ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಒಲವ ಗೀತೆ

ಎದೆಗೆ ಒಲವ
ತುತ್ತ ನೀಡಿ
ಮನದಿ ನಲಿವಿನ
ಸವಿಯ ಬಿತ್ತಿ
ಕಂಗಳನ್ನ ಕನಸಿ
ಕುಲುಮೆಯಾಗಿಸಿ
ಹೊಳೆವ ಕಂಗಳಲ್ಲಿ
ಜೀವ ಚಿಲುಮೆ ಚಿಮ್ಮಿಸಿ
ಹೊಸದು ನೂರು
ಕನಸ ಹೊತ್ತಿಸಿ
ಮೈ ಮನವನ
ಪುಳಕಿತಗೊಳಿಸಿ
ನಡೆವಾಗ ಎದೆಯಲಿ
ಢವ ಢವಗೊಳಿಸಿ
ಹೋದೆ ನೀನು ಎಲ್ಲಿಗೆ
ಜಾರುತಿಹ ಕನಸಿಗೆ
ಬೇಕಿದೆ ನಿನ್ನೊಲವಿನ
ರಕ್ಷಣೆ
ನನ್ನೊಲವ ನದಿಗೆ
ಬೇಕಿದೆ ನಿನ್ನ ಸಾಗರದ
ಪ್ರೀತಿಯ ಅಪ್ಪುಗೆ
ಅದಕ್ಕೆ ಬೇಕಿದೆ
ನಿನ್ನೊಲವಿನ ಒಪ್ಪಿಗೆ
ಕಾದಿಹುದು ಮನ ನಿನ್ನ
ಪಿಸು ಮಾತಿಗೆ


ನಾಗರಾಜ ಜಿ. ಎನ್. ಬಾಡ

2 thoughts on “ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಒಲವ ಗೀತೆ

Leave a Reply

Back To Top