ಸ್ವಾತಂತ್ರ್ಯ ಭಾರತದಲ್ಲಿ ಮೊದಲು ಪ್ರಜೆಗಳುಬದಲಾಗಬೇಕು!-ಐಗೂರು ಮೋಹನ್ ದಾಸ್ ಜಿ.

ನಮ್ಮ ದೇಶದಲ್ಲಿ ಆಗಸ್ಟ್ ಹದಿನೈದು ಬರುತ್ತಿದ್ದಂತೆ, ಎಲ್ಲಾಡೆ ಮನಗಳಲ್ಲಿ ದೇಶಪ್ರೇಮವು ಉಕ್ಕಿ ಹರಿಯಲು ಪ್ರಾರಂಭಿಸುತ್ತದೆ….! ಆದರೆ ಈ ಸಡಗರ-ಸಂಭ್ರಮ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಮುಗಿಯುತ್ತಿದ್ದಂತೆ ಮಂಗಳ ಹಾಡಿಬಿಡುತ್ತದೆ…!
    ನಮ್ಮ ಭವ್ಯ ಭಾರತ ದೇಶಕ್ಕೆ ಬ್ರಿಟಿಷರ ಕಪಿಮುಷ್ಠಿಯಿಂದ, 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ದೊರೆತು, ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉದಯವಾಯಿತ್ತು… ಈಗ ದೇಶಕ್ಕೆ 78 ರಸ್ವಾತಂತ್ರ್ಯ ಹಬ್ಬ…! ಈ ಹಬ್ಬವು ಕೇವಲ ಸಂಖ್ಯೆಗಳಿಗೆ ಮಾತ್ರ ಸಿಮೀತವಾಗಿರುವುದು ದುರಾದೃಷ್ಟವಾಗಿದೆ..! ಈ ಸಲ78ರ ಸ್ವಾತಂತ್ರ್ಯ ದಿನಾಚರಣೆ…. ಮುಂದಿನ ವಷ೯ 79ರ ದಿನಾಚರಣೆ…! ಈ ಸಂಖ್ಯೆಗಳ ಏರಿಕೆ ವಷ೯ದಿಂದ ವಷ೯ಕ್ಕೆ ಏರಿದ್ದರೂ ದೇಶದ ‘ಹಣೆಬರಹ” ಮಾತ್ರ ಬದಲಾಗಲೇ ಇಲ್ಲ…!
    ದೇಶದ ದುಸ್ಥಿತಿಗೆ ನಾವೇ ಕಾರಣಕತ೯ರು ಎಂದು ಹೇಳಿದ್ದರೇ ತಪ್ಪಾಗುವುದಿಲ್ಲ…! ದೇಶದ ಪ್ರಜೆಗಳು ಮುಂದಿನ ಭವಿಷ್ಯದ ಕುರಿತು ಚಿಂತಿಸದೇ, ತಪ್ಪು ಹಾದಿಯಲ್ಲಿಯೇ ಹೆಜ್ಜೆ ಹಾಕುತ್ತಿರುವ ಕಾರಣ ಭಾರತಾಂಬೆ ನಿತ್ಯ ರೋಧಿಸಬೇಕಾಗಿದೆ…!
     ನಿಜ…., ನಮ್ಮದ್ದು ಸ್ವಾತಂತ್ರ್ಯ ಭಾರತ… ಪ್ರಜಾಪ್ರಭುತ್ವ ರಾಷ್ಟ್ರ… ಪ್ರಜೆಗಳೇ ಪ್ರಭುಗಳು…. ಯಾವುದೇ ರಾಜಕೀಯ ಪಕ್ಷವನ್ನು ಚುನಾವಣೆ ವೇಳೆ ‘ಮತ’ದ ಆಯುಧ ಬಳಸಿ, ಆಧಿಕಾರದಿಂದ ಇಳಿಸಬಹುದು… ಅಥವಾ ಆಧಿಕಾರಕ್ಕೆ ಏರಿಸಬಹುದು… ಸಂವಿಧಾನವು ಸವ೯ರಿಗೂ ಏಕ ರೀತಿಯ ಹಕ್ಕು ನೀಡಿದೆ ಎಂದು ಹೇಳುವಾಗ, ಕಿವಿಗೆ ತಂಪಾಗುತ್ತದೆ….! ಆದರೆ ವಾಸ್ತವವಾಗಿ ಈ ಪ್ರಪಂಚಕ್ಕೆ ಇಣುಕಿ ನೋಡಿದ್ದರೇ, ಸರ್ವರ ಮನಸ್ಸು ನೋವಿನಿಂದ ರೋಧಿಸುತ್ತದೆ….! ಏಕೆಂದರೆ ಸ್ವಾತಂತ್ರ್ಯ ಭಾರತ ಭ್ರಷ್ಟಚಾರಿ – ಲಂಚ ಪಿಶಾಚಿಗಳ ಕೈಗೆ ಸಿಲುಕಿ ನರಕದಲ್ಲಿ ಇದೆ…!
    ನಮ್ಮ ದೇಶಕ್ಕೆ ಲಕ್ಷಾಂತರ ಮಂದಿ ಅಹಿಂಸೆ ಹೋರಾಟ… ಬಲಿದಾನಗಳ ಮೂಲಕ ಸ್ವಾತಂತ್ರ್ಯ ದೊರೆಯಿತ್ತು… ನಂತರ ಆಧಿಕಾರ ಕುಚಿ೯ ದೊರೆತ ಕೆಲ ವರ್ಷಗಳಲ್ಲಿ ದೇಶದ ಜನತೆಯ ಮನಸ್ಸಿನ ಗುಣ ಬದಲಾಯಿತ್ತು… ಆಧಿಕಾರ ದಾಹದಿಂದ ದೇಶದಲ್ಲಿ ರಾಜಕೀಯ ಪಕ್ಷಗಳ ಸಂಖ್ಯೆ ಹೆಚ್ಚಾಯಿತ್ತು…! ಜೊತೆಗೆ ಭ್ರಷ್ಟಚಾರ-ಹಗರಣಗಳ ಒಂದರ ಹಿಂದೆ ಮತ್ತೊಂದು ಬೆಳಕಿಗೆ ಬರತೊಡಗಿತ್ತು… ಈ ಫಲವಾಗಿ ಕೊನೆಗೆ ದೇಶದಲ್ಲಿ ‘ಬಹುಮತ’ ಇರುವ ಯಾವುದೇ ರಾಜಕೀಯ ಪಕ್ಷಗಳು ಆಧಿಕಾರಕ್ಕೆ ಏರದಂತಹ ದುಸ್ಥಿತಿ ನಿಮಾ೯ಣವಾಯಿತ್ತು…! ಆದರೆ ಕೊನೆಗೆ ಹತ್ತು ವಷ೯ಗಳ ಕಾಲ ‘ಕಮಲ’ಪಕ್ಷವು ಬಹುಮತದಿಂದ ಆಡಳಿತ ನಡೆಸಿದ್ದರೂ , ಈ ಬಾರಿ ಸ್ಪಷ್ಟ ಬಹುಮತವನ್ನು ಏಕಪಕ್ಷದಿಂದ ಪಡೆಯಲು ವಿಫಲವಾಯಿತ್ತು…! ಭಾರತೀಯರು ಚುನಾವಣೆ ರಾಜಕೀಯ ಚಿಂತನೆ ನಡೆಸದೇ ಮತ ಚಲಾಯಿಸಿ ದಡ್ಡರಾಗಿ ಬಿಟ್ಟರು..!
    ಈ ರಾಜಕೀಯ ಪಕ್ಷಗಳ ರೀತಿಯೇ, ದೇಶದ ‘ಶಕ್ತಿ’ ಯಾಗಿರುವ ಯುವ ಜನಾಂಗ ಹಾದಿ ತಪ್ಪಿ ಹೆಜ್ಜೆ ಹಾಕುತ್ತಿದೆ… ಮುಂದಿನ ಭವಿಷ್ಯದ ಕುರಿತು ತುಸು ಸಹ ಚಿಂತೆ ಇಲ್ಲ… ಸದಾ ಸಮಯ ಹಲವು ಕೆಟ್ಟ ಚಟಗಳನ್ನು ಕಲಿತುಕೊಂಡು, ಮೋಜಿನ ಬದುಕು ಸಾಗಿಸುತ್ತಿದ್ದಾರೆ…! ಇವರಿಗೆ ದೇಶದ ಕುರಿತು ಚಿಂತೆಯೇ ಇಲ್ಲ…!
    ದೇಶಕ್ಕೆ ಸ್ವಾತಂತ್ರ್ಯ ದೊರೆತು 78 ವಷ೯ವಾದ್ದರೂ,ಇನ್ನೂ ಪ್ರಜೆಗಳಿಗೆ ಮೂಲಭೂತ ಸೌಲಭ್ಯಗಳೇ ಸಿಕ್ಕಿಲ್ಲ…! ಈ ಸಮಯದಲ್ಲಿಯೂ ನೀರು… ರಸ್ತೆ… ಕರೆಂಟ್…. ಎಂಬ ಕೂಗು ಕೇಳಿ ಬರುತ್ತಲೇ ಇದೆ…!
    ಸ್ವಾತಂತ್ರ್ಯ ಭಾರತದ ಹಣೆಬರಹ ಬದಲಾಗಲು, ಮೊದಲು ಭಾರತೀಯರು ಬದಲಾಗಬೇಕು…!ಮನದಿಂದ ಮೊದಲು ರಾಜಕೀಯ ಪಕ್ಷದ ಮೇಲೆ ಇರುವ ಪ್ರೀತಿ ದೂರವಾಗಬೇಕು… ಚುನಾವಣೆ ವೇಳೆ ಯಾವುದೇ ರಾಜಕೀಯ ಪಕ್ಷಗಳ ಬಿಸಿ ಬಿಸಿ ಆಶ್ವಾಸನೆಗಳಿಗೆ ಮರುಳಾಗಬಾರದು…. ಹಣ-ಹೆಂಡ ಸ್ವೀಕರಿಸಿ ಮತ ಚಲಾಯಿಸಬಾರದು.. ಚುನಾವಣೆ ವೇಳೆ ರಾಜಕೀಯ ‘ತಕ್ಕಡಿ’ಯಲ್ಲಿ ಅಭ್ಯಥಿ೯ಗಳನ್ನು ತೂಕ ಹಾಕಿ ಮತ ಚಲಾಯಿಸಬೇಕು… ಭ್ರಷ್ಟಚಾರಿಗಳಿಗೆ ತಕ್ಕ ಪಾಠ ಕಲಿಸಬೇಕು… ಲಂಚ ಪಿಶಾಚಿಗಳಿಗೆ ತಟ್ಟೆ ಊಟದ ರುಚಿ ತೋರಿಸಬೇಕು…. ಈ ಪುಣ್ಯಭೂಮಿಯಲ್ಲಿ ಸ್ತ್ರೀ ಶೋಷಣೆ.. ಅನೈತಿಕ ಚಟುವಟಿಕೆ… ಭಯೋತ್ಪಾದನೆ…ಧಮ೯ ಕಲಹ ಪೂಣ೯ವಾಗಿ ನಿಮೂ೯ಲನವಾಗಬೇಕು…. ಆಗ ಮಾತ್ರ ಸ್ವಾತಂತ್ರ್ಯ ಭಾರತಕ್ಕೆ ಒಂದು ಬೆಲೆ – ಗೌರವ ಬರುತ್ತದೆ…! ಈ ಶುಭ ದಿನ ಬೇಗಾನೆ ಬರಲಿ ಎಂದು ಪ್ರಾಥಿ೯ಸೋಣ…!!
———————————–

Leave a Reply

Back To Top