ಮಕ್ಕಳ ಸಂಗಾತಿ
ಅನಸೂಯ ಜಹಗೀರದಾರ
ಶಿಶುಗೀತೆ
ಸಾಗಿತು ನಮ್ಮಯ ಪ್ರಭಾತ ಫೇರಿ
ಮೊಳಗಿದೆ ಘೋಷವು ಕೇರಿ ಕೇರಿ
ಜಯಹಿಂದ್ ಅನ್ನುತ ನಡೆದೆವು
ಬೆಳಕಿನತ್ತ ದಾರಿಯ ಹುಡುಕಿದೆವು
ನಾಕಕ್ಕಿಂತ ಮಿಗಿಲು ಜನನಿಯು
ಹೆಗ್ಗಳಿಕೆ ಜನುಮ ಭೂಮಿಯು
ಮಾರ್ದನಿಸುತಿದೆ ಎಲ್ಲೆಡೆ ನೆಲವು
ಪುಟಿಯುತಿದೆ ನಮ್ಮಯ ಬಲವು
ಚಿಗುರಿತು ಸ್ವಾತಂತ್ರ್ಯದ ಮೊಳಕೆ
ತಲುಪುವೆವು ಗುರಿಯ ನಿಶ್ಶಂಕೆ
ನಿಸ್ವಾರ್ಥದಲಿ ಹೋರಾಟವಿತ್ತು
ನಿಸ್ಸಂಶಯದಲಿ ಬಲಿದಾನವಿತ್ತು
ವಿವಿಧತೆಯಲಿ ಏಕತೆ ಸಾರೋಣ
ಒಂದೆಂಬ ನುಡಿಯ ಹಾಡೋಣ
ಹಲವು ಹೂವಿನ ಸುಂದರ ತೋಟ
ಚಿಣ್ಣರ ನಗುವಿನ ಅಂದದ ಮಾಟ
ಬೆಳಕನೀಯುವ ರವಿ ಚಂದಿರರು
ಪ್ರೀತಿಯಿಂದ ಇತ್ತ ನೋಡುವರು
ಮೂಡಿದೆ ಸ್ವಾವಲಂಬನೆ ಕಿರಣ
ನಮ್ಮ ದೇಶ ಗಳಿಸಿದ ಶುಭ ದಿನ
ಸ್ವಾತಂತ್ರ್ಯದ ಈ ಶುಭ ದಿನ
ಸ್ವಾತಂತ್ರ್ಯದ ಈ ಶುಭ ದಿನ
ಅನಸೂಯ ಜಹಗೀರದಾರ
ಚೆನ್ನಾಗಿದೆ ಮೇಡಂ
ಧನ್ಯವಾದಗಳು.