ಕಾವ್ಯ ಸಂಗಾತಿ
ಸವಿತಾ ಮುದ್ಗಲ್
‘ಸಮ್ಮೋಹನ’
ಲೇಖನಿ ಮೂಲಕ ನಿನ್ನಯ ಆಕರ್ಷಣೆಯು
ಪದಗಳ ಲಾಲಿತ್ಯ ಕೂಡಿಸಿದ ರಚನೆಯು
ವಿರಾಜಿಸು ಮೆಲ್ಲನೇ ಬಿಡದೆಯು ನನ್ನನು
ಸಂಗಮಿಸು ಸರಾಗವಾಗಿ ಚರಣಗಳ ಸಾಲನು
ಅದೇನು ಸೆಳೆತ ತಿಳಿಯದಾದೆ ಮೋಡಿಯ
ಬೆನ್ನಿಗೆ ಬಿದ್ದ ಒಲವಿನ ಚಾದಾರದ ಕಲೆಯ
ಒಂದಕ್ಕೊಂದು ಮೇಳಯ್ದಸಿದ ಪುಳಕವು
ರಂಗಾಗಿಸಿದೆ ಹೊಂಗಿರಣ ನಿನ್ನ ಚೆಲುವಿನಲು
ಮೋಡವು ಹೆಪ್ಪುಗಟ್ಟಿದ ಒಲವಿನ ಸಂದೇಶವು
ಬಾಳಿಗೆ ಹಾಳೇಪೆನ್ನೆ ಪ್ರೇಮದ ನಿಲ್ಲದ ಸಾಕರವು
ಗೀಚಿನೂಕಿದ ಭಾವನೆ ಒಡಲಿನ ಮುಖಪುಟವು
ಓದಿದಷ್ಟು ಅರಿಯದೆ ಮಾಡಿದೆ ಸಮ್ಮೋಹನವು
ಹಗಲಿರುಳು ಕಾಡಿದೆ ಕಾಮನಬಿಲ್ಲಿನ ಚಿತ್ತಾರವು
ಸಲ್ಲಾಪವೇ ಪ್ರತಿಯೊಂದು ಗಳಿಗೆಯ ಈಭಾಸವು
ನೀಲಶಾಮನ ಉತ್ಕರ್ಷ ಪ್ರೇಮವೆ ಅಮಲಿನವು
ರಾಧೇಶಾಮನಾ ಕೊಳಲ ನಾದದಿ ಸಮ್ಮೋಹನವು
ಸವಿತಾ ಮುದ್ಗಲ್
ಚಂದದ ಪ್ರಕಟಣೆಗೆ ಧನ್ಯವಾದಗಳು sir
ಮಧುರ ಕಾವ್ಯ.
ಧನ್ಯವಾದಗಳು