ಗಾಯತ್ರಿ ಎಸ್ ಕೆ ಅವರ ಕವಿತೆ-ಜೋಡಿ ಜೀವ

ಒಲವಿನ ಪಯಣದಲ್ಲಿ
ಜೊತೆ ಜೊತೆಯಲ್ಲಿ
ಸಾಗುವ ಜೊತೆಗೆ
ನೆಮ್ಮದಿಯ ಕಡೆಗೆ

ಹುಡುಕುವುದು ಬೇಡ
ತಡಕುವುದು ಬೇಡ
ನಮ್ಮ ನಮ್ಮಲ್ಲಿ
ವಿಶ್ವಾಸ ಹಸಿರಲ್ಲಿ

ಒಂದಾಗಿ ಬಾಳು
ಸವಿಯಾದ ಜೇನು
ಸಿಹಿಯಂತೆ ಎಲ್ಲ
ಕೂಡಿರುವುದೆಲ್ಲ

ಅವಗುಣ ನಮಗಿಲ್ಲ
ಸುಗುಣ ಪ್ರೀತಿ ಪ್ರೇಮ
ನಮಗೆ ಒಲವ ಬಗೆ
ಬಗೆಯ ಹೂರಣ

ಚೆಲುವ ಚಿಂತನೆ
ಮನಸ್ಸಿನ ಘಳಿಗೆ
ಪ್ರೀತಿಯ ಹಾಸುಗೆ
ಮೃದು ನಡುಗೆ

ಪ್ರೀತಿಯೆ ಹೆಮ್ಮರ
ಒಲುಮೆಯ ಆಗರ
ಪ್ರೇಮ ಸಾಗರ
ನಡೆವ ನಿತ್ಯ ದಾರಿ ದೂರ


Leave a Reply

Back To Top