ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ದುಗುಡ
ಕೆಲವರು ಬೊಬ್ಬಿಟ್ಟು ಕೂಗಿ ಹೇಳುವರು
ಕೆಲವೊಮ್ಮೆ ಮೌನವೇ ಮನದ ಕದ ತೆರೆಯುವುದು
ಕೆಲವರು ಮಾತುಗಳಲ್ಲಿ ಹೇಳಿಕೊಂಡರೆ
ಕಣ್ಣೀರು ಕೆಲವರ ದುಃಖವ ಹೊರಹೊಮ್ಮುವುದು
ಕಳೆಗುಂದಿದ ಮುಖ ಕೆಲವರ ಭಾವ ಕನ್ನಡಿಯಾದರೆ
ಕೆಲವರ ಕಣ್ಣಡಿಯ ಕಪ್ಪು ವಲಯ ಅವರ
ದುಗುಡವ ಬಿಚ್ಚಿಡುವುದು
ನಾವೇನೋ ಹೇಳಿಬಿಡುವೆವು
ಇಲ್ಲ ಮರೆಮಾಚುವ ಯತ್ನದಲ್ಲಿರುವೆವು
ಆದರೆ ಎಂದಿಗೂ ಮನಸಿನ ಭಾರವ ಸಂಪೂರ್ಣವಾಗಿ ತೆರೆದಿಡೆವು
ಎಲ್ಲೋ ಮನದಾಳದಿ ಕೊರಗು ಎಲ್ಲರಲ್ಲೂ ಇರುವುದು
ರಾತ್ರಿಯ ನಿದ್ದೆಯ ಕೆಡಿಸುವುದು
ದಿನದ ನೆಮ್ಮದಿಯ ಕಸಿಯುವುದು
ಹತ್ತಿಕ್ಕಿದರೆ ಹತಾಶೆಯ ರೂಪವಾಗುವುದು
ಹದ್ದು ಮೀರಿದರೆ ಸಂತುಲನ ತಪ್ಪುವುದು
ಈ ಬದುಕು ಯಾರನ್ನು ಬಿಡದು ಮಿತ್ರ
ನನ್ನನ್ನು ನಿನ್ನನ್ನು ಎನ್ನದೆ ಹೆಚ್ಚುಕಮ್ಮಿ
ಎಲ್ಲರನ್ನು ಕಾಡದೆ ಇರದು
ತಾಳುತ ಬಾಳುವ ಜೀವನ ನಮ್ಮದು.
ಶಾಲಿನಿ ಕೆಮ್ಮಣ್ಣು
ಉತ್ತಮ ಕವನ ❤️