ಪಂಡಿತನೂ ಪರಿಪೂರ್ಣನಲ್ಲ….ಸುರೇಶ ಮಲ್ಲಾಡದ ಅವರ ಮಕ್ಕಳ ಕಥೆ

ಎಷ್ಟು! ಬಡಿದುಕೊಂಡರೂ ಮಹೇಶನ ತೆಲೆಗೆ ಅಕ್ಷರ ಅಂಟಲಿಲ್ಲ. ಅಪ್ಪ ಸಂಕಪ್ಪಗೆ ಹೇಳಿ ಹೇಳಿ ಸಾಕಾಗಿ ಹೋಗಿತ್ತು. ಮಗಳ ಜಾಣತನ ಅರಿತ ಸಂಕಪ್ಪ, ನೀಲಾಳನ್ನ ಸ್ಕೂಲ್ಗೆ ಹಾಕಿ ಶ್ರಮಪಟ್ಟು ವಿದ್ಯಾವಂತೆ ಬುದ್ಧಿವಂತಳನ್ನಾಗಿ ಮಾಡಿದ ಫೈನಾನ್ಸ್ ಕಂಪನಿಯಲ್ಲಿ ಕೆಲಸವೂ ಸಿಕ್ಕಿತು. ಒಳ್ಳೆ ಗುಣವುಳ್ಳ ಹುಡುಗನ ಜೊತೆ ಮದುವೆಯನ್ನೂ ಮಾಡಿಮುಗಿಸಿದ ಸಂಕಪ್ಪ. ಮಹೇಶ್ ಎಲ್ಲಿ ಕೆಲಸಕ್ಕೆ ಹೋದ್ರೂ ಬೈಸ್ಕೊಂಡೇ ಬರ್ತಿದ್ದ. ಕೊನೆಗೊಂದು ದಿನ ತಂದೆ ಈಜನ್ನಾದ್ರೂ ಕಲಿಯೋ.! ಒಂದು ದೋಣಿ ಕೊಡಿಸ್ತನಿ, ನದಿಆಚೆ ಹೋಗೋರ್ಗೆ ದಾಟಿಸುವ ಕೆಲಸವನ್ನಾದ್ರೂ ಮಾಡೋ,, ತಂದೆ ಕೆಲಸ ಕೊಡಿಸುವ ಜೊತೆಗೆ ಬೈದಂತಿತ್ತು. ಸಂಕಪ್ಪ್ಗೆ ಗೊತ್ತಿರಲಿಲ್ಲ ಮಹೇಶಾ ಬಾಲ್ಯದಲ್ಲೇ ಓದಕ್ಕೆ ಹೋಗ್ತೇನೆಂದು ಹೂವಿನ ತೋಟದಲ್ಲಿದ್ದ ಬಾವಿಯಲ್ಲಿ ನೆಗೆದು, ನೆಗೆದು, ಈಜನ್ನ ಕಲ್ತಿದ್ದ, ಆಯ್ತಪ್ಪ ದೋಣಿಯನ್ನ ಕೊಡ್ಸು ನಂಗೆ ಈಜು ಬರ್ತದೆ, ಎಂದಾಗ ಸಂಕಪ್ಪ್ಗೆ ಮಹಾದಾಶ್ಚರ್ಯ.! ಮಹೇಶ್’ಗೆ ದೋಣಿ ಕೊಡಸಿದ. ಮಹೇಶ ನಿತ್ಯ ನದಿ ದಾಟುವವರಿಗೆ ಸೇತುವೆಯಾದ, ಅವರು ಕೊಡುತ್ತಿದ್ದ ನಾಕುಕಾಸಿಂದ, ಅಕ್ಷರ ಬರದಿದ್ದರೂ ಅನಕ್ಷರಸ್ಥನ ಬದುಕು ಹಸನಾಯ್ತು. ಮಹೇಶನ ಊರೊಳಗೆ ಮಹಾಜ್ಞಾನಿ ಜ್ಞಾನಮೂರ್ತಿ ಪಂಡಿತಾರಾಧ್ಯನಿದ್ದ, ನಿತ್ಯ ಹತ್ತಾರು ಊರುಗಳಿಗೆ ಹೋಗಿ ತನ್ನ ಪಾಂಡಿತ್ಯವನ್ನ, ಪ್ರವಚನಗಳನ್ನ ನೀಡುತ್ತಿದ್ದ. ವೇದ, ಶಾಸ್ತ್ರಗಳನ್ನ ಅರೆದು ಕುಡಿದವನಂತೆ, ಅರಳು ಹುರಿದಂತೆ ಮಾತನಾಡುತ್ತಿದ್ದ, ತನ್ನ ಪಾಂಡಿತ್ಯದಿಂದ ಸುತ್ತ ಹತ್ತಾರು ಹಳ್ಳಿಗಳಲ್ಲಿ ಹೆಸರು ಮಾಡಿದ್ದ. ಉತ್ತುಂಗ ಜ್ಞಾನವೊಂದಿದ್ರೆ ಜೀವ್ನಾ, ಗೆಲ್ಲಬಹ್ದು, ಸಾವಿಲ್ದೆ ಬದುಕಬಹ್ದು. ತನ್ನ ಪಾಂಡಿತ್ಯಕ್ಕೆ ತಾನೇ ಹೆಮ್ಮೆಪಟ್ಟುಕೊಳ್ಳುತ್ತಿದ್ದ. ಮನದಲ್ಲಿ ತನ್ನ ಭುಜವನ್ನ ತಾನೇ ಚಪ್ಪರಿಸಿಕೊಳ್ಳುತ್ತಿದ್ದ. ನಿತ್ಯ ಮಹೇಶನ ದೋಣಿಯಲ್ಲಿ ನದಿ ದಾಟಿ ಸುತ್ತಮುತ್ತಲ ಹಳ್ಳಿಗಳಲ್ಲಿ ಪೂಜೆ-ಪುನಸ್ಕಾರ, ಪ್ರವಚನಗಳನ್ನ ನೀಡ್ತಿದ್ದ. ಅನಕ್ಷರಸ್ಥನಾಗಿ ಇದ್ದುಬಿಟ್ಟೆಯಲ್ಲ ಏನೇನು ಕಲಿಯಲಿಲ್ಲ ನನ್ನನ್ನು ನೋಡಿ ಕಲಿ ನನಗೆ ಅಷ್ಟ ದಿಕ್ಕುಗಳ ಪರಿಚಯವಿದೆ, ದಿಕ್ಕುಗಳನ್ನ ಬದಲಿಸಬಲ್ಲ ಪಾಂಡಿತ್ಯ ನನಗಿದೆ. ಎಂದು ಕೊಚ್ಚಿಕೊಳ್ಳುತ್ತಲೇ ಇದ್ದ, ನಿತ್ಯ ಮಹೇಶನ ಅಜ್ಞಾನವನ್ನ ಎಲ್ಲರಿಗೂ ಎತ್ತಿ ತೋರಿಸುತ್ತಿದ್ದ. ಒಂದು ದಿನ ನದಿಯಲ್ಲಿ ದೋಣಿ ಸಾಗುತ್ತಿದ್ದಾಗ ನದಿಯಲ್ಲಿ ನೆರೆ ಜಾಸ್ತಿಯಾಗಿ ದೋಣಿ ಮುಳುಗುವ ಪರಿಸ್ಥಿತಿ ಎದುರಾಯ್ತು, ಯಾರ್ಯಾರಿಗೆ ಈಜು ಬರುತ್ತೆ, ಗಾಬರಿಯಲ್ಲಿ ಮಹೇಶ್, ದೋಣಿ ಮುಳ್ಗಲಿದೆ, ನೀರಿನ ಸೆಳೆತ ಜಾಸ್ತಿ ಆಗ್ತಿದೆ. ದೋಣಿ ಮಗುಚಬಹುದು, ಯಾರ್ಯಾರಿಗೆ ಈಜು ಬರುತ್ತೆ, ಕೇಳಿದಾಗಕ್ಷಣ ದೋಣಿಯಲ್ಲಿದ್ದವರೆಲ್ಲ ಹೆದರಿ ನದಿಗೆ ಹಾರಿ ಈಜತೊಡಗಿದರು. ಪಂಡಿತ ಗೋಳಾಡತೊಡಗಿದ, ನನ್ಗೆ ಈಜು ಬರೋದಿಲ್ಲ. ಮಹೇಶ್ ನನ್ನ ಕಾಪಾಡು ಎಂದು ಅಂಗಲಾಚಿದ.
ಎಲ್ಲ ಬಲ್ಲವರಿಲ್ಲ..
ಬಲ್ಲವರು ಬಹಳಿಲ್ಲ..
ಎಲ್ಲವನ್ನೂ ಬಲ್ಲವರು ಇಲ್ಲವೇ ಇಲ್ಲ..
ಎಂಬಂತೆ ಪ್ರತಿಯೊಬ್ಬರಲ್ಲೂ ಒಂದೊಂದು ಕೊರತೆ ಇದ್ದೇಯಿರುತ್ತದೆ, ನಿಮ್ಮ ಪಾಂಡಿತ್ಯ ನಿಮನ್ನ ಈ ದಿನ ಬದುಕಿಸಲು ಸಾಧ್ಯವಿಲ್ಲ. ನನ್ನ ಈಜು ನಿಮ್ಮನ್ನ ಬದುಕಿಸಬಲ್ಲದು. ಎಂದು ಪಂಡಿತರನ್ನ ತಬ್ಬಿ, ನದಿಗೆ ಹಾರಿ, ದಡದತ್ತ ಈಜತೊಡಗಿದ ಮಹೇಶ..


Leave a Reply

Back To Top