ಮಳೆ ಸಂಗಾತಿ
ಐಗೂರು ಮೋಹನ್ ದಾಸ್, ಜಿ.
‘ಸುರಿಯುತ್ತಿರುವ ಮಳೆ
ಕೊಚ್ಚಿ ಹೋಗುತ್ತಿರುವ ಕನಸುಗಳು!
ಈ ‘ಧೋ… ಧೋ….’ ಎಂದು ಬಿಡುವು ನೀಡದೇ ಸುರಿಯುತ್ತಿರುವ ಮಳೆಗಾಲಕ್ಕಿಂತ, ಹಿಂದೆ ಬೇಸಿಗೆ ಕಾಲದಲ್ಲಿ ಉರಿ ಬಿಸಿಲಿಗೆ ತಂಪು ಪಾನೀಯಗಳನ್ನು ಕುಡಿಯುತ್ತಾ, ಫ್ಯಾನ್ ಗಳ ಕೆಳಗೆ ಕುಳಿತುಕೊಂಡು ಬೆವರು ಸುರಿಸುತ್ತಿದ್ದ ಕಾಲದಲ್ಲಿಯೂ ಜನತೆ ಇಷ್ಟು ಪ್ರಮಾಣದಲ್ಲಿ ‘ ಸಮಸ್ಯೆ’ಗಳಿಗೆ ಸಿಲುಕಿ ನರಕ ಬದುಕು ಸಾಗಿಸುತ್ತಿರಲಿಲ್ಲ…! ಆದರೆ ಕೇವಲ ಒಂದೇರಡು ವಾರಗಳ ಕಾಲ ಮಳೆ ಸುರಿದಾಗ, ಹೆಚ್ಚಿನ ಮಂದಿಯ ಸೊಕ್ಕು ಅಡಗಿಯೇ ಬಿಟ್ಟಿತ್ತು…! ಯಾವುದೇ ಹಗ್ಗಗಳು ಇಲ್ಲಾದೇ ಜನತೆಯ ಕೈ-ಕಾಲುಗಳನ್ನು ಕಟ್ಟಿ, ಮನೆಯ ಕೋಣೆಯ ಒಂದು ಮೂಲೆಗೆ ಕೂರಿಸಿಯೇ ಬಿಟ್ಟಿತ್ತು..!
ನಿಜ…, ಮಳೆ ಒಂದು ಪ್ರಣಯ ಕಾವ್ಯ ಇದ್ದ ರೀತಿ…! ಮನಸ್ಸಿನಲ್ಲಿ ನೂರಾರು ‘ಕನಸು’ಗಳನ್ನು ಕಾಣಲು ಪ್ರೇರಣೆ ನೀಡುತ್ತದೆ… ಆದರೆ ಇತ್ತೀಚಿನ ವಷ೯ಗಳಲ್ಲಿ ಮಳೆಗಾಲದಲ್ಲಿ ಭೂಕುಸಿತ…ನದಿ ಪ್ರವಾಹ… ಬೀಸುವ ಬಿರುಗಾಳಿಗೆ ಮರಗಳು ಉರುಳಿ ಬಿದ್ದು ಉಂಟಾಗುವ ಸಾವು -ನೋವುಗಳು… ಕೃಷಿ ಸಂಪತ್ತುಗಳ ಹಾನಿಗಳಿಂದ, ಮಳೆ ಎನ್ನುವಾಗ ಮನಸ್ಸಿನಲ್ಲಿ ಭಯ… ಕೋಪ.. ಉಂಟಾಗುತ್ತಿದೆ…! ಈ ಮಳೆಗಾಲ ಯಾವಾಗ ಮುಗಿಯುತ್ತದೆ ಎಂದು ಹೆಚ್ಚಿನ ಮಂದಿ ಕ್ಯಾಲೆಂಡರ್ಗಳನ್ನು ನೋಡುತ್ತಾ ಲೆಕ್ಕಚಾರ ಮಾಡುತ್ತಾರೆ..!ಏಕೆಂದರೆ ಇಂದಿನ ಮಳೆಕಾಲವು ಹಿಂದಿನ ಕಾಲದಂತೆ ತುಸು ರುಚಿ-ಸೌಂದರ್ಯ ಇರುವುದೇ ಇಲ್ಲ…!
.
ಒಂದೕರಡು ದಿನ ಮಳೆ ಸುರಿದು ಗಾಳಿ ಬೀಸುತ್ತಿದ್ದಂತೆ ಮರಗಳು ಉರುಳಿ ಬೀಳುವುದೇ ‘ವಿದ್ಯುತ್ ಕಂಬ ‘ಗಳನ್ನು ಹುಡುಕಿಕೊಂಡುವಾಗಿರುತ್ತದೆ…! ಆ ಕ್ಷಣವೇ ವಿದ್ಯುತ್ ಕಂಬಗಳು – ತಂತಿಗಳು ತುಂಡಾಗಿ, ವಿದ್ಯುತ್ ಸಂಪಕ೯ ಕಡಿತವಾಗುತ್ತದೆ… ಜನತೆ ‘ಕತ್ತಲೆ’ಯ ಬದುಕಿಗೆ ಹೊಂದಿಕೊಳ್ಳಬೇಕಾಗುತ್ತದೆ…! ನಂತರ ವಾರ – ತಿಂಗಳುಗಳ ಕಾಲ ವಿದ್ಯುತ್ ಇಲ್ಲಾದೇ ಇರುವ ಕಾರಣ, ಟಿ.ವಿ. – ಮೊಬೈಲ್ ಹಾಗೂ ಗೃಹ ಬಳಕೆಯ ವಿದ್ಯುತ್ ಉಪಕರಣಗಳಿಗೆ ‘ಅಗರಬತ್ತಿ’ ಉರಿಸಿ ಇಟ್ಟು, ನೂರು ವಷ೯ಗಳ ಹಿಂದಿನ ಕಾಲಕ್ಕೆ, ಆಧುನಿಕ ಯುಗದ ಜನತೆ ಮರಳಿ ಹೋಗಬೇಕಾಗುತ್ತದೆ…!
‘ಅತಿಯಾದ್ದರೇ ಅಮೃತವು ವಿಷ’ ಎನ್ನುವಂತೆ, ಸುರಿಯುತ್ತಿರುವ ಸುಂದರ ಮಳೆಯೂ, ರಣ ಮಳೆಯಾಗಿ ಅಭ೯ಟಿಸುತ್ತಿರುವ ಕಾರಣ ಜನ ಸಾಮಾನ್ಯರ ಸುಂದರ-ಮಧುರ ಕನಸುಗಳು ಸಹ ಈ ಮಳೆಯಲ್ಲಿ ಕೊಚ್ಚಿ ಹೋಗುತ್ತಿದೆ…!
ಈ ಹಿಂದೆ ಮಳೆಗಾಲದ ಮಜವೇ ಬೇರೆ ಇತ್ತು…! ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯುತ್ತಿದ್ದರೂ, ಯಾವುದೇ ಅನಾಹುತ ಸೃಷ್ಟಿಯಾಗುತ್ತಿರಲಿಲ್ಲ…. ಜನತೆ ಮಳೆಗಾಲದ ‘ಸುಖ’ ಕ್ಕೆ ತಯಾರಿ ನಡೆಸಿಕೊಳ್ಳವ ಸಿದ್ಧತೆಯಲ್ಲಿ ತೊಡಗಿಕೊಳ್ಳುತ್ತಿದ್ದರು…! ಗೃಹಗಳಲ್ಲಿ ನಿತ್ಯದ ಭೋಜನ ತಯಾರಿಗಾಗಿ, ಒಣ ಸೌದೆಗಳನ್ನು ಮೊದಲ ಕೆಲಸವಾಗಿ ಜೋಡಿಸಿಕೊಳ್ಳುತ್ತಿದ್ದರು… ನಂತರ ಮಳೆಗಾಲದ ಆಹಾರ ಪದ್ಧತಿಯೇ ಬದಲಾಗುತ್ತಿತ್ತು…! ನಾಟಿ ಕೋಳಿ… ಅಣಬೆ… ಕಣಿಲೆ….. ಸೊಪ್ಪುಗಳು… ಸುಟ್ಟು ತಿನ್ನುತ್ತಿದ್ದ ಹಲಸಿನ ಹಣ್ಣು ಬೀಜಗಳು… ಒಣ ಮೀನು…. ಜೊತೆಗೆ ಕಂಬಳಿ ಹಾಕಿಕೊಂಡು ಗೊರಕೆ ಬಾರಿಸುತ್ತಾ ಮಾಡುತ್ತಿದ್ದ ಮಧುರ ನಿದ್ರೆ…!ಈಗ ಈ ಎಲ್ಲಾವು ಕೇವಲ ಒಂದು ‘ನೆನಪು’ವಾಗಿ ಉಳಿದು ಬಿಟ್ಟಿದೆ…!
ಕಾಲ ಬದಲಾಗಿದೆ… ಜನರು ಬದಲಾಗಿದ್ದಾರೆ… ಹಿಂದಿನ ರೇಡಿಯೋ… ಟಿ.ವಿ… ಪತ್ರಿಕೆಗಳು ಜನತೆಗೆ ಬೇಕಾಗಿಲ್ಲ…! ಕೈಯಲ್ಲಿ ಒಂದು ಮೊಬೈಲ್ ಇದ್ದು, ಸಾಮಾಜಿಕ ಜಾಲತಾಣದ ಸಾಗರದಲ್ಲಿ ಮುಳುಗಿದ್ದರೇ, ತಾವು ನಿಂತಿದ್ದ ಸ್ಥಳದಲ್ಲಿಯೇ ‘ಭೂ ಕುಸಿತ’ ಉಂಟಾದ್ದರೂ, ಅವರ ಗಮನಕ್ಕೆ ಬರುವುದೇ ಇಲ್ಲ…!.
ಸುರಿಯುತ್ತಿರುವ ಮಳೆಯ ಭೀಕರತೆಯನ್ನು ನೋಡಿ, ನಾವು ಯಾವುದೇ ಕಾರಣಕ್ಕೂ ‘ಶಾಪ’ ಹಾಕಬಾರದು…! ಮಳೆಯ ತೀವ್ರತೆಯನ್ನು ಕಡಿಮೆ ಮಾಡುವಂತೆ ಭಗವಂತನಲ್ಲಿ ‘ಪ್ರಾಥ೯ನೆ’ ಮಾಡಬೇಕು ಅಷ್ಟೇ…! ಮಳೆ ಸುರಿದು ಪ್ರಕೃತಿಯಲ್ಲಿ ಉಂಟಾಗುವ ಎಲ್ಲಾ ಅನಾಹುತಗಳು ಭಗವಂತ, ಮನುಜ ಕುಲಕ್ಕೆ ಹೇಳುವ ‘ಪಾಠ’ವಾಗಿದೆ…! ಆದರೆ ಈ ಪಾಠ ಮನುಜ ಕುಲಕ್ಕೆ ತುಸು ಅಥ೯ವಾಗುತ್ತಿಲ್ಲ…! ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಲೇ ಇದ್ದಾರೆ…!
ಇಂದು ಸುರಿಯುವ ಈ ಮಳೆಯೇ.ನಾಳೆಯ ನಮ್ಮ ‘ಬದುಕು’ಗೆ ಉಸಿರುವಾಗಿರುತ್ತದೆ…!ಸರಿಯಾದ ಸಮಯಕ್ಕೆ ಮಳೆ ಸುರಿಯದೇ ಇದ್ದರೇ ಕುಡಿಯಲು -ವ್ಯವಸಾಯಕ್ಕೆ ನೀರು ದೊರೆಯದೇ, ಬರಗಾಲವೇ ಸೃಷ್ಟಿಯಾಗುತ್ತದೆ… ಆಗ ನಮ್ಮನ್ನು ಕಾಪಾಡಲು ಭಗವಂತನಿಗೂ ಸಾಧ್ಯವಿಲ್ಲ…!ಆದರಿಂದ ಈಗ ಸುರಿಯುತ್ತಿರುವ ಮಳೆಯ ನೋವಿನ ನಡುವೆಯೂ, ಸರ್ವ ಸಂಕಟಗಳನ್ನು ಮರೆತು ಬದುಕುನ್ನು ‘ ಎಂಜಾಯ್’ ಮಾಡೋಣ…!
ಸುರಿಯುತ್ತಿರುವ ಮಳೆ ವೇಳೆ, ಬೀಸುತ್ತಿರುವ ಗಾಳಿಗೆ ಕೈಯಲ್ಲಿರುವ ಛತ್ರಿ ಹಾರಿ ಹೋಗಬಹುದು… ಆಗ ಚಿಂತೆ ಮಾಡುವುದೇ ಬೇಡಾ…! ಮಳೆಯಲ್ಲಿ ಒದ್ದೆಯಾಗಿ ಹೆಜ್ಜೆ ಹಾಕೋಣ….! ಬಾಲ್ಯಕಾಲದ ಸವಿ ನೆನಪುಗಾಗಿ ‘ಕಾಗದ ದೋಣಿ’ಗಳನ್ನು ಮಾಡಿ, ನದಿಯಲ್ಲಿ ಹರಿಯಲು ಬಿಡೋಣ…! ಕೆಸರುಗೆದ್ದೆಗಳಲ್ಲಿ ಬಿದ್ದು – ಎದ್ದು ಸಂಭ್ರಮ ಪಡೋಣ…! ಕೊಲ್ಲಿಗಳಲ್ಲಿ ಮೀನು ಹಿಡಿದು ಹೆಚ್ಚಿನ ‘ ಮಸಾಲೆ’ ಹಾಕಿ ಸವಿಯೋಣ…! ‘ಕೆಂಪು ಎಣ್ಣೆ’ ಹಾಕುವ ಅಭ್ಯಾಸ ಇದ್ದರೇ, ಕೇವಲ ಚಳಿ ಓಡಿಸಲು ಒಂದೇರಡು ‘ಪೆಗ್’ ಹಾಕಿ…! ನೋ ಪ್ರಾಬ್ಲಂ… ! ಆದರೆ ಮಳೆಯಲ್ಲಿ ನಾವು ಕಂಡ ಯಾವುದೇ ಕನಸುಗಳು ಕೊಚ್ಚಿ ಹೋಗದೇ ರೀತಿ ಎಚ್ಚರ ವಹಿಸಲೇ ಬೇಕು…!
ಇಂದು ಕೇರಳದ ವಯನಾಡ್ ನಲ್ಲಿ ಪ್ರಕೃತಿ ಮುನಿದು ಭೀಕರ ದುರಂತ ಉಂಟಾಗಿರಬಹುದು… ನಾಳೆ ಮತ್ತೆ ಮತ್ತೊಂದು ದುರಂತ ಎಲ್ಲಿ ಎಂದು ಯಾರಿಗೂ ಗೊತ್ತಿಲ್ಲ…! ಆದರೂ ನಾವು ಮಧುರ ಕನಸುಗಳನ್ನು ಕಾಣುತ್ತಲೇ ನಿದ್ರಿಸಬೇಕು…! ಕನಸು ಕಾಣದೇ ನಿದ್ರಿಸುವ ಜೀವಗಳು, ‘ಜೀವಂತ ಹೆಣ’ಗಳು ಮಾತ್ರ….!!!.
ಐಗೂರು ಮೋಹನ್ ದಾಸ್, ಜಿ.
ಚೆನ್ನಾಗಿ ಬರೆದಿದ್ದೀರಿ . ಗುಡ್