ಕಾವ್ಯ ಸಂಗಾತಿ
ವ್ಯಾಸ ಜೋಶಿ
ಸೆರಗು


ಹಸುಗೂಸಿನ ರಕ್ಷಣೆಗೆ,
ಅಮ್ಮನ ಮಮತೆಯ
ಬೆಚ್ಚಗಿನ ಸೆರಗು.
ಪ್ರೀತಿಯ ಹೇಳಲು,
ಅಲವತ್ತು ಕೊಂಡಾಗ
ಹಿಂದೆ ತಿರುಗಿಸಿದ್ದು ಸೆರಗು.
ಸುಮುಹುರ್ತೇ ಸಾವಧಾನ,
ಇಬ್ಬರನೂ ಪರಸ್ಪರ
ಗಂಟು ಹಾಕಿದ್ದು ಸೆರಗು.
ಪರಿಣಯದ ಉತ್ತುಂಗದಿ,
ವಲವಿನ ಹಾಸಿಗೆಯು
ಮಡದಿಯ ಸೆರಗು.
ಜೀವನದ ಚಿರ ನಿದ್ರೆಗೆ
ಕೊನೆಯ ಆಶ್ರಯ
ಭೂತಾಯಿಯ ಸೆರಗು.
ಜೀವನದಿ ಸುಖದ
ಪ್ರತಿ ಮೆಟ್ಟಲಿಗೂ ಬರುವ
ಸುಂದರ ಸ್ವರ್ಗವೇ ಸೆರಗು.
ವ್ಯಾಸ ಜೋಶಿ.

ವ್ಯಾಸ ಜೋಶಿ.