ಹಮೀದಾ ಬೇಗಂ ದೇಸಾಯಿ ಕವಿತೆ-ಸ್ವಾತಂತ್ರ್ಯ ಮಹೋತ್ಸವ

ಭಾರತ ಮಾತೆಯ ಸ್ವಾತಂತ್ರ್ಯ ಮಹೋತ್ಸವ
ಸಂಭ್ರಮಿಸಿದೆ ನೋಡು ಸಖಿ
ತ್ರಿವರ್ಣ ಧ್ವಜದಲಿ ಅಶೋಕ ಚಕ್ರವು
ಕಂಗೊಳಿಸುತಿದೆ ನೋಡು ಸಖಿ

ಹರುಷ ಉಲ್ಲಾಸ ಸಂತಸ ಮನದಲಿ
ಸಡಗರ ಹೊನಲಾಗಿ ಹರಿಯುತಿದೆ
ಕಳೆದ ಕಾಲದ ಕರಾಳ ದಿನಗಳ
ಮರೆಯಿಸಿದೆ ನೋಡು ಸಖಿ

ಗುಲಾಮಗಿರಿಯ ಬಂಧನ ಹರಿದ
ಮಹಾತ್ಮರ ಸ್ಮರಿಸಬೇಕು ಎಂದೂ
ಸ್ವಾತಂತ್ರ್ಯದ ಗೆಲುವಿನ ಧೀರ ಹುತಾತ್ಮರ
ನೆನಪಿಸಬೇಕು ನೋಡು ಸಖಿ

ಜಾತಿ ಮತ ಪಂಥಗಳ ಸಂಕೋಲೆ
ಕಳಚಿ ಬೀಳಬೇಕು ಸಖಿ
ಬಡವ ಬಲ್ಲಿದ ಭೇದವ ತೊರೆದು
ಎಲ್ಲರೂ ಒಂದಾಗಬೇಕು ಸಖಿ..!


One thought on “ಹಮೀದಾ ಬೇಗಂ ದೇಸಾಯಿ ಕವಿತೆ-ಸ್ವಾತಂತ್ರ್ಯ ಮಹೋತ್ಸವ

Leave a Reply

Back To Top