ಅನ್ನಪೂರ್ಣ ಸಕ್ರೋಜಿ ಪುಣೆ ಅವರ ಕವಿತೆ-ವೀರಾಂಗನೆಯರು

ವೀರ ಕಂಕಣ ಕಟ್ಟಿದ
ವೀರಾಂಗನೆಯರು ನಾವು
ಆಗಸದಲೂ ಸೈ
ಸಾಗರದಲೂ ಸೈ
ದೇಶಕಾಗಿ ಹೋರಾಡುವವರು

ಹಿಮದಲೂ ಸರಿ
ಮರಳು ಭೂಮಿಯಲೂ ಸರಿ
ನಾಡಲೂ ಸೈ
ಕಾಡಲೂ ಸೈ
ಗಂಡೆದೆಯ ನಾರಿಯರು ನಾವು

ಶಸ್ತ್ರವಿದ್ಯೆ ಕರಗತ
ಅಸ್ತೃವಿದ್ಯೆ ಮನಗತ
ಮೈಮೇಲೇರಿ ಬಂದವರನು
ರುಂಡಾಡಿ ಬಿಡುವ
ಚಂಡಿಚಾಮುಂಡಿಯರು ನಾವು

ಜನ ಜಲ ಭಾಷೆ
ಜಗಳ ತೆಗೆದರೆ
ಝಾಡಿಸಿ ಒದ್ದು ಬಿಡುವ
ಅಟ್ಟಾಡಿಸಿ
ಒಟ್ಟೋಡಿಸಿ
ಬಿಡುವ ವೀರರಮಣಿಯರುನಾವು

ಜನರ ಸೇವೆ
ಜನಾರ್ದನ ಸೇವೆ
ದೇಶಸೇವೆ ಈಶ ಸೇವೆಯೆನುತ
ಭಾರತಾಂಬೆಯ
ಜಯಭೇರಿಗೈವ ಭಾರತೀಯರು


Leave a Reply

Back To Top