಆಕಾಶವಾಣಿ ಧಾರವಾಡದ ಡಾ. ಬಸು ಬೇವಿನ ಗಿಡ ಸರ್ ಅವರು, ಡಾಕ್ಟರ್ ಪ್ರೇಮಲತಾ ಬಿ ಲಂಡನ್, ಬೆಳಗಾವಿಯ ಶ್ರೀಮತಿ ಮಮ್ತಾ ಶಂಕರ್ ಅವರು  ತಮ್ಮ ಆಶಯ ನುಡಿಗಳಿಂದ ಕೂಡಿದ ಈ ಮುತ್ತುಗದ ಹೂವು ಒಂದು ಮಧುರವಾದ ಸುವಾಸನೆ ಬೀರುವ ಮುತ್ತುಗದ ಹೂವಿಗೆ ಅದುವೇ ಸಾಟಿ ಎನ್ನುವಂತೆ ರಚಿತವಾಗಿದೆ.
ಇವರಿಂದ ಇನ್ನಷ್ಟು ಕವಿತೆಗಳ ಸಂಕಲನ ಮೂಡಿಬರಲಿ ಎಂದು ಹಾರೈಸುವೆ.


Leave a Reply

Back To Top