ಇಮಾಮ್ ಮದ್ಗಾರ ಅವರ ಕವಿತೆ-ಸೋಲಿಲ್ಲ ಒಲವಿಗೆ

ತುಳಿದರೂ ಸುಮ್ಮನಿರಲು
ನಾನೇನು ಹೂವೆ ?
ನನ್ನನ್ನೇಕೆ ಶಪಿಸುವೆ ?
ಚುಚ್ಚುವದು ಮುಳ್ಳಿನ
ಸಹಜ ಸ್ವಭಾವ

ಎದುರು ಬದುರುದಾಗಲೂ
ಕಣ್ಣು ಕಣ್ಣೂ ಮಾತನಾಡ-
ಲಿಲ್ಲ ಎಂದರೆ ?
ನಿನ್ನಮಾತಿನ ಚೂರಿ
ಅದೇಷ್ಟು ಹರಿತ !

ಪ್ರೀತಿಗೊಂದಿಷ್ಟು
ಮಾತು ಬೆರೆಸಿ ಕವಿತೆ-
ಯನ್ನೇನೊ ಬರೆದು ಹೋದೆ ಆದರೆ…ನನ್ಗೆ ಬೇಕಾದದ್ದು
ಮುನ್ಬೆನ್ನುಡಿ !

ಬೆಳಕು ಸತ್ತಿತ್ತಾಗ ಬದಕೂ –
ಸೋತಿತ್ತು !
ನಾ ಸೋಲಲೇಂದೇ ನೀ..
ಬೆಳಕನಾರಿಸಿದ್ದೆಯಾ?
ನಿಂಗೆ ನೆಪ್ಪಿರಲಿ ಶಿಪ್ಪಿ
ನಾ..ಸೋಲಬಹುದು
ನನ್ನೊಲವಲ್ಲ !!

ನಿನ್ನ ಸೆರಗಿನ ಸುಖಗಳಿಗೆ
ಯಾರ ದೃಷ್ಟಿಯೂ…..
ತಾಕ ಬಾರದೆಂದೇ…..
ನಾ ಕರಿಯ ಬೊಟ್ಟ-
ನಿಟ್ಟಿರಿವೆ ಹಣೆಗೆ

ಒಲವ ಸಿಹಿಯ
ಉಣಿಸುವದಬಿಟ್ಟು
ನಿನ್ನಧರದ ಬಟ್ಟಲಲಿ
ನಂಜನೇಕೆ ತುಂಬಿದೆ ?
ನನ್ನನ್ನೇಕೆ ಶಪಿಸುವೆ
ಸಾಯಿಸುವದು ನಂಜಿನ
ಸಹಜ ಸ್ವಭಾವ

ಕರ್ಮ ಕಾಯುವದಾದರೆ
ಕಾಯಲಿ ಬಿಡು.
ಧರ್ಮ ಸೋಲುವದಾದರೆ
ಸೋಲಲಿ ಬಿಡು.

ಯಾರಭ್ಯಂತರವೂ
ಮುಖ್ಯವಲ್ಲ ಇಲ್ಲಿ


Leave a Reply

Back To Top