ಸತೀಶ್ ಬಿಳಿಯೂರು ಅವರ ಕವಿತೆ-ಭಾವ ಲಹರಿ

ನೂರಾರು ನುಡಿಗಳು
ಭಾವ ಬೆಸೆದು ಕವನವಾಗಿದೆ
ಸದಾ ನಿನ್ನ ಭಾವದೊಲುಮೆ
ಕಾಡೋ ನೆನಪು ಧುಮ್ಮುಕೋ ಚಿಲುಮೆ

ಸಾಗರದಷ್ಟು ವಿಶಾಲ ಹೃದಯ
ದಿನ ಕನಸುಗಳ ಕಾಣೋ ಸಮಯ
ಉತ್ಸಾಹ ತುಂಬಿ ಮನಬಿಚ್ಚಿ ನಕ್ಕಿದೆ
ನೂರಾರು ಆಸೆಗಳು ಒಂದುಗೂಡಿ

ಆ ಸೌಂದರ್ಯ ಕನ್ನಿಕೆ ನಸುನಗೆ
ತುಟಿ ಬಿಚ್ಚಿ ಮನವಾಡುವ ಮಾತಿಗೆ
ನಿನಗೆ ಸೋತು ನಾ ಶರಣಾಗತಿ
ನೀನೇ ಮನದಾಳದಿ ಬೇರು ಬಿಟ್ಟ ಗೆಳತಿ

ನಿನ್ನ ಕಣ್ಣಲ್ಲಿ ಸೆಳೆಯುವ ಸೆಳೆತ
ಬೇಗ ಒಂದಾಗಿ ಸೇರುವ ತವಕ
ಹರುಷದ ಕಣಕೆ ಇಳಿದಿರುವೆ
ಸಂತಸದ ಕ್ಷಣಗಳ ತಂದಿರುವೆ

ಬಳಿ ಸರಿದು ಬಾ ಮನದೊಳಗೆ
ಸೋನೆಯಾಗು ಈ ಬಾಡುವ ಸಸಿಗೆ
ಹಸಿರಾಗಿ ಉಸಿರಾಗುವೆ ನಿನ್ನೊಳಗೆ
ಬಾಳಿ ಬದುಕುವ ತೋಟದೊಳಗೆ


Leave a Reply

Back To Top