ಹೆಚ್. ಎಸ್. ಪ್ರತಿಮಾ ಹಾಸನ್ ಅವರ ಕವಿತೆ-ಮಡಿಲಲಿ ಮಗುವಾಗಿ

ಬರಿದಾದ ಮಡಿಲಲಿ ಮಗುವಾಗಿ ನೀನು
ತುಂಬಿರಲು ಆನಂದ ಮನಕೆ ಎಲ್ಲೆಡೆಯು
ನೊಂದ ಮನಸಿಗೆ ಶಾಂತಿಯ ತುಂಬಿದೆ ಟೀಷ್ಮಾ
ನಕ್ಕು ನಲಿಯುತಿರೆ ಜಗವೆಲ್ಲ ನನ್ನ ಕೈಲಿ…..

ಬೆಳಗಾಯಿತೇಳು ಕಂದ ನೀನಿರದ ಜೀವನವು
ಎಂದೆಂದೂ ನರಕವೋ, ನೀನಿರಲು ಸಂತಸವು
ಬಾಳಿನಲಿ ಆನಂದ, ಮನೆಯೆಲ್ಲ ನೆಮ್ಮದಿ
ಬದುಕಿನಲಿ ನನಗೇನು ಬೇಕಿದೆ? ಓ ನನ್ನ ಕಂದ…

ಸೂರ್ಯನ ಕಿರಣಗಳು ಮನೆಯಲಿ ಬೀಳಲು
ನೀ ಎದ್ದು ಕುಣಿಯುತ ನಲಿಯುತ ಆಡಲು
ನನಗೆ ಏನು ಬೇಕು ಚಿನ್ನ ನೀನಿದ್ದರೆ ಸಾಕಲ್ಲವೆ ರನ್ನ
ನಿನ್ನ ತೊದಲ ಮಾತುಗಳು ಎಷ್ಟು ಚೆನ್ನ…..

ತಾಯಾಗಿ ಪಡೆದಿರಲು ಎಲ್ಲವ ಬದುಕಿನಲಿ
ರಾಣಿಯಾಗಿ ಮೆರೆಯುವೆನು ನಾನು
ನಿನ್ನ ಆರೈಕೆಯಲೆ ಬಾಳುವೆನು ಪ್ರೀತಿಯಲು
ಸಂತಸದಿ ಒಂದಾಗಿ ನಾವೆಲ್ಲ ನಲಿಯುತಿರಲು ……

ಮುಂದಿನ ಜೀವನದ ಆಶಾ ಕಿರಣವಾಗಿರಲು
ಒಳ್ಳೆಯ ಭವಿಷ್ಯದ ಕನಸನು ಕಾಣುತಿರಲು
ಎಷ್ಟೇ ಕಷ್ಟ ಬಂದರು ಸಹಿಸುವ ಶಕ್ತಿಯಾಗಿರುವೆ
ಸಂಸಾರ ಎಂಬ ನೌಕೆಯಲಿ ಸಾಗುತಿರುವೆ……


One thought on “ಹೆಚ್. ಎಸ್. ಪ್ರತಿಮಾ ಹಾಸನ್ ಅವರ ಕವಿತೆ-ಮಡಿಲಲಿ ಮಗುವಾಗಿ

Leave a Reply

Back To Top