ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ ಸಂಕೇಶ್ವರ
ಗಜಲ್
ನಕ್ಷತ್ರ ಮಾಲೆಯನು ಚಂದಿರ ಮುಡಿಸಿದ ಇರುಳ ಮುಡಿಗೆ
ಬೆಳದಿಂಗಳ ಹಾಲ್ನೊರೆಯ ಧಾರೆ ಸುರಿಯಿತು ಇಳೆಯ ಉಡಿಗೆ
ಕಾತರಿಸಿ ಕಾದು ನಲಿದಿದೆ ಚಕೋರ ಸಂತಸದ ಹೊನಲಲಿ
ಪ್ರೇಮ ರಾಗವ ನೀಡಿದೆ ತಂಗಾಳಿ ಜಕ್ಕವಕ್ಕಿಯ ಹಾಡಿಗೆ
ಚಂದ್ರಿಕೆಯ ಚೆಲುವಿನಲಿ ಮಿಂದು ಅಮಲೇರಿವೆ ತರುಮರ ಗಿರಿಕಾನು
ಕಿರು ಹಣತೆಯೊಂದು ಮಂದದಿ ಬೆಳಕು ಸೂಸಿದೆ ಪ್ರೀತಿಯ ಗೂಡಿಗೆ
ನಶೆ ತುಂಬುತಿದೆ ಅರಳಿ ಘಮಘಮಿಸಿ ರಾತ್ರಿ ರಾಣಿ ಹೂಗೊಂಚಲು
ನಿನ್ನ ನೆನಪಲಿ ಕರಗಿ ಹೋಗುತಿದೆ ಕಂಗಳ ಕಾಡಿಗೆ
ಮಧುರ ಗಳಿಗೆ ಮೆಲ್ಲನೆ ಸರಿಯುತಿದೆ ಚಲಿಸುವ ಮೋಡದಂತೆ
ಬೇಗಂ ಳ ಮನ ಹಾತೊರೆದಿದೆ ನಲ್ಲ ನಿನ್ನೊಲವಿನ ನುಡಿಗೆ..
ಹಮೀದಾ ಬೇಗಂ ದೇಸಾಯಿ ಸಂಕೇಶ್ವರ
ಬೆಳದಿಂಗಳಂಥ ಗಝಲ್
ಮೆಚ್ಚುಗೆಗೆ ಧನ್ಯವಾದಗಳು ತಮಗೆ..
ಹಮೇದಾಬೇಗಂ.
ವಾಹ್ ಸುಂದರವಾಗಿದೆ ಹಮಿದಾ
ಅಭಿನಂದನೆಗಳು
ಸ್ಪಂದನೆಗೆ ಧನ್ಯವಾದಗಳು..
ಹಮೀದಾಬೇಗಂ..