ಕಾವ್ಯ ಸಂಗಾತಿ
ಇಂದಿರಾ ಪ್ರಕಾಶ್
ನನ್ನಮ್ಮ
ಅಮ್ಮ ನೀನೇಕೆ
ಕಾಣದೆ ಹೋದೆ
ತ್ಯಜಿಸಿ ಇಹಲೋಕ
ಪರಲೋಕದೆಡೆಗೆ
ಸಂಚಿತ ಕರ್ಮವ ಕಳೆದು
ಸತ್ಕರ್ಮವಾಗುಣಿಸಿ
ಕಾಯಕವ ಭಾಗಿಸಿ
ಅಣಿಗೊಳಿಸಿದೆ ಮನವ
ಸತ್ಯದ ಹಾದೀಲಿ ನೀ ನಡೆದ ವೈಖರಿ
ಆಹ್ವಾನ ನಿನಗೆ ಸ್ವರ್ಗದ ಪಥದಲ್ಲಿ
ಸಾಗಿದೆ ನಿನ್ನಾದಿಯು ಹೂವಿನ ರಥದಲಿ
ಪಡೆದಿಹೆ ನೀ ಜೀವನ್ಮುಕ್ತಿಯ ಪರಂಧಾಮದಲಿ
ನಿನ್ನಂತ ಅಮ್ಮನ ಪಡೆದಿದ್ದ ನಾ ಧನ್ಯೆ
ಅನವರತ ಎನ್ನುಸಿರಲೊಂದಾಗಿ ಇರುವೆ
—————-
ಇಂದಿರಾ ಪ್ರಕಾಶ್.