ಕಾವ್ಯ ಸಂಗಾತಿ
ಇಂದಿರಾ ಪ್ರಕಾಶ್
ನೆನಪು
ನೆನಪಾಗುತ್ತಿದೆ ನಿನ್ನ ಹಿತನುಡಿಯ ನಗು
ಮಾತಲ್ಲೇ ಮನೆ ಕಟ್ಟಿ ವಾಸಿಸೋ ಬಾವುಕಾ ನೀ
ಎಂಥ ಕಠಿಣ ಸ್ಥಿತಿಯಲೂ
ಮನಸ್ಥೈರ್ಯವ ಬಿಡದೆ
ಹೋರಾಡಿದ ಛಲಗಾರನೀ
ನೀ ಎಲ್ಲೇ ಇರು ಹೇಗೇ ಇರು
ನನ್ನೊಂದಿಗೆ ಸದಾ ಇರುವ
ನನ್ನ ಮಧುರ ಆತ್ಮೀಯ ನೀ
ಮೂಡಿದ ಕನಸುಗಳ
ಭಾವನೆಯಲಿ ಬೆರೆಸಿ
ಶಬ್ದಗಳ ಅಲಂಕಾರವಾಗಿಸಿ
ಕೇಳುವ ನನ್ನ ಕರ್ಣಗಳಿಗೆ
ಸಿಹಿ ನುಡಿಯ ಉಣಿಸಿದವ ನೀ
ಗಾಳಿಯು ಬಂದೆಡೆಗೆ ಸಾಗಿದೆ
ಬಯಕೆಗಳ ಹೊತ್ತು ನಾ ಬಂದೆ ನಿನ್ನೆಡೆಗೆ
ಮಾಯವಾಗಿಹೆ ನೀ ಗಾಳಿಯಲಿ ಒಂದಾಗಿ
ಕಾಯುತಾ ಕಣ್ಗಳು ಮನಸಿನಾ ಭಾವಗಳು
ನನ್ನೆಡೆಗೆ ತಿರು ತಿರುಗಿ ಬರುತಿರುವೆ ಎಂದು ನೀ
—————————————————–
ಇಂದಿರಾ ಪ್ರಕಾಶ್.
ಚೆಂದದ ರಚನೆ. ಅಭಿನಂದನೆಗಳು ಗೆಳತಿ❤️
Superb madam