ಕಾವ್ಯ ಸುಧೆ. ( ರೇಖಾ )ಅವರ ಕವಿತೆ-ಸ್ನೇಹಸುಧೆ

ಪುಟ್ಟ ಪುಟ್ಟ ಎಲೆಗಳ ಚಿಗುರಿನಲಿ
ಹಸಿರು ಬನದ ಸಿರಿ ಸೌರಭದಲಿ
ಉಲಿವ ಮಧುರ ಸ್ವರ ನಾದದಲಿ
ಕೋಗಿಲೆ ಮಾಮರ ಚಿರ ಸ್ನೇಹದಲಿ

ಸ್ನೇಹ ವಿಶ್ವಾಸಗಳ ಬೆರಗಿನ ಅ೦ಟು
ದೇಹವೆರಡು ಜೀವವೊಂದಾದ ನ೦ಟು
ಸ್ನೇಹ ಸುಧೆ ಮೆಲ್ಲುವ ತುಂಟಾಟವು೦ಟು
ನೂರೆಳೆಯ ಗ೦ಟು ಹೇಳದ ಗುಟ್ಟುಂಟು

ಕರ್ಣ-ಸುಯೋಧನರ ಸಖ್ಯದ ವಿಶೇಷ
ಸ್ನೇಹ ಪರಾಕಾಷ್ಠತೆ ಮೆರೆದ ಸನ್ನಿವೇಶ
ಕೃಷ್ಣ – ಕುಚೇಲರ ಸ್ನೇಹ ನಿಷ್ಕಲ್ಮಶ
ಬಂಧ ಸಾರುವುದು ಉತ್ತಮ ಸಂದೇಶ….!!


One thought on “ಕಾವ್ಯ ಸುಧೆ. ( ರೇಖಾ )ಅವರ ಕವಿತೆ-ಸ್ನೇಹಸುಧೆ

  1. ವಾವ್ ಸುಂದರ ಸಾಲುಗಳು ಸ್ನೇಹದ ಸಂಬಂಧ ಕವನ
    Sripad Algudkar ✍️

Leave a Reply

Back To Top