ಪಾಲಾಕ್ಷ ಗೌಡ ಕೆ.ಎಲ್. ಕವಿತೆ-ಕೊಂದಳು ಕೊಂದಳು

ಬೆಟ್ಟ ಬೆಂದಿತ್ತು,
ನದಿಯು ಬತ್ತಿತ್ತು,
ಮಾನವನ ಮೇಳಕ್ಕೆ
ನಿಸರ್ಗವು ಮುನಿಸಿಕೊಂಡಿತ್ತು!

ಅವಳೋ ಕೋಪದಲ್ಲಿ ರಾಕ್ಷಸಿ
ಸಾಕಗಿತ್ತು ಅವಳಿಗೂ ಎಲ್ಲರನ್ನು ರಕ್ಷಿಸಿ!

ಮಳೆಯ ರೂಪದಲ್ಲಿ ಸುರಿದಳು,
ಬೆಟ್ಟಕ್ಕೆ ಬಗ್ಗು ಎಂದಳು,
ನದಿಗೆ ಹಿಗ್ಗು ಎಂದಳು,
ಕೊಂದಳು,ಕೊಂದಳು,
ಊರು, ಸೂರೆಲ್ಲವನ್ನು ಕೊಂದಳು!

ಕೋಪ ಬಂದಾಗ ಅವಳಿಗೆ ಚೂರು ಕುರುಡು,
ಅವಳ ಕಾಡಿಸಿದವರೆಲ್ಲ ಆದರೂ ಪಾರು
ಸಿಕ್ಕ ಅಮಾಯಕರೆಲ್ಲ ಚೂರು, ಚೂರು!

ಅವಳಿಗೇನು ಇಲ್ಲ ಹಾನಿ,
ಇಲ್ಲಿದ್ದ ಬೆಟ್ಟ ಮುಂದೆಲ್ಲೋ ಹುಟ್ಟುವುದು
ಹೀಗೆ ಹರಿಯುತ್ತಿದ್ದ ನದಿ,‌ ಹಾಗೆಲ್ಲೋ ಹರಿವುದು!

ಅವಳ ಆಯುಧಗಳೆಲ್ಲವು ಮರು ಹುಟ್ಟವವು
ಮತ್ತದೆ ನಿಸರ್ಗದ ಸೌಂದರ್ಯವ ಕಾಪಾಡುವವು!

ನಾಶವಾಗುವವನು ಮಾನವ,
ನಿಸರ್ಗದ ಜೊತೆ ಗೆಲ್ಲಲಾಗದ ಯುದ್ದ ಸಾರಿ ನಿಂತ ನರ ಮಾನವ!

———————

Leave a Reply

Back To Top