ಕಾವ್ಯ ಸಂಗಾತಿ
ಗಾಯತ್ರಿ ಎಸ್ ಕೆ
ಸುದಿನ
ಮನವೊಲಿದಿದೆ ಪ್ರಕೃತಿಯ
ಸುಂದರವಾದ ನೈಜತೆಯ
ಅರಳಿದ ಸುಂದರತೆಯ
ಹೊಂಗಿರಣದ ನಾವೀನ್ಯತೆಯ..
ಸೃಷ್ಟಿಯ ಸೊಬಗಿದು
ಸೊಗಸಾದ ವಾತಾವರಣವಿದು
ಕಂಗಳಿಗೆ ಹಬ್ಬವಿದು
ಕವಿಯ ಕಲ್ಪನೆಯಿದು..
ಬಣ್ಣನೆಯ ಅಂದ
ಸೊಗಸಾದ ಚಂದ
ಮನಸ್ಸಿಗೆ ಕೊಡುವ ಆನಂದ
ಮುಂಜಾನೆಯ ಸೂರ್ಯ ಚೆಂದ..
ಹರಿವ ನೀರು ತಣ್ಣನೆಯ ಗಾಳಿ
ಸೊಂಪಾದ ಸುಳಿಗಾಳಿ
ನೋಟದ ಉತ್ಸಾಹದಲಿ
ಸಂತಸದ ಸುದಿನದಲಿ..
ಗಾಯತ್ರಿ ಎಸ್ ಕೆ