ಕಾವ್ಯ ಸಂಗಾತಿ
ಮಂಜುಳಾ ಪ್ರಸಾದ್ ದಾವಣಗೆರೆ
ಜಗವೆಲ್ಲಾ ಒಂದಾದರೆ..
ಊರಿಗೆ ಊರೇ ಇಲ್ಲ.
ಯಾರು ಸತ್ತರು,
ಯಾರು ಬದುಕಿಹರು
ಇಲ್ಲಿ ಕೇಳುವವರಿಲ್ಲ.
ನಿಸರ್ಗದ ಆಟದ ಮುಂದೆ
ನಾವೇನೂ ಅಲ್ಲವೇ ಅಲ್ಲ!
ಆದರೂ ನಾವೇ ಮೇಲೆಂದು
ಬೀಗುವಿರಲ್ಲ!
ಬಿಟ್ಟುಬಿಡು ನಾನು
ನನ್ನದೆನ್ನುವ ಸೊಲ್ಲ
ಜರಿಯಬೇಕೆಂದಿಲ್ಲ
ಗುಡ್ಡ ನಮ್ಮ ಮೇಲೆಲ್ಲಾ,
ಇಂದಲ್ಲ ನಾಳೆ
ಮಣ್ಣಲ್ಲಿ ಮಣ್ಣಾಗೇ
ಹೋಗುವೆವಲ್ಲ.
ಮತ್ತೇಕೆ ಒಣಪ್ರತಿಷ್ಠೆಯ
ಬಿಡುವುದಿಲ್ಲ?
ನಾನು ನನ್ನದು
ಅನ್ನೋದೇನಿದ್ದರೂ
ಅದು ನಿನ್ನದಲ್ಲ!
ನಾವು ನಮ್ಮದು ಅನ್ನೋದೇ
ಬಾಳಿನ ಬೇವು ಬೆಲ್ಲ!
ಒಗ್ಗಟ್ಟಿರಲಿ..
ಒಮ್ಮತವಿರಲಿ..
ದ್ವೇಷ ಹಿಂಸೆಯ
ಕಿಡಿ ತಾಗದಿರಲಿ..
ನಿಸರ್ಗದ ರಕ್ಷಣೆಯ
ಭಾರವಿರಲಿ..
ಒಳಿತು ಮಾಡುವ
ಮನಸ್ಸಿರಲಿ..
ಮನುಜ ಮನುಜರ
ನಡುವಿನ ಬಾಂಧವ್ಯ
ಚಿಗುರುತಿರಲಿ..
ಹಿಂಸೆಗೊಂದು ಕೊನೆಯಿರಲಿ.
ಜಗದಗಲ
ಅಹಿಂಸೆ ಶಾಂತಿ
ತುಂಬಿರಲಿ..
ನಿಸರ್ಗದೊಳು ಕರುಣೆಯಿರಲಿ
ಆಗ…
ನಿಸರ್ಗವೂ ನಮ್ಮ
ಜೊತೆಯಾದೀತು..
ಕ್ರೌರ್ಯ ಕೊನೆಯಾದೀತು.
ಶಾಂತಿ ಮರಳಿ ಬಂದೀತು..
ಜಗದ ನಗುವರಳಿ
ಹೂ ಚಿಗುರೀತು!!
ಮಂಜುಳಾ ಪ್ರಸಾದ್ ದಾವಣಗೆರೆ
Nice
ಉತ್ತಮ ಸಂದೇಶ ಕೊಡುವ kavan
ಪ್ರಕೃತಿಯ ಮಡಿಲಲ್ಲಿ ನಾವೆಲ್ಲ ಕೈಗೊಂಬೆಗಳು. ಕ್ಷಣಾರ್ಧದಲ್ಲಿ ಮಣ್ಣಲ್ಲಿ ಮಣ್ಣಾದ ಆ ಜೀವಿಗಳು ಅದೆಷ್ಟು ಕನಸುಗಳನ್ನು ಕಂಡಿರಬಹುದು? ಕವನ ತುಂಬಾ ಚೆನ್ನಾಗಿದೆ ಮೇಡಂ.