ಲಾಕ್ಡೌನ್ ತೆರವಿನ ಪರಿಣಾಮಗಳು
ರೇಶ್ಮಾ ಗುಳೇದಗುಡ್ಡಾಕರ್
ಕೊರೊನಾ ಸಾವಿರದ ಗಡಿದಾಟಿದೆ ಇಂತ ಆತಂಕದ ಸ್ಥಿತಿ ಯಲ್ಲಿ ಸರ್ಕಾರ ಲಾಕ್ಡೌನ್ ಹಂತ ಹಂತವಾಗಿ ತೆರವು ಗೊಳಿಸುವದು ಎಷ್ಟು ಸರಿ?
ಸಾರಿಗೆ ಸಂಚಾರ ಆರಂಭವಾದರೆ ಸಾಮಾಜಿಕ ಅಂತರ ಸಾದ್ಯವೆ ನಮ್ಮ ಜನರ ಇಗಿನ ಮನಸ್ಥಿತಿ ಯಲ್ಲಿ ರಾಜ್ಯದ ಲ್ಲಿ ?ಶಾಲೆ ಪುನಾರಂಭ ಎರಡು ಪಾಳಿಯಲ್ಲಿ ಮಾಡಲು ಸಚಿವರು ಹೇಳಿದರು ಇಂತಹ ಸಂಧರ್ಭದಲ್ಲಿ
ಕೊರೊನಾ ತಡೆಗಟ್ಟಲು ಸೂಕ್ತ ವ್ಯವಸ್ಥೆ ಇದೆಯೇ ಶಾಲೆಯಲ್ಲಿ ಎಂಬುದನ್ನು ಪರೀಶೀಲಸ ಬೇಕು . ಶಾಲಾ ಅವರಣದಲ್ಲಿ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾದ್ಯವೇ ಎಂಬ ಪ್ರಶ್ನೆ ಉದ್ಬವಾಗುತ್ತದೆ . ಪೂರ್ವ ಪ್ರಾಥಮಿಕ ಮಕ್ಕಳ ಆರೋಗ್ಯ ಭದ್ರತೆಗೆ ಸ್ಯಾನಿಟೈಸರ್ ಬಳಕೆ ನೆಚ್ಚಿಕೊಂಡು ಮಕ್ಕಳನ್ನು ಕಾಪಾಡಲು ಸಾದ್ಯವಿಲ್ಲ
ಇಷ್ಟು ದಿನ ಕಷ್ಟ ಪಟ್ಟು ಹಿಡಿದಿಟ್ಟ ಮಕ್ಕಳು ಒಮ್ಮೆಲೆ ಶಾಲೆಗೆ ಪ್ರವೇಶಿಸುತ್ತವೆ.ಅಲ್ಲಿ ಅವರದ್ದೆ ಆದ ಪ್ರಪಂಚ ರಚನೆಯಾಗುತ್ತದೆ ಮಕ್ಕಳು ಆಟ ಆಡುವಾಗ ,ಊಟಮಾಡುವಾಗ ತಮ್ಮದೇ ಆದ ಗುಂಪನ್ನು ರಚಿಸಿಕೊಂಡು ನಲಿಯುವ ಮಕ್ಕಳು ಬ್ರೇಕ್ ಸಮಯದಲ್ಲಿ ಒಬ್ಬರಿಗೊಬ್ಬರು ಕೈಹೀಡಿದು ಎಳೆದಾಡುತ ಓಡಾಡುವ ಚಿಣ್ಣರನ್ನು ಸಾಮಾನ್ಯ ಸಮಯದಲ್ಲೇ ನಿಗ್ರಹಿಸುವದು ಶಿಕ್ಷಕರಿಗೆ ಸವಾಲಿನ ಸಂಗತಿ . ಇನ್ನು ಇಂತಹ ಕಠಿಣ ಸಂದರ್ಭದಲ್ಲಿ ಪಾಲನೆ ಸಾದ್ಯವೇ ಎಂಬುದನ್ನು ಅವಲೋಕಿಸ ಬೇಕಿದೆ . ಕೊಠಡಿಯಲ್ಲಿ ಅಂತರ ಸಾದ್ಯ ಆದರೆ ಆವರಣದಲ್ಲಿ ಪಾಲಿಸುವದು ಕಷ್ಟ ದ ಸಂಗತಿ .
ಇಂತಹ ಸಮಯದಲ್ಲಿ ಶಾಲೆ ಪುನರಾರಂಭವಾದರೆ .ವೈದ್ಯಕೀಯ ಸಿಬ್ಬಂದಿಯ ಅಗತ್ಯ ಮತ್ತು
ಪ್ರತಿ ತಾಲೂಕಿನಲ್ಲಿ ಮಕ್ಕಳ ತಜ್ಞ ವೈದ್ಯರು ಇದ್ದರಾಯೇ? ಎಂಬುದನ್ನು ಸರ್ಕಾರ ಪರೀಕ್ಷಸ ಬೇಕು .ಇಷ್ಟುದಿನ ನಮ್ಮನ್ನು ಕಾದ ಪೋಲಿಸ್ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿಗಳು ಕೊರೊನಾ ಪೀಡಿತರಾದರು! .ಹೀಗಿರುವಾಗ ಇನ್ನು ಈ ಸರದಿ ಶಿಕ್ಷಕರು ,ಮಕ್ಕಳು,ಶಾಲಾ ಸಿಬ್ಬಂದಿದಾಗುತ್ತದೆ ಹೊರತು ಶೈಕ್ಷಣಿಕ ಆರಂಭವಾಗುವದಿಲ್ಲ .
ಕೊರೊನಾ ದೆಸೆಯಿಂದ ಕೆಲಸ ಕಳೆದುಕೊಂಡು ನಗರಗಳಿಂದ ಆಗಾಧ ಪ್ರಮಾಣದಲ್ಲಿ ಜನರು ತಮ್ಮ ಸ್ವಗ್ರಾಮಗಳಿಗೆ ತೆರಳಿದ್ದಾರೆ.ಈ ಗ್ರಾಮಗಳಲ್ಲಿಯೂ ಶಾಲೆಗಳಿವೆ,ಹೊಸ ಹೊಸ ದಾಖಲಾತಿಯೂ ಶೈಕ್ಷಣಿಕ ವರ್ಷದಲ್ಲಿ ಅಗುತ್ತದೆ ಮಕ್ಕಳ ಸಂಖ್ಯೆ ಸಾಮಾನ್ಯ ವಾಗಿ ಏರುತ್ತದೆ .ಅಗ ಇಲ್ಲಿನ ಮಕ್ಕಳ, ಶಿಕ್ಷಕರ ಆರೋಗ್ಯ ವು .ನಾವು ಗಮನಿಸಬೇಕು ಈಗ ನಗರಗಳಿಗಿಂತ ಜನರ , ಪ್ರಮಾಣ ಗ್ರಾಮದಲ್ಲಿ ಹೆಚ್ಚಿದೆ .ಇಗ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ,ಅವುಗಳ ಸಾಮರ್ಥ್ಯ, ಅಲ್ಲಿ ವೈದ್ಯಕೀಯ ಸೌಲಭ್ಯ ಎಲ್ಲವು ಮುಖ್ಯ ಪಾತ್ರ ವಹಿಸುತ್ತವೆ .ಇಗಿನ ಪರಿಸ್ಥಿತಿ ಯಲ್ಲಿ ತಾಲೂಕು ಆಸ್ಪತ್ರೆಗಳಲ್ಲೆ ವೈದ್ಯ ರು ಲಭ್ಯವಿಲ್ಲ ಕೊರೊನಾ ಕಾರಣದಿಂದ ಇಂತಹ ಸಂದರ್ಭಗಳಲ್ಲಿ ಗ್ರಾಮೀಣ ಮಕ್ಕಳ ಆರೋಗ್ಯ ಕಾಪಾಡುವದು ಹೇಗೆ?
> ಇದನ್ನು ಗಂಭಿರವಾಗಿ ಯೋಚಿಸ ಬೇಕಿದೆ. ಲಾಕ್ಡೌನ್ ತೆರವಿಗೆ ಚಿಂತಿಸುವದಕ್ಕಿಂತ .ಕೊರೊನಾ ಬಗ್ಗು ಬಡಿಯಲುಚಿಂತಿಸ ಬೇಕು .ದಿನೆ ದಿನೆ ವ್ಯಾಪಕವಾಗಿ ಹರಡುತ್ತಿರುವ ಸೋಂಕು,ಒಂದೆಡೆ ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ಮಾರ್ಕೇಟ್, ಅಂಗಡಿ, ಯಲ್ಲಿ ಮುಗಿ ಬಿದ್ದ ಜನ . ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಲಾಕ್ಡೌನ್ ಪರಿಣಾಮಕಾರಿ ಯಾಗಿ ಜಾರಿಗೊಳಿಸುವ ಅಗತ್ಯವಿದೆ.
ತೆರವು ಮತ್ತಷ್ಟು ಕೊರೊನಾ ಅಟ್ಟಹಾಸಕ್ಕೆ ದಾರಿ ಮಾಡಿದಂತಾಗುತ್ತದೆ.ಮುಂದಾಗುವ ಅಪಾಯವನ್ನು ಗಮನದಲ್ಲಿ ಇಡ್ಟುಕೊಂಡು ನಿಯಮ ರೂಪಿಸಿ ಜನರ ಬದುಕನ್ನು ಉಳಿಸ ಬೇಕದ ತುರ್ತು ಅಗತ್ಯವಿದೆ ಇಲ್ಲವಾದಲ್ಲಿ ರಾಜ್ಯದ ಲ್ಲಿ ಮಹಾ ಮರಣ ಮೃದಂಗ ಬಾರಿಸುವದರಲ್ಲಿ ಸಂಶಯವಿಲ್ಲ .
( ಬರಹವನ್ನು ನೀವು ಓದುವ ಸಮಯದಲ್ಲಿ ರಾಜ್ಯದಾದ್ಯಂತೆಕೊರೋನಾ ಸೋಂಕಿತರ ಸಂಖ್ಯೆ ಮಮತ್ತಷ್ಟು ಏರಿಕೆಯಾಗಿದೆ)
*****************************